AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gehraiyaan: ‘ಗೆಹರಾಯಿಯಾ’, ‘ಖಿಲಾಡಿ’ಗೂ ಪೈರಸಿ ಕಾಟ; ತೆರೆ ಕಂಡ ಒಂದೇ ದಿನಕ್ಕೆ ಲೀಕ್ ಆಯ್ತು ಚಿತ್ರಗಳು

Khiladi | Ravi Teja: ಇತ್ತೀಚೆಗೆ ಸಿನಿಮಾಗಳಿಗೆ ಪೈರಸಿ ಕಾಟ ಜೋರಾಗಿದೆ. ಚಿತ್ರಮಂದಿರಗಳಲ್ಲಿ ಹಾಗೂ ಒಟಿಟಿಗಳಲ್ಲಿ ತೆರೆಕಂಡ ಚಿತ್ರಗಳು ದಿನದೊಳಗೆ ಲೀಕ್ ಆಗುತ್ತಿವೆ. ಇತ್ತೀಚೆಗೆ ತೆರೆಕಂಡ ಚಿತ್ರಗಳಿಗೂ ಇದೇ ಅನುಭವವಾಗಿದೆ.

Gehraiyaan: ‘ಗೆಹರಾಯಿಯಾ’, ‘ಖಿಲಾಡಿ’ಗೂ ಪೈರಸಿ ಕಾಟ; ತೆರೆ ಕಂಡ ಒಂದೇ ದಿನಕ್ಕೆ ಲೀಕ್ ಆಯ್ತು ಚಿತ್ರಗಳು
‘ಖಿಲಾಡಿ’ ಹಾಗೂ ‘ಗೆಹರಾಯಿಯಾ’ ಚಿತ್ರದ ಪೋಸ್ಟರ್​​ಗಳು
Follow us
TV9 Web
| Updated By: shivaprasad.hs

Updated on:Feb 13, 2022 | 10:13 AM

ಇತ್ತೀಚೆಗೆ ಚಿತ್ರರಂಗಕ್ಕೆ ಪೈರಸಿ ಕಾಟ ಜೋರಾಗಿದೆ. ಕೊರೊನಾದಿಂದ ತತ್ತರಿಸಿದ್ದ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ವರ್ಷಗಟ್ಟಲೆ ಕಷ್ಟಪಟ್ಟು, ಶ್ರಮ ಹಾಕಿ ತಯಾರಿಸಿದ ಚಿತ್ರಗಳು ರಿಲೀಸ್ ಆಗುತ್ತಿವೆ. ವೀಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬರುವ ಸಮಯಕ್ಕೆ ಚಿತ್ರಗಳು ಆನ್​ಲೈನ್​ನಲ್ಲಿ ಲೀಕ್ ಆಗುತ್ತಿವೆ. ಇದು ಎಲ್ಲಾ ಭಾಷೆಗಳನ್ನೂ ಕಾಡುತ್ತಿದ್ದು, ಪ್ರತಿ ವಾರ ಬಿಡುಗಡೆಯಾಗುತ್ತಿರುವ ಎಲ್ಲಾ ಚಿತ್ರಗಳೂ ಇದೇ ಸಮಸ್ಯೆಯನ್ನು ಅನುಭವಿಸುತ್ತಿವೆ. ಇದೀಗ ಈ ಸಾಲಿಗೆ ಕಳೆದ ಶುಕ್ರವಾರ (ಫೆಬ್ರವರಿ 11) ತೆರೆಕಂಡ ಎರಡು ಬಹುನಿರೀಕ್ಷಿತ ಚಿತ್ರಗಳೂ ಸೇರಿವೆ. ರವಿ ತೇಜ (Ravi Teja) ಅಭಿನಯದ ‘ಖಿಲಾಡಿ’ಗೆ (Khiladi) ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಚಿತ್ರಮಂದಿರದಲ್ಲಿ ಉತ್ತಮ ಗಳಿಕೆಯನ್ನೂ ಸಿನಿಮಾ ಮಾಡುತ್ತಿದೆ. ಆದರೆ ಚಿತ್ರ ಇದೀಗ ಪೈರಸಿಯಾಗಿದೆ. ದೀಪಿಕಾ ಪಡುಕೋಣೆ (Deepika Padukone), ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ಮೊದಲಾದ ಖ್ಯಾತ ಕಲಾವಿದರು ಬಣ್ಣ ಹಚ್ಚಿರುವ ‘ಗೆಹರಾಯಿಯಾ’ (Gehraiyaan) ಚಿತ್ರದ್ದೂ ಇದೇ ಕತೆ. ಅಮೆಜಾನ್ ಪ್ರೈಮ್ ಮೂಲಕ ನೇರವಾಗಿ ಒಟಿಟಿ ತೆರೆ ಕಂಡಿರುವ ಈ ಚಿತ್ರ ಕೂಡ ಲೀಕ್ ಆಗಿದೆ.

ರಮೇಶ್ ವರ್ಮಾ ನಿರ್ದೇಶನದ, ಸತ್ಯನಾರಾಯಣ ಕೊನೆರು ನಿರ್ಮಾಣ ಮಾಡಿರುವ ‘ಖಿಲಾಡಿ’ ತಮಿಳ್ ರಾಕರ್ಸ್, ಟೆಲಿಗ್ರಾಮ್ ಮೊದಲಾದ ಕಡೆಗಳಲ್ಲಿ ಲೀಕ್ ಆಗಿದೆ. ಆಕ್ಷನ್ ಚಿತ್ರದ ಮೂಲಕ ರವಿ ತೇಜ ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ ಚಿತ್ರ ಪೈರಸಿಯಾಗಿರುವುದು ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಬೀಳಲಿದೆ ಎನ್ನುವುದು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಮಾತು. ಇದು ನಿರ್ಮಾಪಕರ ಚಿಂತೆಗೆ ಕಾರಣವಾಗಿದೆ.

ಶುಕ್ರವಾರ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾದ ಗೆಹರಾಯಿಯಾ ಕೂಡ ವಿವಿಧ ತಾಣಗಳಲ್ಲಿ ಲೀಕ್ ಆಗಿದೆ. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವಾ ಮತ್ತು ನಾಸಿರುದ್ದೀನ್ ಷಾ ನಟಿಸಿರುವ, ಶಕುನ್ ಬಾತ್ರಾ ನಿರ್ದೇಶನದ ಈ ಚಿತ್ರ, ವಿಮರ್ಶಕರಿಂದ, ಒಟಿಟಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಕರಣ್ ಜೋಹರ್ ನಿರ್ಮಾಣದ ‘ಗೆಹರಾಯಿಯಾ’ ಟೊರೆಂಟ್, ಟೆಲಿಗ್ರಾಮ್​​ಗಳಲ್ಲಿ ಪೈರಸಿಯಾಗಿದ್ದು, ಚಿತ್ರದ ವೀಕ್ಷಕರ ಪ್ರಮಾಣ ಗಣನೀಯವಾಗಿ ತಗ್ಗುವ ಆತಂಕ ಎದುರಾಗಿದೆ.

ಚಿತ್ರಗಳು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪೈರಸಿಯಾಗುತ್ತಿರುವುದು ಇತ್ತೀಚೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ತಾರೆಯರ ಚಿತ್ರಗಳು ರಿಲೀಸ್ ಆದ ದಿನದಂದೇ ಸೋರಿಕೆಯಾಗುತ್ತಿವೆ. ‘ಪುಷ್ಪ: ದಿ ರೈಸ್’ ಚಿತ್ರವಂತೂ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿಯಾಗಿತ್ತು.

ರಣವೀರ್ ಸಿಂಗ್ ನಟನೆಯ ‘83’, ಸಲ್ಮಾನ್ ಖಾನ್ ನಟನೆಯ ‘ಅಂತಿಮ್: ಫೈನಲ್ ಟ್ರುಥ್’ ಮೊದಲಾದ ಚಿತ್ರಗಳೂ ಲೀಕ್ ಆಗಿದ್ದವು. ತೆಚಿತ್ರರಂಗದಲ್ಲಿ ಪೈರಸಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಟಾಲಿವುಡ್​ನ ಪೈರಸಿ ವಿರೋಧಿ ಸಮಿತಿಯ ಅಧ್ಯಕ್ಷ ಎ.ರಾಜ್ ​ಕುಮಾರ್ ಇಂಡಿಯನ್ ಎಕ್ಸ್​ಪ್ರೆಸ್​ನೊಂದಿಗೆ ಮಾತನಾಡುತ್ತಾ, ಚಿತ್ರರಂಗಕ್ಕೆ ಪೈರಸಿ ದೊಡ್ಡ ತಡೆಯಾಗುತ್ತಿದೆ ಎಂದಿದ್ದರು.

ಸ್ಯಾಂಡಲ್​ವುಡ್​ನಲ್ಲಿ ‘ಸಲಗ’, ‘ಭಜರಂಗಿ 2’ ಚಿತ್ರಗಳ ಬಿಡುಗಡೆ ಸಮಯದಲ್ಲಿ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿಯಾಗಿ ಚಿತ್ರತಂಡಗಳು ಚರ್ಚಿಸಿದ್ದವು. ಪೈರಸಿ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗುವುದು ಎಂಬ ಭರವಸೆಯೂ ವ್ಯಕ್ತವಾಗಿತ್ತು. ಆದರೆ ಪೈರಸಿ ಸಮಸ್ಯೆಗೆ ಮಾತ್ರ ಶಾಶ್ವತ ಪರಿಹಾರ ಲಭ್ಯವಾಗಿಲ್ಲ. ಇದಕ್ಕೆ ಭಾರತದ ವಿವಿಧ ಚಿತ್ರರಂಗಗಳೂ ಹೊರತಾಗಿಲ್ಲ. ಎಲ್ಲವೂ ಪೈರಸಿ ಸಮಸ್ಯೆಯಿಂದ ನಲುಗುತ್ತಿವೆ.

ಇದನ್ನೂ ಓದಿ:

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

Shiva Rajkumar: ವಿಜಯ್ ಪ್ರಕಾಶ್ ದನಿಯಲ್ಲಿ ಮೂಡಿಬಂದ ಈ ಹೊಸ ಹಾಡನ್ನು ಇಷ್ಟಪಟ್ಟ ಶಿವಣ್ಣ

Published On - 10:00 am, Sun, 13 February 22