- Kannada News Photo gallery Kangana Ranaut will host Lock Upp backed by Ekta Kapoor will telecast on Alt Balaji and MX Player
Kangana Ranaut: ಇನ್ನು ‘ಲಾಕ್ ಅಪ್’ನಲ್ಲಿರುವ 16 ಖೈದಿಗಳ ಉಸ್ತುವಾರಿ ಕಂಗನಾ ಹೆಗಲಿಗೆ; ಏನಿದು ಹೊಸ ಸಮಾಚಾರ?
ಬಾಲಿವುಡ್ ನಟಿ ಕಂಗನಾ ರಣಾವತ್ ‘ಲಾಕ್ ಅಪ್’ ಶೋ ಮೂಲಕ ನಿರೂಪಕಿಯಾಗುತ್ತಿದ್ದಾರೆ. ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ನಲ್ಲಿ ಪ್ರಸಾರವಾಗಲಿರುವ ಇದನ್ನು ಏಕ್ತಾ ಕಪೂರ್ ನಿರ್ಮಿಸುತ್ತಿದ್ದಾರೆ. 16 ಸ್ಪರ್ಧಿಗಳು ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರು ವಿವಿಧ ಟಾಸ್ಕ್ಗಳಲ್ಲಿ ಭಾಗಿಯಾಗುತ್ತಾರೆ. ಇದನ್ನು ನಡೆಸಿಕೊಡುವುದು ಹಾಗೂ ನಿರ್ಣಯ ಮಾಡುವ ಕೆಲಸವನ್ನು ಕಂಗನಾ ಮಾಡಲಿದ್ದಾರೆ.
Updated on: Feb 04, 2022 | 1:03 PM

ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ನಿರೂಪಕಿಯಾಗಿದ್ದಾರೆ. ಹೌದು. ಅವರು ‘ಲಾಕ್ ಅಪ್’ ಎಂಬ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ಣಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಅನ್ನು ನಿರ್ಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಈ ಶೋ ಫೆಬ್ರವರಿ ಅಂತ್ಯದಿಂದ ಪ್ರಸಾರವಾಗಲಿದೆ.

ಗುರುವಾರದಂದು ಮುಂಬೈನಲ್ಲಿ ‘ಲಾಕ್ ಅಪ್’ ಶೋವನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಈ ಶೋ ವಿವಾದಗಳಿಂದ ಕೂಡಿರಲಿದೆ ಎಂದು ಮೊದಲೇ ಘೋಷಿಸಿದ್ದಾರೆ ಏಕ್ತಾ ಕಪೂರ್.

‘ಲಾಕ್ ಅಪ್’ನಲ್ಲಿ 16 ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ಟಾಸ್ಕ್ ನೀಡಲಾಗುತ್ತದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ.

ಕಂಗನಾ ಇದರಲ್ಲಿ ಪೊಲೀಸ್ ಅಧಿಕಾರಿ ರೂಪದಲ್ಲೂ ಇರಲಿದ್ದಾರೆ. ಅರ್ಥಾತ್ ಅವರು ಸ್ಪರ್ಧಿಗಳು ತಪ್ಪು ಮಾಡಿದಾಗ ಎಫ್ಐಆರ್ ನೀಡಲಿದ್ದಾರೆ.

‘ಲಾಕ್ ಅಪ್’ ಶೋನಲ್ಲಿ ಸ್ಪರ್ಧಿಗಳಿಗೆ ಮುಖ್ಯವಾಗಿ ಇರಬೇಕಾದ್ದೇ ಪ್ರಾಮಾಣಿಕತೆ. ಸೋಲು ಗೆಲುವಿಗಿಂತ ಪ್ರಾಮಾಣಿಕತೆ ಮುಖ್ಯ. ಅದೇ ಆಧಾರದಲ್ಲಿ ವಿಜೇತರು ನಿರ್ಧಾರವಾಗಲಿದ್ದಾರೆ ಎಂದಿದ್ದಾರೆ ಕಂಗನಾ.

ಇದುವರೆಗೆ ಕಂಗನಾ ಮೇಲೆ ಎಫ್ಐಆರ್ ದಾಖಲಾಗುತ್ತಿತ್ತು. ಇನ್ನು ಅವರೇ ನೀಡಲಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ಏಖ್ತಾ ಕಪೂರ್. ‘ಲಾಕ್ ಅಪ್’ ಶೋ ಕುರಿತು ಹಾಗೂ ಸ್ಪರ್ಧಿಗಳ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.




