47ರ ಪ್ರಾಯದ ನಟನಿಗೆ 20ರ ಹರೆಯದ ನಟಿ ಜೋಡಿ; ಇದು ಸರಿ ಎಂದು ಸಮರ್ಥಿಸಿಕೊಂಡ ಕಂಗನಾ ರಣಾವತ್​

‘ನಮ್ಮ ಸಿನಿಮಾದ ನಟ-ನಟಿಯ ವಯಸ್ಸಿನ ಅಂತರದ ಬಗ್ಗೆ ಅನೇಕರು ನನಗೆ ಎಚ್ಚರಿಕೆ ನೀಡಿದರು. ಏಜ್​ ಗ್ಯಾಪ್​ ಇದ್ದರೆ ಪರವಾಗಿಲ್ಲ ಬಿಡಿ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

47ರ ಪ್ರಾಯದ ನಟನಿಗೆ 20ರ ಹರೆಯದ ನಟಿ ಜೋಡಿ; ಇದು ಸರಿ ಎಂದು ಸಮರ್ಥಿಸಿಕೊಂಡ ಕಂಗನಾ ರಣಾವತ್​
ಅವನೀತ್ ಕೌರ್, ನವಾಜುದ್ದೀನ್ ಸಿದ್ಧಿಖಿ
TV9kannada Web Team

| Edited By: Madan Kumar

Feb 11, 2022 | 9:11 AM

ನಟಿ ಕಂಗನಾ ರಣಾವತ್​ (Kangana Ranaut) ಅವರು ಸದಾ ಕಾಲ ವಿವಾದ ಮಾಡಿಕೊಳ್ಳುತ್ತಲೇ ಸುದ್ದಿ ಆಗುತ್ತಾರೆ. ಅದರ ನಡುವೆಯೂ ಅವರು ಸಿನಿಮಾ ಕೆಲಸಗಳನ್ನು ಬಹಳ ವೇಗವಾಗಿ ಮುಗಿಸುತ್ತಾರೆ. ನಟನೆಯ ಜೊತೆಗೆ ನಿರ್ಮಾಣದಲ್ಲೂ ಅವರೀಗ ತೊಡಗಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಮಣಿಕರ್ಣಿಕಾ ಫಿಲ್ಮ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿರುವ ಕಂಗನಾ ರಣಾವತ್​ ಅವರು ‘ಟೀಕು ವೆಡ್ಸ್​ ಶೇರು’ ಚಿತ್ರಕ್ಕೆ ನಿರ್ಮಾಪಕಿ ಆಗಿದ್ದಾರೆ. ಈ ಸಿನಿಮಾದಲ್ಲಿ ನವಾಜುದ್ದೀನ್​ ಸಿದ್ದಿಖಿ (Nawazuddin Siddiqui) ಹೀರೋ. ಅವರಿಗೆ ಜೋಡಿಯಾಗಿ ಅವನೀತ್​ ಕೌರ್​ (Avneet Kaur) ಅಭಿನಯಿಸಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಕೆಲವು ಪೋಸ್ಟರ್​ಗಳ ಮೂಲಕ ಗಮನ ಸೆಳೆಯಲಾಗಿದೆ. ನವಾಜುದ್ದೀನ್​ ಸಿದ್ದಿಖಿ ಅವರಂತಹ ಪ್ರತಿಭಾವಂತ ನಟ ಈ ಸಿನಿಮಾದಲ್ಲಿ ಹೀರೋ ಎಂಬುದು ಅವರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಆದರೆ ಒಂದು ವಿಚಾರದ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್​ ವಯಸ್ಸಿನ ನಡುವೆ ಬರೋಬ್ಬರಿ 27 ವರ್ಷಗಳ ಅಂತರ ಇದೆ. ಅದಕ್ಕೆ ಕಂಗನಾ ರಣಾವತ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನವಾಜುದ್ದೀನ್​ ಸಿದ್ದಿಖಿ ಅವರಿಗೆ ಈಗ 47 ವರ್ಷ ವಯಸ್ಸು. ಅವರಿಗೆ ಜೋಡಿ ಆಗಿರುವ ಅವನೀತ್​ ಕೌರ್​ ಅವರು ಈಗಿನ್ನೂ 20ರ ಪ್ರಾಯದವರು. ಇವರಿಬ್ಬರನ್ನು ಜೋಡಿ ಮಾಡುವುದು ಸೂಕ್ತವಲ್ಲ ಎಂದು ಕೆಲವರು ಕಂಗನಾಗೆ ಬುದ್ಧಿಮಾತು ಹೇಳಿದ್ದರು. ಆದರೆ ಅದನ್ನು ಕಂಗನಾ ಕೇಳಿಲ್ಲ. ನಿರ್ಮಾಪಕಿಯಾಗಿ ತಮ್ಮ ಸಿನಿಮಾದ ಕಲಾವಿದರ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಅದಕ್ಕೆ ಅವರು ಸೂಕ್ತ ಕಾರಣವನ್ನೂ ನೀಡಿದ್ದಾರೆ.

‘ನಟ-ನಟಿಯ ವಯಸ್ಸಿನ ಅಂತರದ ಬಗ್ಗೆ ಅನೇಕರು ನನಗೆ ಎಚ್ಚರಿಕೆ ನೀಡಿದರು. ಏಜ್​ ಗ್ಯಾಪ್​ ಇದ್ದರೆ ಪರವಾಗಿಲ್ಲ ಬಿಡಿ. ಅದು ನಮ್ಮ ಸಿನಿಮಾದ ಕಥೆಗೆ ಸೂಕ್ತ ಆಗುತ್ತದೆ. ಈ ಚಿತ್ರಕ್ಕೆ ನಾಯಕಿಯಾಗಿ ಅವನೀತ್​ ಸೂಕ್ತ ಎಂಬುದು ನನ್ನ ಅಭಿಪ್ರಾಯ. ನವಾಜುದ್ದೀನ್​ ಜೊತೆ ಅವರ ಜೋಡಿ ಸೂಪರ್​ ಹಿಟ್​ ಆಗಲಿದೆ. ಮುಂದೇನಾಗುತ್ತೋ ನೋಡೋಣ. ಬಾಕಿ ಎಲ್ಲವೂ ನಿಮ್ಮ ಕೈಯಲ್ಲಿದೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ನಟಿ ಅವನೀತ್​ ಕೌರ್​ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ‘ಚಂದ್ರ ನಂದಿನಿ’, ‘ಅಲ್ಲಾದಿನ್​’ ಮುಂತಾದ ಸೀರಿಯಲ್​ಗಳ ಮೂಲಕ ಅವರು ಮನೆಮಾತಾಗಿದ್ದಾರೆ. ಈಗ ನವಾಜುದ್ದೀನ್​ ಅವರಂತಹ ಅನುಭವಿ ನಟನ ಜೊತೆ ಕೆಲಸ ಮಾಡುವ ಅವಕಾಶವನ್ನು ಅವನೀತ್​ ಪಡೆದುಕೊಂಡಿದ್ದಾರೆ. ‘ಟೀಕು ವೆಡ್ಸ್​ ಶೇರು’ ಸಿನಿಮಾ ಮೂಲಕ ಅವರು ಬಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಕಂಗನಾ ರಣಾವತ್​ ಅವರ ಪ್ರೊಡಕ್ಷನ್​ ಹೌಸ್​ನ ಚಿತ್ರದಲ್ಲಿ ಅಭಿನಯಿಸುವ ಚಾನ್ಸ್​ ಅವರಿಗೆ ಸಿಕ್ಕಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಸಾಯಿ ಕಬೀರ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಚಿತ್ರರಂಗದಲ್ಲಿ ನೆಪೋಟಿಸಂಗಿಂತಲೂ ಈ ಸಮಸ್ಯೆ ಬಹಳ ಅಪಾಯಕಾರಿ’; ಮುಕ್ತವಾಗಿ ಹೇಳಿಕೊಂಡ ನವಾಜುದ್ದೀನ್ ಸಿದ್ದಿಕಿ

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada