Bangarraju: ಒಟಿಟಿಯಲ್ಲಿ ಕಾಣಿಸಿಕೊಳ್ಳಲಿದೆ ಬಂಗಾರ್ರಾಜು; ಯಾವಾಗ ರಿಲೀಸ್? ಎಲ್ಲಿ ಪ್ರಸಾರ? ಇಲ್ಲಿದೆ ಮಾಹಿತಿ
Nagarjuna | Naga Chaitanya: ನಾಗಾರ್ಜುನ ಹಾಗೂ ನಾಗ ಚೈತನ್ಯ ‘ಮನಂ’ ಚಿತ್ರದ ನಂತರ ‘ಬಂಗಾರ್ರಾಜು’ ಚಿತ್ರದಲ್ಲಿ ಜತೆಯಾಗಿ ಬಣ್ಣಹಚ್ಚಿದ್ದರು. ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆ ಮಾಡಿರುವ ಚಿತ್ರ ಇದೀಗ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.
ಟಾಲಿವುಡ್ನ ಖ್ಯಾತ ನಟರಾದ ನಾಗಾರ್ಜುನ (Nagarjuna) ಹಾಗೂ ನಾಗ ಚೈತನ್ಯ (Naga Chaitanya) ಯಶಸ್ಸಿನ ಖುಷಿಯಲ್ಲಿದ್ದಾರೆ. ಕಾರಣ ಅವರ ಚಿತ್ರದ ಯಶಸ್ಸು. ಕೊರೊನಾ ಆತಕದ ನಡುವೆಯೂ ಗಟ್ಟಿ ನಿರ್ಧಾರ ಮಾಡಿ ‘ಬಂಗಾರ್ರಾಜು’ (Bangarraju) ಚಿತ್ರದ ಬಿಡುಗಡೆಯನ್ನು ಘೋಷಿಸಿದ್ದರು ನಾಗಾರ್ಜುನ. ಆ ಸಮಯದಲ್ಲಿ ಅವರ ನಿರ್ಧಾರವನ್ನು ಹಲವರು ಪ್ರಶ್ನಿಸಿದ್ದರು. ಕೆಲ ಕಾಲದ ನಂತರ ರಿಲೀಸ್ ಮಾಡಬಹುದು ಎನ್ನುವುದು ಹಲವರ ಸಲಹೆಯಾಗಿತ್ತು. ಆದರೆ ‘ಬಂಗಾರ್ರಾಜು’ ಸಂಕ್ರಾಂತಿಯ ಸಂದರ್ಭದ ಚಿತ್ರ ಎಂದಿದ್ದ ನಾಗಾರ್ಜುನ, ಅದರಂತೆ ಚಿತ್ರವನ್ನು ರಿಲೀಸ್ ಮಾಡಿದ್ದರು. ತೆಲುಗು ಪ್ರೇಕ್ಷಕರೂ ಚಿತ್ರವನ್ನು ಕೈಬಿಡಲಿಲ್ಲ. ತೆಲುಗು ಹೊರತಾದ ರಾಜ್ಯಗಳಲ್ಲೂ ಚಿತ್ರ ಉತ್ತಮ ಗಳಿಕೆ ಮಾಡಿತ್ತು. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಾಕ್ಸಾಫೀಸ್ ದೋಚಿರುವ ಈ ಚಿತ್ರ ಈಗಲೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ ಒಂದು ತಿಂಗಳ ಮೇಲಾಗಿದ್ದರೂ ಕೂಡ, ಫ್ಯಾನ್ಸ್ ಕ್ರೇಜ್ ಕಡಿಮೆಯಾಗಿಲ್ಲ. ಈ ಸಿನಿಮಾದ ಯಶಸ್ಸಿಗೆ ಚಿತ್ರದ ಕತೆ ಕಾರಣ ಎಂದು ಈ ಹಿಂದೆ ನಾಗಾರ್ಜುನ ಹೇಳಿದ್ದರು. ಈ ಎಲ್ಲಾ ಯಶಸ್ಸಿನ ನಡುವೆಯೇ ಚಿತ್ರತಂಡದಿಂದ ಹೊಸ ಸುದ್ದಿ ಬಂದಿದೆ. ಚಿತ್ರ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ.
ಹೌದು. ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಗಳಿಸುತ್ತಿರುವಾಗಲೇ ‘ಬಂಗಾರ್ರಾಜು’ ಒಟಿಟಿಯಲ್ಲೂ ತೆರೆಕಾಣಲಿದೆ. ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜೀ5 ಪಡೆದುಕೊಂಡಿದ್ದು, ಜೀ5 ಒಟಿಟಿಯಲ್ಲಿ ಸಿನಿಮಾ ತೆರೆಕಾಣಲಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ‘ಚಿತ್ರಮಂದಿರದಲ್ಲಿ ‘ಬಂಗಾರ್ರಾಜು’ವನ್ನು ನೋಡಲು ಮಿಸ್ ಮಾಡಿದ್ದೀರಾ? ಪರವಾಗಿಲ್ಲ. ಫೆಬ್ರವರಿ 18ರಿಂದ ಚಿತ್ರ ಜೀ5ನಲ್ಲಿ ತೆರೆಕಾಣಲಿದೆ’ ಎಂದು ಟ್ವೀಟ್ ಮಾಡಿದೆ. ಈ ಮೂಲಕ ಫೆಬ್ರವರಿ 18ರಿಂದ ಜೀ5ನಲ್ಲಿ ‘ಬಂಗಾರ್ರಾಜು’ ಬಿತ್ತರವಾಗಲಿದೆ ಎಂದು ಘೋಷಿಸಲಾಗಿದೆ.
ಚಿತ್ರತಂಡ ಹಂಚಿಕೊಂಡ ಟ್ವೀಟ್ ಇಲ್ಲಿದೆ:
#Bangarraju Ni Theatres lo Miss Ayyara ? Em Parldhu. Watch it on 18th February only on @ZEE5Telugu @iamnagarjuna @chay_akkineni @IamKrithiShetty @meramyakrishnan @AnnapurnaStdios @ZeeStudios_ @vennelakishore
Watch the ZEE5 trailer cut here:https://t.co/zx8s9KyliL pic.twitter.com/V5fBKFaFhu
— BA Raju’s Team (@baraju_SuperHit) February 11, 2022
ಚಿತ್ರದ ಒಟಿಟಿ ರಿಲೀಸ್ಗೆ ಪೂರ್ವಭಾವಿಯಾಗಿ ಹೊಸ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿದೆ. ಫ್ಯಾಂಟಸಿ- ಕಾಮಿಡಿ ಮಾದರಿಯ ಈ ಚಿತ್ರ ಕೌಟುಂಬಿಕ ಚಿತ್ರವಾಗಿದ್ದು, ರಮ್ಯಾ ಕೃಷ್ಣ, ಕೃತಿ ಶೆಟ್ಟಿ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಯಾಣ್ ಕೃಷ್ಣ ಕುರುಸಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಾಗಾರ್ಜುನ ಅವರೇ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಹೊಸ ಟ್ರೈಲರ್ ಇಲ್ಲಿದೆ:
ನಾಗಾರ್ಜುನ ನಟನೆಯ ಚಿತ್ರಗಳ ವಿಷಯಕ್ಕೆ ಬಂದರೆ ಅವರ ‘ಘೋಸ್ಟ್’ ದುಬೈನಲ್ಲಿ ಚಿತ್ರಿಕರಣ ಆರಂಭಿಸಬೇಕಿತ್ತು. ಆದರೆ ಚಿತ್ರತಂಡದ ಕೆಲವರು ಕೊರೊನಾ ಸೋಂಕಿಗೆ ತುತ್ತಾದ ಕಾರಣ, ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ನಾಗ ಚೈತನ್ಯ ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾಗಿದ್ದು, ಅಮೀರ್ ಖಾನ್ ಜತೆ ತೆರೆ ಹಂಚಿಕೊಂಡಿರುವ ‘ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14ರಂದು ತೆರೆಗೆ ಬರಲಿದೆ.
ಇದನ್ನೂ ಓದಿ:
ಹಲವು ಆತಂಕಗಳ ನಡುವೆಯೇ ಬಾಕ್ಸಾಫೀಸ್ನಲ್ಲಿ ಭರಪೂರ ಬೆಳೆ ತೆಗೆದ ‘ಬಂಗಾರ್ರಾಜು’; ಕಲೆಕ್ಷನ್ ಎಷ್ಟು ಗೊತ್ತಾ?
ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್ ಆಫ್ ಇಂಡಿಯಾ