ಜ್ಞಾನ, ಸಮಾನತೆ, ಆಧ್ಯಾತ್ಮಿಕ ಭಾವವನ್ನು ನೀಡುವ ಸಮಾನತೆಯ ಮೂರ್ತಿಯ ಪ್ರತಿಮೆಯ ಕಣ್ತುಂಬಿಕೊಳ್ಳಲು ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಅಲ್ಲಿಗೆ ಬರುತ್ತಿದ್ದಾರೆ. ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಸಮಾನತೆಯ ಪ್ರತಿಮೆ ವಿಶ್ವದಲ್ಲೇ ಎರಡನೇ ಅತ್ಯಂತ ಎತ್ತರದ ಕುಳಿತ ಭಂಗಿಯಲ್ಲಿ ಇರುವ ವಿಗ್ರಹ ಎಂದು ಖ್ಯಾತಿ ಪಡೆದಿದೆ. ಸ್ಥಳಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿತ ಗಣ್ಯರು ಆಗಮಿಸಿದ್ದಾರೆ.
ಅದರಂತೆ, ಚಿರಂಜೀವಿ ಸಮಾನತೆಯ ಪ್ರತಿಮೆಯ ಸಹಿತ 108 ದಿವ್ಯ ದೇಶಗಳಿಗೆ ಭೇಟಿ ನೀಡಿದ್ದಾರೆ. ಮೈ ಹೋಮ್ ಗ್ರೂಪ್ನ ಚೇರ್ಮನ್ ಡಾ. ರಾಮೇಶ್ವರ್ ರಾವ್ ಚಿರಂಜೀವಿ ದಂಪತಿಗಳಿಗೆ ಸಮಾನತೆಯ ಪ್ರತಿಮೆಯನ್ನು, ದಿವ್ಯದೇಶ ಪ್ರದೇಶವನ್ನು ವಿವರಣೆ ನೀಡಿದ್ದಾರೆ. ಅಲ್ಲದೆ, ಜ್ಯೂನಿಯರ್ ಎನ್‌ಟಿಆರ್ ಅವರ ಕುಟುಂಬ ಸದಸ್ಯರು ಕೂಡ ಸಮಾನತೆಯ ಮೂರ್ತಿ ಭವ್ಯ ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಜ್ಞಶಾಲೆಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜು ಸಹಿತ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಿನ್ನೆ ಸಮತಾ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಸಹಸ್ರಾಬ್ದಿಯ 11ನೇ ದಿನವಾದ ಇಂದು, ಭೀಷ್ಮ ಏಕಾದಶಿ ನಿಮಿತ್ತ ವಿಷ್ಣು ಸಹಸ್ರನಾಮ ಪಠಿಸಲಾಗಿತ್ತು. ದೀಪೋತ್ಸವ, ಪ್ರದಕ್ಷಿಣೆಯಲ್ಲಿ ಭಕ್ತರು ಮಗ್ನರಾಗಿದ್ದರು.
ಇದನ್ನೂ ಓದಿ: Ramanujacharya Sahasrabdi: ರಾಮಾನುಜಾಚಾರ್ಯರ ಬೋಧನೆಗಳು ಎಲ್ಲರಿಗೂ ಆದರ್ಶ: ಅಮಿತ್ ಶಾ
ಇದನ್ನೂ ಓದಿ: ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ