ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು

TV9kannada Web Team

TV9kannada Web Team | Edited By: Rajesh Duggumane

Updated on: Feb 12, 2022 | 6:00 AM

ಲತಾ ಅವರ ಬಯೋಪಿಕ್ ಸಿದ್ಧಪಡಿಸೋಕೆ ಅನೇಕ ನಿರ್ಮಾಪಕರು ಪ್ಲ್ಯಾನ್​ ರೂಪಿಸಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ, ಆನಂದ್​ ಎಲ್.​ ರಾಯ್​, ರಾಕೇಶ್​ ಓಂ ​ಪ್ರಕಾಶ್ ಮೆಹ್ರಾ ಮೊದಲಾದವರು ಈ ರೇಸ್​ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು
ಬನ್ಸಾಲಿ-ಲತಾ ಮಂಗೇಶ್ಕರ್​-ಆನಂದ್​

ಬಾಲಿವುಡ್​ ಸೇರಿ ಬಹುತೇಕ ಚಿತ್ರರಂಗದಲ್ಲಿ ಈಗ ಬಯೋಪಿಕ್ (Boipic)​ ಟ್ರೆಂಡ್ ಜೋರಾಗಿದೆ. ಚಿತ್ರರಂಗ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಕುರಿತು ಬಯೋಪಿಕ್ ಮಾಡಲಾಗುತ್ತಿದೆ. ಇದರಲ್ಲಿ ಬಹುತೇಕರು ಯಶಸ್ಸು ಕಂಡಿದ್ದಾರೆ. ಇನ್ನೂ ಕೆಲವರು ಸೋತಿದ್ದಾರೆ. ಒಂದು ವ್ಯಕ್ತಿಯ ಜೀವನದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಶ್ರಮ, ತಾಳ್ಮೆ ಬೇಕು. ಹೇಳುವ ವಿಚಾರದಲ್ಲಿ ಕೊಂಚ ವ್ಯತ್ಯಾಸವಾದರೂ ಜನರು ಸಿಟ್ಟಿಗೇಳಬಹುದು. ಈಗ ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಕುರಿತು ಬಯೋಪಿಕ್​ ಮಾಡಲು ಸಿದ್ಧತೆ ನಡೆದಿದೆ ಎಂಬ ಮಾತು ಬಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಇದರ ಹಕ್ಕು ಪಡೆದುಕೊಳ್ಳಲು ಅನೇಕ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಆಗಿದೆ.

ಲತಾ ಮಂಗೇಶ್ಕರ್ ಅವರು ಫೆ.6ರ ಮುಂಜಾನೆ ಮೃತಪಟ್ಟರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಲತಾ ಮಂಗೇಶ್ಕರ್ ನಿಧನ ವಾರ್ತೆ ಸಾಕಷ್ಟು ಜನರಿಗೆ ದುಃಖ ತಂದಿದೆ. 75 ವರ್ಷಗಳ ವೃತ್ತಿ ಜೀವನದಲ್ಲಿ ಅವರು 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇಷ್ಟು ಗೀತೆಗಳನ್ನು ಹಾಡುವುದು ಅಷ್ಟು ಸುಲಭದ ಮಾತಲ್ಲ. ಅವರು ಕನ್ನಡ, ಹಿಂದಿ ಸೇರಿ ಸುಮಾರು 36 ಭಾಷೆಗಳಲ್ಲಿ ಹಾಡಿದ್ದಾರೆ. ಅವರ ಕಂಠವನ್ನು ಇಷ್ಟಪಡದವರೇ ಇಲ್ಲ ಎಂದರೂ ತಪ್ಪಾಗಲಾರದು. ಲತಾ ಅವರು ಮದುವೆ ಆಗಿರಲಿಲ್ಲ. ಅವಿವಾಹಿತೆಯಾಗಿಯೇ ಅವರು ನಿಧನ ಹೊಂದಿದರು. ಇದೆಲ್ಲ ವಿಚಾರವನ್ನು ತೆರೆಮೇಲೆ ತರೋಕೆ ಹಲವರು ಆಸಕ್ತಿ ತೋರುತ್ತಿದ್ದಾರೆ.

ಲತಾ ಅವರ ಬಯೋಪಿಕ್ ಸಿದ್ಧಪಡಿಸೋಕೆ ಅನೇಕ ನಿರ್ಮಾಪಕರು ಪ್ಲ್ಯಾನ್​ ರೂಪಿಸಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ, ಆನಂದ್​ ಎಲ್.​ ರಾಯ್​, ರಾಕೇಶ್​ ಓಂ ​ಪ್ರಕಾಶ್ ಮೆಹ್ರಾ ಮೊದಲಾದವರು ಈ ರೇಸ್​ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಇವರಲ್ಲಿ ಯಾರಿಗೆ ಇದರ ಹಕ್ಕು ಸಿಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಸಿನಿಮಾ ಕೆಲಸಗಳಲ್ಲಿ ಸಂಜಯ್​ ಲೀಲಾ ಬನ್ಸಾಲಿ ಕೆಲಸವನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು. ಅವರು ನೀಡಿದ ಎಲ್ಲಾ ಸಿನಿಮಾಗಳು ಹಿಟ್​ ಆಗಿವೆ. ಅವರು 10 ವರ್ಷಗಳ ಹಿಂದೆಯೇ ಲತಾ ಜೀವನ ಆಧರಿಸಿ ಸಿನಿಮಾ ಮಾಡೋಕೆ ಪ್ಲ್ಯಾನ್​ ರೂಪಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಅದು ನಿಜವಾಗುವ ಸಂದರ್ಭ ಬಂದಿದೆ. ಬನ್ಸಾಲಿ ಈ ಚಿತ್ರದ ಹಕ್ಕು ಪಡೆಯಲು ಹೆಚ್ಚು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ಲತಾ ಜೀವನವನ್ನು ತೆರೆಮೇಲೆ ತರಬೇಕು ಎಂದರೆ ಅವರ ಕುಟುಂಬ ಇದಕ್ಕೆ ಅನುಮತಿ ಕೊಡಬೇಕು. ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಆದರೆ, ಇದಕ್ಕೆ ಕುಟುಂಬದವರು ಅನುಮತಿ ನೀಡದೇ ಇದ್ದ ಪಕ್ಷದಲ್ಲಿ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ಈ ಬಗ್ಗೆ ಲತಾ ಕುಟುಂಬದವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿಲ್ಲ.

ಇದನ್ನೂ ಓದಿ: Lata Mangeshkar: ಶೀಘ್ರದಲ್ಲೇ ಲತಾ ಮಂಗೇಶ್ಕರ್ ಚಿತ್ರವಿರುವ ಅಂಚಿ ಚೀಟಿ ಬಿಡುಗಡೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

ಲತಾ ಮಂಗೇಶ್ಕರ್​ ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಸೇರೋದು ಯಾರಿಗೆ? ಇಲ್ಲಿದೆ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada