ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

‘ಲಾಕ್​ ಅಪ್​’ ಸುದ್ದಿಗೋಷ್ಠಿಯಲ್ಲಿ ತಮಗೆ ಸಂಬಂಧವೇ ಇಲ್ಲದ ದೀಪಿಕಾ ಪಡುಕೋಣೆ ವಿಚಾರವನ್ನು ಎಳೆದು ತಂದಿದ್ದಕ್ಕಾಗಿ ಪತ್ರಕರ್ತನಿಗೆ ಕಂಗನಾ ರಣಾವತ್​ ಚಳಿ ಬಿಡಿಸಿದರು. ಅದು ವಿವಾದಕ್ಕೆ ಕಾರಣ ಆಗಿದೆ.

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​
ಕಂಗನಾ ರಣಾವತ್​, ದೀಪಿಕಾ ಪಡುಕೋಣೆ
Follow us
TV9 Web
| Updated By: ಮದನ್​ ಕುಮಾರ್​

Updated on:Feb 04, 2022 | 8:15 AM

ನಟಿ ಕಂಗನಾ ರಣಾವತ್ (Kangana Ranaut)​ ಅವರ ವ್ಯಕ್ತಿತ್ವ ಯಾವ ರೀತಿ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ಆ ವಿಚಾರದಲ್ಲಿ ಕಾಂಟ್ರವರ್ಸಿ ಆದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ನೇರ ನಡೆ-ನುಡಿಯ ಕಾರಣದಿಂದ ಬಾಲಿವುಡ್​ನಲ್ಲಿ ಕಂಗನಾ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇಂದು ಅವರು ಓರ್ವ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಕಂಗನಾ ಅವರ ಹೊಸ ರಿಯಾಲಿಟಿ ಶೋ ‘ಲಾಕ್​ ಅಪ್​’ ಆರಂಭ ಆಗುತ್ತಿದೆ. ಇದರ ಪ್ರಚಾರದ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಇದರಲ್ಲಿ ಪತ್ರಕರ್ತರೊಬ್ಬರು ನಟಿ ದೀಪಿಕಾ ಪಡುಕೋಣೆ ( Deepika Padukone) ಬಟ್ಟೆಯ ಕಾಂಟ್ರವರ್ಸಿ ಬಗ್ಗೆ ಪ್ರಸ್ತಾಪ ಮಾಡಿದರು. ಅದರಿಂದ ಕಂಗನಾಗೆ ಕೊಂಚ ಕಿರಿಕಿರಿ ಆಯಿತು. ಅವರು ನೇರವಾಗಿಯೇ ಅದಕ್ಕೆ ತಿರುಗೇಟು ನೀಡಿದರು. ಈ ಸುದ್ದಿಗೋಷ್ಠಿಗೆ ಸಂಬಂಧವೇ ಇಲ್ಲದ ದೀಪಿಕಾ ಪಡುಕೋಣೆ ಬಗ್ಗೆ ಪ್ರಶ್ನೆ ಎದುರಾಗಿದ್ದು ಯಾಕೆ ಎಂಬುದನ್ನು ಕಂಗನಾ ರಣಾವತ್​ ಅವರು ಸ್ಥಳದಲ್ಲೇ ಬಯಲು ಮಾಡಿದರು. ಇದೆಲ್ಲವೂ ದೀಪಿಕಾ ನಟನೆಯ ‘ಗೆಹರಾಯಿಯಾ’ (Gehraiyaan Movie) ಸಿನಿಮಾದ ಪ್ರಚಾರ ತಂತ್ರ ಎಂದು ಕಂಗನಾ ಖಡಕ್​ ಉತ್ತರ ನೀಡಿದರು.

ದೀಪಿಕಾ ಪಡುಕೋಣೆ ನಟಿಸಿರುವ ‘ಗೆಹರಾಯಿಯಾ’ ಸಿನಿಮಾ ಹಲವು ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಸಖತ್​ ಬೋಲ್ಡ್​ ಆಗಿ ನಟಿಸಿದ್ದಾರೆ. ಅಲ್ಲದೇ ಪ್ರಚಾರದ ಸಮಯದಲ್ಲೂ ಅವರು ಚಿಕ್ಕ ಬಟ್ಟೆ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಕೆಲವು ನೆಟ್ಟಗರು ಟ್ರೋಲ್​ ಮಾಡಿದ್ದರು. ಟ್ರೋಲ್​ ಮಾಡಿದವರ ವಿರುದ್ಧ ಸೆಲೆಬ್ರಿಟಿಗಳು ಗರಂ ಆಗಿದ್ದರು. ಇದೇ ವಿಚಾರವನ್ನು ಕಂಗನಾಗೆ ಕೇಳಲಾಯಿತು. ‘ಲಾಕ್​ ಅಪ್​’ ಸುದ್ದಿಗೋಷ್ಠಿಯಲ್ಲಿ ತಮಗೆ ಸಂಬಂಧವೇ ಇಲ್ಲದ ವಿಚಾರವನ್ನು ಎಳೆದು ತಂದಿದ್ದಕ್ಕಾಗಿ ಆ ಪತ್ರಕರ್ತನಿಗೆ ಕಂಗನಾ ಚಳಿ ಬಿಡಿಸಿದರು.

‘ಯಾರಿಗೆ ಧ್ವನಿ ಇಲ್ಲವೋ ಅವರ ಪರವಾಗಿ ಮಾತನಾಡಲು ನಾನು ಇಲ್ಲಿದ್ದೇನೆ. ದೀಪಿಕಾ ಪರವಾಗಿ ನಾನೇಕೆ ಮಾತನಾಡಬೇಕು? ಅವರೇ ಈ ಬಗ್ಗೆ ವಾದ ಮಾಡಬಹುದು. ಇಲ್ಲಿ ನಾನು ಅವರ ಸಿನಿಮಾವನ್ನು ಪ್ರಚಾರ ಮಾಡಲು ಸಾಧ್ಯವಿಲ್ಲ, ಕುಳಿತುಕೊಳ್ಳಿ’ ಎಂದು ಪತ್ರಕರ್ತನಿಗೆ ಕಂಗನಾ ತಿರುಗೇಟು ನೀಡಿದರು. ಅಷ್ಟಕ್ಕೇ ಸುಮ್ಮನಾಗದ ಪತ್ರಕರ್ತನಿಂದ ಮತ್ತೆ ಪ್ರಶ್ನೆ ಮುಂದುವರಿಯಿತು. ಆಗ ಕಂಗನಾ ಇನ್ನಷ್ಟು ಗರಂ ಆದರು.

‘ನೀವು ಆ ಸಿನಿಮಾದ ಹೆಸರು ಹೇಳಿದ್ದೀರಿ. ಆ ಸಿನಿಮಾದ ಪಬ್ಲಿಸಿಟಿ ಟೀಮ್​ನವರೇ ನಿಮ್ಮನ್ನು ಇಲ್ಲಿಗೆ ಕಳಿಸಿದ್ದಾರೆ. ಅಷ್ಟನ್ನೂ ಅರ್ಥ ಮಾಡಿಕೊಳ್ಳದೇ ಇರುವಷ್ಟು ಮುಗ್ಧೆ ನಾನಲ್ಲ’ ಎಂದು ಕಂಗನಾ ಉತ್ತರಿಸಿದರು. ಅವರು ಉತ್ತರ ನೀಡಿದ ಧಾಟಿ ಸ್ವಲ್ಪ ಕಟುವಾಗಿತ್ತು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ ಅಭಿನಯದ ‘ಗೆಹರಾಯಿಯಾ’ ಸಿನಿಮಾ ಫೆ.11ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆ ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ:

‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?

ಇತರರಿಗೆ ಕೊವಿಡ್​ ಹರಡುವಂತೆ ವರ್ತಿಸಿದ ಕಂಗನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್: ನಟಿ ಮಾಡಿದ ತಪ್ಪೇನು?​

Published On - 8:06 am, Fri, 4 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ