AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

‘ಹೊಸ ಯುಗದ ಸಿನಿಮಾ ಎಂಬ ಹೆಸರಿನಲ್ಲಿ ತ್ಯಾಜ್ಯವನ್ನೆಲ್ಲ ಮಾರಾಟ ಮಾಡಬೇಡಿ. ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾವೇ ಆಗಿರುತ್ತದೆ’ ಎಂದು ಕಂಗನಾ ರಣಾವತ್​ ಟೀಕಿಸಿದ್ದಾರೆ.

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ
ಕಂಗನಾ ರಣಾವತ್, ದೀಪಿಕಾ ಪಡುಕೋಣೆ, ಸಿದ್ದಾಂತ್ ಚತುರ್ವೇದಿ
TV9 Web
| Edited By: |

Updated on: Feb 13, 2022 | 9:13 AM

Share

ಬಾಲಿವುಡ್​ ನಟಿ ಕಂಗನಾ ರಣಾವತ್​ (Kangana Ranaut) ಇದ್ದಲ್ಲಿ ಕಿರಿಕ್​ ಇದ್ದೇ ಇರುತ್ತದೆ ಎಂಬುದನ್ನು ಸುಲಭವಾಗಿ ಹೇಳಬಹುದು. ಅವರ ಪ್ರತಿ ಮಾತುಗಳು ಕೂಡ ವಿವಾದವನ್ನು ಹುಟ್ಟು ಹಾಕುತ್ತವೆ. ಬಾಲಿವುಡ್​ನ ಬಹುತೇಕ ಎಲ್ಲ ಸೆಲೆಬ್ರಿಟಿಗಳನ್ನೂ ಕಂಗನಾ ಎದುರು ಹಾಕಿಕೊಂಡಿದ್ದಾರೆ. ಈಗ ಅವರು ದೀಪಿಕಾ ಪಡುಕೋಣೆ (Deepika Padukone) ಬಗ್ಗೆ ವ್ಯಂಗ್ಯವಾಡಿದ್ದಾರೆ. ದೀಪಿಕಾ ನಟನೆಯ ‘ಗೆಹರಾಯಿಯಾ’ ಸಿನಿಮಾ (Gehraiyaan Movie) ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಬೋಲ್ಡ್​ ದೃಶ್ಯಗಳು ಇವೆ ಎಂಬ ಕಾರಣಕ್ಕೆ ಕೆಲವರು ‘ಗೆಹರಾಯಿಯಾ’ ಸಿನಿಮಾ ಬಗ್ಗೆ ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ. ಕಂಗನಾ ರಣಾವತ್​ ಕೂಡ ‘ಗೆಹರಾಯಿಯಾ’ ಸಿನಿಮಾವನ್ನು ಟೀಕಿಸಿದ್ದಾರೆ. ಅದು ಕೂಡ ಖಾರದ ಮಾತುಗಳಲ್ಲಿ. ‘ಇದೊಂದು ಕೆಟ್ಟ ಸಿನಿಮಾ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅವರು ದೀಪಿಕಾ ಪಡುಕೋಣೆ ಅಭಿಮಾನಿಗಳ ಕೋಪಕ್ಕೆ ಗುರಿ ಆಗಿದ್ದಾರೆ.

‘ಗೆಹರಾಯಿಯಾ’ ಚಿತ್ರಕ್ಕೆ ಶಕುನ್​ ಭಾತ್ರ ನಿರ್ದೇಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಜೊತೆಗೆ ಸಿದ್ಧಾಂತ್​ ಚರ್ತುವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ ಮುಂತಾದವರು ನಟಿಸಿದ್ದಾರೆ. ದೀಪಿಕಾ ಮತ್ತು ಸಿದ್ಧಾಂತ್​ ನಡುವಿನ ಕಿಸ್ಸಿಂಗ್​ ಮತ್ತು ಇಂಟಿಮೇಟ್​ ದೃಶ್ಯಗಳು ಅನೇಕರ ಕಣ್ಣು ಕುಕ್ಕಿವೆ. ಇದು ಹೊಸ ಯುಗದ ಸಿನಿಮಾ ಎಂದು ಕೆಲವರು ಬ್ರ್ಯಾಂಡ್​ ಮಾಡಿದ್ದಾರೆ. ಅದೇ ವಿಚಾರವನ್ನು ಇಟ್ಟುಕೊಂಡು ಕಂಗನಾ ರಣಾವತ್​ ಕುಟುಕಿದ್ದಾರೆ.

ಫೆ.11ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ‘ಗೆಹರಾಯಿಯಾ’ ಚಿತ್ರ ರಿಲೀಸ್​ ಆಯಿತು. ಒಂದು ದಿನದ ಬಳಿಕ, ಅಂದರೆ ಫೆ.12ರ ರಾತ್ರಿ ಕಂಗನಾ ರಣಾವತ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿರುವ ಕೆಲವು ಸಾಲುಗಳು ಸಖತ್​ ವೈರಲ್​ ಆಗುತ್ತಿವೆ. ‘ನಾನೂ ಕೂಡ ಈ ಕಾಲದವಳು. ಈ ಬಗೆಯ ರೊಮ್ಯಾನ್ಸ್​ ಅನ್ನು ಗುರುತಿಸಿ, ಅರ್ಥ ಮಾಡಿಕೊಳ್ಳಬಲ್ಲೆ. ಹೊಸ ಯುಗದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂಬ ಹೆಸರಿನಲ್ಲಿ ತ್ಯಾಜ್ಯವನ್ನೆಲ್ಲ ಮಾರಾಟ ಮಾಡಬೇಡಿ. ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾವೇ ಆಗಿರುತ್ತದೆ. ಎಷ್ಟೇ ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಮೈ ತೋರಿಸಿದರೂ ಈ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಇದು ಬೇಸಿಕ್​ ಸತ್ಯ. ಯಾವುದೇ ಆಳವಾದ (ಗೆಹರಾಯಿಯಾ) ವಿಷಯ ಅಲ್ಲ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್​. ಖಾನ್​ ಅವರು ಕೂಡ ‘ಗೆಹರಾಯಿಯಾ’ ಚಿತ್ರವನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಈ ಸಿನಿಮಾ ಸಾಫ್ಟ್​ ಪೋರ್ನ್​ ಎಂದು ಹೀಗಳೆದಿರುವ ಅವರು​, ದೀಪಿಕಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ‘ಗೆಹರಾಯಿಯಾ ಚಿತ್ರ ದೀಪಿಕಾ ಪಡುಕೋಣೆ ಅವರ ಬಯೋಪಿಕ್​. ಏಕೆಂದರೆ ಅವರು ಹಣವನ್ನು ಮಾತ್ರ ಇಷ್ಪಡುತ್ತಾರೆ’ ಎಂದು ಕಮಾಲ್​ ಆರ್​. ಖಾನ್ ಬರೆದುಕೊಂಡಿದ್ದಾರೆ. ಈ ಮಾತನ್ನು ಕೆಲವರು ವಿರೋಧಿಸಿದ್ದು, ಕಮಾಲ್​ ವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

47ರ ಪ್ರಾಯದ ನಟನಿಗೆ 20ರ ಹರೆಯದ ನಟಿ ಜೋಡಿ; ಇದು ಸರಿ ಎಂದು ಸಮರ್ಥಿಸಿಕೊಂಡ ಕಂಗನಾ ರಣಾವತ್​

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

Follow Us
Web contact
Web contact

TV9 Kannada

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ