ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?

 ಈ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಆರ್ಯನ್​ ಹಾಗೂ ಸುಹಾನಾ ಖಾನ್​ ಹರಾಜಿನಲ್ಲಿ ಕೋಲ್ಕತ್ತಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?
ಆರ್ಯನ್ ಖಾನ್
TV9kannada Web Team

| Edited By: Rajesh Duggumane

Feb 12, 2022 | 2:47 PM

ನಟ ಶಾರುಖ್​ ಖಾನ್ (Shah Rukh Khan)​ ಮಗ ಆರ್ಯನ್​ ಖಾನ್​ (Aryan Khan) ಅವರು ಕಳೆದ ವರ್ಷ ಡ್ರಗ್​ ಕೇಸ್​ನಲ್ಲಿ ಸಿಲುಕಿದ್ದರು. ಒಂದು ತಿಂಗಳು ಅವರು ಜೈಲು ವಾಸ ಅನುಭವಿಸಿ, ಜಾಮೀನು ಪಡೆದು ಹೊರ ಬಂದರು. ಆ ಬಳಿಕ ಎಲ್ಲಿಯೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಪ್ರಕರಣ ಶಾರುಖ್​ ಕುಟುಂಬಕ್ಕೆ ಮುಜುಗರ ತಂದಿತ್ತು. ಇದೇ ಮೊದಲ ಬಾರಿಗೆ ಆರ್ಯನ್​ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಂದು (ಫೆಬ್ರವರಿ 12) ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್​ ಹರಾಜಿನಲ್ಲಿ (IPL 2022 Auction ) ಆರ್ಯನ್​ ಖಾನ್​ ಕಾಣಿಸಿಕೊಂಡಿದ್ದಾರೆ. ಆರ್ಯನ್​ ಸಹೋದರಿ ಸುಹಾನಾ ಕೂಡ ಈ ಆಕ್ಷನ್​ನಲ್ಲಿ ಪಾಲ್ಗೊಂಡಿದ್ದಾರೆ.

ಐಪಿಎಲ್​ ತಂಡಗಳಲ್ಲಿ ಒಂದಾದ ‘ಕೋಲ್ಕತ್ತಾ ನೈಟ್​ ರೈಡರ್ಸ್​’ ಮಾಲೀಕತ್ವ ಶಾರುಖ್​ ಖಾನ್​ ಬಳಿ ಇದೆ. ಕಳೆದ ಬಾರಿ ಕೆಕೆಆರ್​​ ತಂಡ ಫಿನಾಲೆ ತಲುಪಿತ್ತು. ಇದೇ ಸಂದರ್ಭದಲ್ಲಿ ಆರ್ಯನ್​ ಖಾನ್​ ಜೈಲಿನಲ್ಲಿದ್ದರು. ಅವರಿಗೆ ಜಾಮೀನು ಕೊಡಿಸೋ ತಲೆಬಿಸಿಯಲ್ಲಿ ಶಾರುಖ್​ ಖಾನ್​ ಬ್ಯುಸಿ ಆಗಿದ್ದರು. ಹೀಗಾಗಿ, ಫೈನಲ್​ ಮ್ಯಾಚ್​ ನೋಡೋಕೆ ಸಾಧ್ಯವಾಗಿರಲಿಲ್ಲ. ಈಗ ಐಪಿಎಲ್​ ಹರಾಜಿನಲ್ಲಿ ಆರ್ಯನ್​ ಖಾನ್​ ಕಾಣಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಆರ್ಯನ್​ ಹಾಗೂ ಸುಹಾನಾ ಖಾನ್​ ಹರಾಜಿನಲ್ಲಿ ಕೋಲ್ಕತ್ತಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರನ್ನು ನೋಡಿ ಶಾರುಖ್​ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಜೂಹಿ ಚಾವ್ಲಾ ಕೆಕೆಆರ್​ನ ಸಹ ಮಾಲಕಿ ಆಗಿದ್ದಾರೆ. ಅವರ ಮಗಳು ಜಾನ್ವಿ ಕೂಡ ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

View this post on Instagram

A post shared by HT City (@htcity)

ಕೆಲ ವರ್ಷಗಳ ಹಿಂದೆಯೂ ಆರ್ಯನ್​ ಹಾಗೂ ಜಾನ್ವಿ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರಿಗೂ ಕ್ರಿಕೆಟ್​ ಮೇಲೆ ಸಾಕಷ್ಟು ಆಸಕ್ತಿ ಇದೆ. ಈ ಕಾರಣಕ್ಕೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಜೂಹಿ ಹೇಳಿಕೊಂಡಿದ್ದರು. ‘ಮಕ್ಕಳು ತಮ್ಮ ತಂಡದ ಬಗ್ಗೆ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ ಎಂಬುದು ಸಂತಸ ತಂದಿದೆ. ಇದನ್ನು ಮಾಡಲು ಅವರಿಗೆ ನಾವು ಒತ್ತಾಯ ಹೇರುತ್ತಿಲ್ಲ. ಅವರು ನಿಜವಾಗಿಯೂ ಇದನ್ನು ಮಾಡೋಕೆ ಬಯಸುತ್ತಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಜಾನ್ವಿ ರಾತ್ರಿ ಎದ್ದ ಉದಾಹರಣೆ ಕೂಡ ಇದೆ’ ಎಂದಿದ್ದರು ಜೂಹಿ.

ಆರ್ಯನ್​ ಖಾನ್​ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಕಾಲಿಡಬಹುದು. ಡ್ರಗ್​ ಕೇಸ್​ನಿಂದ ಅವರಿಗೆ ಕೊಂಚ ಹಿನ್ನಡೆ ಆಗಿದೆ. ಆದರೆ, ಆರ್ಯನ್​ ಅವರನ್ನು ಮುನ್ನೆಲೆಗೆ ತರಲು ಶಾರುಖ್​ ಖಾನ್​ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ತಂಡದ ಜವಾಬ್ದಾರಿಯನ್ನು ಮಗನಿಗೂ ನೀಡಲು ಅವರು ಯೋಚಿಸಿದ್ದಾರೆ ಎಂದು ವರದಿ ಆಗಿದೆ.

ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಆರ್ಯನ್​ ಖಾನ್​ ಬಂಧನ ನಡೆದಿತ್ತು. ಕ್ರೂಸ್​ ಶಿಪ್​ನಲ್ಲಿ ಡ್ರಗ್​ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಅವರನ್ನು ಅರೆಸ್ಟ್​ ಮಾಡಲಾಗಿತ್ತು. ಒಂದು ತಿಂಗಳ ಬಳಿಕ ಆರ್ಯನ್​ಗೆ ಜಾಮೀನು ಸಿಕ್ಕಿತ್ತು. ಶಾರುಖ್​ ಹಾಗೂ ಗೌರಿ ದಂಪತಿಯ ಮೊದಲ ಮಗ ಆರ್ಯನ್​. ಎರಡನೇ ಹುಟ್ಟಿದ್ದು ಸುಹಾನಾ. ಅಬ್ರಾಮ್​ ಮೂರನೇ ಮಗ.

ಇದನ್ನೂ ಓದಿ: IPL 2022 Auction Live: 

 ಖ್ಯಾತ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್​ ಖಾನ್​; ಶಾರುಖ್​ ಮಗನ ಬಗ್ಗೆ ಹೊಸ ಅಪ್​ಡೇಟ್​

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada