ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shiva Rajkumar) ಮೊದಲಿನಿಂದಲೂ ಹೊಸ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತವರು. ಅವುಗಳನ್ನು ನೋಡಿ ಅವರು ಮೆಚ್ಚಿಕೊಂಡು ಬೆನ್ನು ತಟ್ಟುತ್ತಾರೆ. ಇತ್ತೀಚೆಗೆ ತಂಡವೊಂದು ‘ಲವ್ ಪಾಯ್ಸನ್’ (Love Poison Song) ಎಂಬ ಮ್ಯೂಸಿಕ್ ಆಲ್ಬಂ ಅನ್ನು ತಯಾರಿಸಿದೆ. ಅದನ್ನು ವೀಕ್ಷಿಸಿರುವ ಶಿವಣ್ಣ ಖುಷಿಪಟ್ಟಿದ್ದಾರೆ. ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂದಿರುವ ಹಾಡು ಶಿವಣ್ಣಗೆ ಪ್ರಿಯವಾಗಿದೆ. ಹಾಡಿನಲ್ಲಿ ಅಶೋಕ್ ನಟಿಸಿದ್ದು, ಚಿಯಾನ್ ಆಕ್ಷನ್ ಕಟ್ ಹೇಳಿದ್ದಾರೆ. ಹಾಡಿಗೆ ಗೌಸ್ ಫಿರ್ ಸಾಹಿತ್ಯವಿದ್ದು, ಅನಿಲ್ ನಿರ್ಮಾಣ ಮಾಡಿದ್ದಾರೆ. ಫೆಬ್ರವರಿ 12ರಂದು ಹಾಡು ರಿಲೀಸ್ ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಹಾಡಿನ ತುಣುಕನ್ನು ವೀಕ್ಷಿಸಿರುವ ಶಿವಣ್ಣ, ವಿಜಯ್ ಪ್ರಕಾಶ್ ಹಾಡಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪ್ರೀತಿ ಮತ್ತು ಬದುಕಿನ ಬಗ್ಗೆ ಹಾಡಿದೆ. ಎಲ್ಲರೂ ವೀಕ್ಷಿಸಿ ಎಂದು ಶಿವಣ್ಣ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ:
Bangarraju: ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದೆ ಬಂಗಾರ್ರಾಜು; ಯಾವಾಗ ರಿಲೀಸ್? ಎಲ್ಲಿ ಪ್ರಸಾರ? ಇಲ್ಲಿದೆ ಮಾಹಿತಿ
ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್ ಆಫ್ ಇಂಡಿಯಾ