Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..

Deepika Padukone: ‘ಗೆಹರಾಯಿಯಾ’ ಸಿನಿಮಾದ ಟ್ರೇಲರ್​ನಲ್ಲಿ ಕಿಸ್ಸಿಂಗ್​ ದೃಶ್ಯಗಳು, ಹಸಿಬಿಸಿ ದೃಶ್ಯಗಳು ಹೈಲೈಟ್​ ಆಗಿದ್ದವು. ಅದೇ ಉದ್ದೇಶಕ್ಕೆ ಸಿನಿಮಾ ನೋಡೋಕೆ ಮುಂದಾದರೆ ನಿಮಗೆ ನಿರಾಸೆ ಆಗಬಹುದು!

Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..
ಸಿದ್ಧಾಂತ್​-ದೀಪಿಕಾ
Follow us
ರಾಜೇಶ್ ದುಗ್ಗುಮನೆ
|

Updated on:Feb 11, 2022 | 12:24 PM

ಸಿನಿಮಾ: ಗೆಹರಾಯಿಯಾ

ಪಾತ್ರವರ್ಗ: ದೀಪಿಕಾ ಪಡುಕೋಣೆ, ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ, ನಾಸಿರುದ್ದೀನ್ ಶಾ ಮೊದಲಾದವರು..

ನಿರ್ದೇಶನ: ಶಕುನ್​ ಭಾತ್ರ​

ನಿರ್ಮಾಣ: ಧರ್ಮ ಪ್ರೊಡಕ್ಷನ್, ವಯಕಾಮ್​18 ಸ್ಟುಡಿಯೋಸ್

ಸ್ಟಾರ್​: 3/5

ಜಗತ್ತು ಬದಲಾಗಿದೆ. ಪ್ರೀತಿ-ಪ್ರೇಮದ ಆಯಸ್ಸು ಕಡಿಮೆ ಆಗಿದೆ. ಒಬ್ಬರನ್ನು ಪ್ರೀತಿಸುವ ಮನಸ್ಸು ಕ್ಷಣಮಾತ್ರದಲ್ಲಿ ಬದಲಾಗುತ್ತದೆ, ಮತ್ಯಾರಿಗೋ ಹಂಬಲಿಸುತ್ತದೆ. ಬಾಲ್ಯದ ಕೆಟ್ಟ ಘಟನೆಗಳು ಬಿಟ್ಟು ಬಿಡದೆ ಕಾಡುತ್ತವೆ. ‘ನಾವು ಬೇಗ ಬೆಳೆದು ಬಿಟ್ಟೆವು, ಬಾಲ್ಯವೇ ಅದ್ಭುತವಾಗಿತ್ತು’ ಎಂಬ ಮಾತು ಪದೇಪದೇ ಮನಸ್ಸಿನ ಆಳಕ್ಕೆ ನಾಟುತ್ತಲೇ ಇರುತ್ತದೆ. ತಂದೆಯನ್ನೋ, ತಾಯಿಯನ್ನೋ ಯಾವುದೋ ಕಾರಣಕ್ಕೆ ಚಿಕ್ಕಂದಿನಿಂದ ದ್ವೇಷಿಸುತ್ತಲೇ ಇರುತ್ತೇವೆ. ಅವರು ನಮ್ಮ ಪಾಲಿಗೆ ವಿಲನ್​. ಆದರೆ, ಅಸಲಿಯತ್ತು ಬೇರೆಯೇ ಇರುತ್ತದೆ. ಅದು ಗೊತ್ತಾದಾಗ ಕೊರಗುತ್ತೇವೆ. ಒಂದು ಸಂಬಂಧವನ್ನು ಬೆಳೆಸಲು ಮತ್ತೊಂದು ಸಂಬಂಧವನ್ನು ಕೊಲ್ಲುತ್ತೇವೆ. ಸುಳ್ಳುಗಳ ಸರಮಾಲೆ ಕಟ್ಟುತ್ತೇವೆ. ಯಾರನ್ನೋ ಕಳೆದುಕೊಳ್ಳುತ್ತೇವೆ, ಮತ್ಯಾರನ್ನೋ ಪಡೆದುಕೊಳ್ಳುತ್ತೇವೆ. ಎಂದೋ ಹೇಳಿದ ಸುಳ್ಳು ಮುಂದೊಂದು ದಿನ ಯಾವುದೋ ತಿರುವಿನಲ್ಲಿ ಧಕ್ಕನೆ ನಮ್ಮೆದುರು ಬಂದು ನಿಲ್ಲುತ್ತದೆ. ಆಗ ಬೆಚ್ಚಿ ಬೀಳುತ್ತೇವೆ. ಏನೇ ಆದರೂ ಜಗತ್ತು ನಿಲ್ಲುವುದಿಲ್ಲ, ಓಡುತ್ತಲೇ ಇರುತ್ತದೆ. ಆಧುನಿಕ ಜಗತ್ತಿನಲ್ಲಿ ಯುವ ಜನತೆಯ ಮನಸ್ಥಿತಿ ಹೀಗೆಯೇ ಇದೆ. ಈ ಮನಸ್ಸಿಗೆ ಹಿಡಿದ ಕನ್ನಡಿ ‘ಗೆಹರಾಯಿಯಾ’ ಚಿತ್ರ (Gehraiyaan Movie Review).

ಆಲಿಶಾ (ದೀಪಿಕಾ ಪಡುಕೋಣೆ) ಹಾಗೂ ಟಿಯಾ (ಅನನ್ಯಾ ಪಾಂಡೆ) ಕಸಿನ್ಸ್​. ಚಿಕ್ಕವಯಸ್ಸಿನಲ್ಲಿ ಒಟ್ಟಿಗೆ ಆಡಿ ಬೆಳೆದವರು. ಆದರೆ, ಕಾರಣಾಂತರಗಳಿಂದ ತಂದೆ (ನಸರುದ್ದಿನ್​ ಶಾ) ಜತೆ ಆಲಿಶಾ ನಾಸಿಕ್​ಗೆ ಶಿಫ್ಟ್​ ಆಗುತ್ತಾಳೆ. ಅಲ್ಲಿ ಆಲಿಶಾ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದಾದ 13 ವರ್ಷಗಳ ಬಳಿಕ ಆಲಿಶಾ ಹಾಗೂ ಟಿಯಾ ಮತ್ತೆ ಭೇಟಿ ಆಗುತ್ತಾರೆ. ಟಿಯಾ ತಾನು ಮದುವೆ ಆಗುವ ಹುಡುಗ ಜೇನ್​ನನ್ನು (ಸಿದ್ಧಾಂತ್​ ಚತುರ್ವೇದಿ) ಆಲಿಶಾಗೆ ಪರಿಚಯಿಸುತ್ತಾಳೆ. ಕರಣ್​ (ಧೈರ್ಯ ಕರ್ವ) ಹಾಗೂ ಆಲಿಶಾ ನಡುವೆ ಇರುವ ಪ್ರೀತಿಗೆ ಆಯಸ್ಸು ಮುಗಿದಿರುತ್ತದೆ. ಜೇನ್​ ಭೇಟಿ ನಂತರದಲ್ಲಿ ಆಲಿಶಾ ಬದಲಾಗುತ್ತಾಳೆ. ಇಬ್ಬರ ನಡುವೆ ಅಫೇರ್​ ಶುರುವಾಗುತ್ತದೆ. ಅಲ್ಲಿಂದ ನಿಜವಾದ ಕಥೆ ಶುರು.

‘ಗೆಹರಾಯಿಯಾ’ ಸಿನಿಮಾದ ಟ್ರೇಲರ್​ನಲ್ಲಿ ಕಿಸ್ಸಿಂಗ್​ ದೃಶ್ಯಗಳು, ಹಸಿಬಿಸಿ ದೃಶ್ಯಗಳು ಹೈಲೈಟ್​ ಆಗಿದ್ದವು. ಅದೇ ಉದ್ದೇಶಕ್ಕೆ ಸಿನಿಮಾ ನೋಡೋಕೆ ಮುಂದಾದರೆ ನಿಮಗೆ ನಿರಾಸೆ ಆಗಬಹುದು! ನಿರ್ದೇಶಕರು ಇಲ್ಲಿ ನಿಜವಾಗಲೂ ಹೇಳೋಕೆ ಹೊರಟಿದ್ದೇ ಬೇರೆ. ಆಧುನಿಕ ಜಗತ್ತಿನ ಸಂಬಂಧಗಳು ಎಷ್ಟು ಗೊಂದಲಮಯವಾಗುತ್ತಿದೆ ಎಂಬುದನ್ನು ಇಡೀ ಸಿನಿಮಾದಲ್ಲಿ ಬಿಡಿಬಿಡಿಯಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಶಕುನ್​ ಭಾತ್ರ ಮಾಡಿದ್ದು, ಅದರಲ್ಲಿ ಯಶಸ್ಸು ಕಂಡಿದ್ದಾರೆ. ಮಾಮೂಲಿ ಕಮರ್ಷಿಯಲ್​ ಶೈಲಿಯ ಸಿನಿಮಾ ಇಷ್ಟಪಡುವವರಿಗೆ ಈ ಸಿನಿಮಾ ಕೊಂಚ ನಿಧಾನ ಎನಿಸಬಹುದು! ನೀವು ಭಾವನಾತ್ಮಕ ಜೀವಿ ಆಗಿದ್ದರೆ ಈ ಸಿನಿಮಾ ತುಂಬಾನೇ ಇಷ್ಟಆಗಬಹುದು.

ದೀಪಿಕಾ ಪಡುಕೋಣೆ ಯೋಗ ಟೀಚರ್​ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರತಿ ಫ್ರೇಮ್​ನಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಪ್ರಬುದ್ಧವಾಗಿ ನಟಿಸಿದ್ದಾರೆ. ಅವರ ನಟನೆ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಸಿದ್ಧಾಂತ್​ ಚತುರ್ವೇದಿ ಅವರಿಗೆ ಈ ಸಿನಿಮಾದಿಂದ ದೊಡ್ಡ ಮೈಲೇಜ್​ ಸಿಗೋದು ಪಕ್ಕಾ. ಅವರು ತೆರೆಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಅನನ್ಯಾ ಪಾಂಡೆ ಅವರಿಗೆ ಈ ಚಿತ್ರದಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ. ಅವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇನ್ನಷ್ಟು ಪಳಗಬೇಕಿದೆ. ಧೈರ್ಯ ಕರ್ವ ಅವರ ನಟನೆಯೂ ಮೆಚ್ಚಿಕೊಳ್ಳುವಂತಹದ್ದು. ನಾಸಿರುದ್ದೀನ್ ಶಾ ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ ಇದ್ದರೂ ಅವರ ಪಾತ್ರಕ್ಕೆ ಇರುವ ಪ್ರಾಮುಖ್ಯತೆ ತುಂಬಾನೇ ದೊಡ್ಡದು.

ಸಿನಿಮಾದಲ್ಲಿ ಬರುವ ಸಮುದ್ರದ ಅಲೆಗಳನ್ನು ತುಂಬಾನೇ ಸಿಂಬಾಲಿಕ್​ ಆಗಿ ತೋರಿಸಿದ್ದಾರೆ ನಿರ್ದೇಶಕರು. ಸಂಬಂಧಗಳನ್ನು ಉಳಿಸಲು ಅಥವಾ ಅಳಿಸಲು ನಾವು ಹೇಳುವ ಒಂದು ಸುಳ್ಳು ಹೇಗೆ ಮುಂದೊಂದು ದಿನ ನಮ್ಮನ್ನೇ ತಿಂದು ಹಾಕಿ ಬಿಡಬಹುದು ಎಂಬುದನ್ನು ಮನಸ್ಸಿಗೆ ಮುಟ್ಟುವಂತೆ ತೋರಿಸಲಾಗಿದೆ. ಸಿನಿಮಾಟೋಗ್ರಾಫಿ ‘ಗೆಹರಾಯಿಯಾ’ ಅಂದವನ್ನು ಹೆಚ್ಚಿಸಿದೆ. ಹಾಡುಗಳು ಸಿನಿಮಾಗೆ ಮತ್ತಷ್ಟು ಮೈಲೇಜ್​ ನೀಡಿದೆ. ನಮ್ಮ ಎದುರೇ ನಡೆಯುವ ಕಥೆಯನ್ನು ಉತ್ತಮವಾಗಿ ತೆರೆಮೇಲೆ ತಂದ ನಿರ್ದೇಶಕರ ಪ್ರಯತ್ನವನ್ನು ಶ್ಲಾಘಿಸಲೇಬೇಕು.

‘ಗೆಹರಾಯಿಯಾ’ ಸಿನಿಮಾ ಕೇವಲ ಒಂದು ಗಂಡು ಹೆಣ್ಣಿನ ನಡುವಣ ಸಂಬಂಧದ ಬಗ್ಗೆ ಮಾತ್ರ ಹೇಳಿಲ್ಲ. ಹಲವು ಬಂಧಗಳ ಕಥೆಯಿದೆ. ಈ ಸಿನಿಮಾ ನೋಡಿದ ನಂತರ, ‘ಈ ಸಂಬಂಧಗಳು ಏಕೆ ಹೀಗೆ?’ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಕಾಡಲು ಶುರವಾಗಬಹುದು!

ಇದನ್ನೂ ಓದಿ: Deepika Padukone: ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳಲು ಇವರೇ ಕಾರಣ; ಮುಕ್ತವಾಗಿ ಹೇಳಿಕೊಂಡ ದೀಪಿಕಾ ಪಡುಕೋಣೆ

ಕಿಸ್ಸಿಂಗ್​ ದೃಶ್ಯಗಳಲ್ಲಿ ಮಿಂಚಿದ ದೀಪಿಕಾ ಪಡುಕೋಣೆ; ‘ಗೆಹರಾಯಿಯಾ’ ಟ್ರೇಲರ್​ನಲ್ಲಿ ಹೈಲೈಟ್​ ಆಯ್ತು ಸಂಬಂಧಗಳ​ ವಿಚಾರ

Published On - 12:01 pm, Fri, 11 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್