Ramanujacharya Sahasrabdi: ರಾಮಾನುಜಾಚಾರ್ಯರ ಬೋಧನೆಗಳು ಎಲ್ಲರಿಗೂ ಆದರ್ಶ: ಅಮಿತ್ ಶಾ
Statue of Equality: ಶ್ರೀರಾಮಾನುಜರು ಪ್ರತಿಯೊಂದು ಜೀವವನ್ನು ಸಮಾನತೆಯಿಂದ ನೋಡಿದ್ದರು. ಹೀಗಾಗಿ ಹಲವು ವರ್ಷಗಳ ಬಳಿಕವೂ ಅವರ ಸೇವೆ ಉಳಿದಿದೆಎಂದು ಅಮಿತ್ ಶಾ ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಹೈದರಾಬಾದ್: ಶ್ರೀರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ನಿರ್ಮಿಸಿದ್ದಕ್ಕೆ ಸಂತಸವಾಗುತ್ತಿದೆ. ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ್ದು ನನ್ನ ಅದೃಷ್ಟ. ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಚಿನ್ನಜೀಯರ್ ಶ್ರೀಗೆ ಧನ್ಯವಾದ. ಸಮಾನತೆಗಾಗಿ ಶ್ರೀರಾಮಾನುಜಾಚಾರ್ಯರು ಶ್ರಮಿಸಿದ್ದರು. ಶ್ರೀರಾಮನಗರಂ ಭೇಟಿ ಹೊಸ ಅನುಭವನ್ನು ನೀಡಿದೆ. ಸನಾತನ ಧರ್ಮ ಎಲ್ಲದಕ್ಕೂ ಮೂಲ ಎಂದು ಸಮಾನತೆ ಹರಿಕಾರ ರಾಮಾನುಜಾಚಾರ್ಯರು ನಿರೂಪಿಸಿದ್ದರು. ರಾಮಾನುಜಾಚಾರ್ಯರ ಬೋಧನೆಗಳು ಎಲ್ಲರಿಗೂ ಆದರ್ಶ ಎಂದು ಹೈದರಾಬಾದ್ನ ಹೊರವಲಯದಲ್ಲಿ ಇರುವ ಮುಂಚಿತ್ತಲ್ನಲ್ಲಿನ ರಾಮಾನುಜಾಚಾರ್ಯರ ಪ್ರತಿಮೆ ಸ್ಥಳದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಂಗಳವಾರ ತಿಳಿಸಿದ್ದಾರೆ.
ಸನಾತನ ಧರ್ಮ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಶ್ರೀರಾಮಾನುಜರು ಪ್ರತಿಯೊಂದು ಜೀವವನ್ನು ಸಮಾನತೆಯಿಂದ ನೋಡಿದ್ದರು. ಹೀಗಾಗಿ ಹಲವು ವರ್ಷಗಳ ಬಳಿಕವೂ ಅವರ ಸೇವೆ ಉಳಿದಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಎಂದು ಅಮಿತ್ ಶಾ ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡಿದ್ದಾರೆ.
ಹೈದರಾಬಾದ್ ಬಳಿ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುಚ್ಚಿಂತಲ್ನ ಶ್ರೀರಾಮಾನುಜಾಚಾರ್ಯರ ಪ್ರತಿಮೆ ಸ್ಥಳಕ್ಕೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಯಜ್ಞ ಶಾಲೆಗೆ ಭೇಟಿ ನೀಡಿದ್ದಾರೆ. ಹೈದರಾಬಾದ್ಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ರಿಂದ ಸ್ವಾಗತ ಲಭಿಸಿದೆ. ಬರೋಬ್ಬರಿ 45 ಎಕರೆ ವಿಶಾಲ ಪ್ರದೇಶದಲ್ಲಿ ರಾಮಾನುಜರ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಮುಂಚಿತ್ತಲ್ಗೆ ಚಿನ್ನಜೀಯರ್ ಸ್ವಾಮೀಜಿ ಹಾಗೂ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ. ರಾಮೇಶ್ವರ ರಾವ್ರಿಂದ ಸ್ವಾಗತ ಲಭಿಸಿದೆ. ಇಲ್ಲಿ ನಿರ್ಮಾಣ ಆಗಿರುವ ದಿವ್ಯ ಸಾಕೇತಂ ಆಶ್ರಮದಲ್ಲಿ 108 ದೇವಾಲಯಗಳ ವಿಶೇಷತೆ, ರಾಮಾನುರ 216 ಅಡಿ ಪ್ರತಿಮೆ ಬಗ್ಗೆ ಅಮಿತ್ ಶಾಗೆ ವಿವರಣೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಾಧು-ಸಂತರಿಗೆ ಧನ್ಯವಾದ. ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿದ್ದಕ್ಕೆ ಸಂತಸವಾಗುತ್ತಿದೆ. ರಾಮಾನುಜರ ಆಶೀರ್ವಾದವನ್ನು ಅಮಿತ್ ಶಾ ಪಡೆದಿದ್ದಾರೆ. ಸಮಾನತೆ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಸಮಾನತೆಗಾಗಿ ಶ್ರೀರಾಮಾನುಜಾಚಾರ್ಯರು ಶ್ರಮಿಸಿದ್ದರು. ಸಮಾನತೆಯ ಸಂದೇಶವನ್ನು ಸಾರಲು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಚಿನ್ನಜೀಯರ್ ಸ್ವಾಮೀಜಿ ಮಾತನಾಡಿದ್ದಾರೆ.
ಇದನ್ನೂ ಓದಿ: ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ
ಇದನ್ನೂ ಓದಿ: Statue of Equality: ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಲೋಕಾರ್ಪಣೆ; ಫೋಟೊಗಳು ಇಲ್ಲಿವೆ