AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ

Statue of Equality: ಹೈದರಾಬಾದ್​ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್​ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದ್ದಾರೆ.

ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತ ರಾಮಾನುಜಾಚಾರ್ಯ; ಅವರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ganapathi bhat

Updated on:Feb 05, 2022 | 7:46 PM

Ramanujacharya Statue| ಹೈದರಾಬಾದ್: ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ. ಯುಗಯುಗಗಳವರೆಗೆ ನಾವು ಮಾನವತ್ವಕ್ಕೆ ದಿಕ್ಕನ್ನು ತೋರಿಸಿದ್ದೇವೆ. ಮಾನವೀಯತೆ ಶಕ್ತಿಗೆ ಮೂರ್ತ ರೂಪ ನೀಡಲಾಗಿದೆ. ಪ್ರತಿಮೆ ಮುಂದಿನ ಪೀಳಿಗೆಗೆ ಮಾತ್ರ ಪ್ರೇರಣೆ ನೀಡಲ್ಲ. ಭಾರತದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಕಾರ್ಯ ಕೈಗೊಂಡ ರಾಮಾನುಜಾಚಾರ್ಯರ ಅನುಯಾಯಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್​ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆ (Statue Of Equality) ಅನಾವರಣಗೊಳಿಸಿ ಅವರು ಮಾತನಾಡಿದ್ದಾರೆ.

ವಸಂತಪಂಚಮಿ ದಿನ ಪ್ರತಿಮೆ ಅನಾವರಣಗೊಳಿಸಿದ್ದಕ್ಕೆ ಸಂತೋಷವಾಗಿದೆ. ಶಾರದಾ ಮಾತೆ ಕೃಪೆಯಲ್ಲಿ ರಾಮಾನುಜರ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಜಗದ್ಗುರು ಶ್ರೀ ರಾಮಾನುಜಾಚಾರ್ಯರು ವಿಶ್ವಕ್ಕೇ ಜ್ಞಾನ ಪಥ. ಗುರು ಮಾಧ್ಯಮ ಮೂಲಕವೇ ನಮಗೆಲ್ಲಾ ಜ್ಞಾನ ಪ್ರಸರಣ ಆಗುತ್ತದೆ. ಭವ್ಯವಾದ ವಿಶಾಲ ಮೂರ್ತಿಯು ಮಾನವ ಸಂಕುಲಕ್ಕೇ ಪ್ರೇರಣೆ ಎಂದು ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಪ್ರಧಾನಿ ಮೋದಿ ತಿಳಿಸಿದ್ದಾರೆ.

ರಾಮಾನುಜಾಚಾರ್ಯರು ತಮ್ಮ ಇಡೀ ಜೀವನವನ್ನು ಕರ್ಮಕ್ಕಾಗಿ ಸಮರ್ಪಿಸಿದರು. ರಾಮಾನುಜರ ಮಂದಿರಗಳಲ್ಲಿ ತಿರುಪ್ಪಾವೈ ಇಲ್ಲದೆ ಏನೂ ನಡೆಯಲ್ಲ. ಪ್ರಗತಿಶೀಲತೆ, ಪ್ರಾಚೀನತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಾಮಾನುಜರು ದಲಿತರು, ಹಿಂದುಳಿದವರನ್ನು ಆಲಿಂಗನ ಮಾಡಿದರು. ಜಾತಿಯಿಂದಲ್ಲ ಗುಣದಿಂದ ಕಲ್ಯಾಣವಾಗುತ್ತೆ. ರಾಮ ತನ್ನ ಕೈಯಿಂದ ಜಟಾಯು ಅಂತ್ಯಸಂಸ್ಕಾರ ಮಾಡಿದ. ಹೀಗಾಗಿ ಭೇದಭಾವ ಏಕೆ ಎಂದು ಹೇಳಿದರು. ಸಮಾಜದ ಅನಿಷ್ಟಗಳ ವಿರುದ್ಧ ತಮ್ಮ ಪೂರ್ತಿ ಶಕ್ತಿ ವಿನಿಯೋಗಿಸಿ ಹೋರಾಟ ಮಾಡಿದರು ಎಂದು ರಾಮಾನುಜಾಚಾರ್ಯರ ಬಗ್ಗೆ ಮಾತನಾಡಿದ್ದಾರೆ.

ರಾಮಾನುಜಾಚಾರ್ಯರು ಸಂಸ್ಕೃತ ಗ್ರಂಥ ರಚನೆಯ ಜತೆಯಲ್ಲಿ ತಮಿಳು ಭಾಷೆಗೆ ಮಹತ್ವ ನೀಡಿದ್ದರು. ಸಾಮಾಜ ಸುಧಾರಣಾಕಾರರ ಬಗ್ಗೆ ಸಮಾಜದಲ್ಲಿ ಚರ್ಚೆ ಆಗುತ್ತೆ. ಪ್ರಾಚೀನತೆ, ಪ್ರಗತಿಶೀಲರು ಯಾರೆಂದು ಸಂತರಲ್ಲಿ ಗೊತ್ತಾಗುತ್ತೆ. ಪ್ರಗತಿಶೀಲತೆಯಿಂದ ಹೆಸರಾದವರೇ ಶ್ರೀರಾಮಾನುಜಾಚಾರ್ಯ. ಸಮಾಜದ ಸುಧಾರಣೆಗೆ ಶ್ರಮಿಸಿದವರು ರಾಮಾನುಜಾಚಾರ್ಯ. ದಲಿತರ ಉದ್ಧಾರಕ್ಕಾಗಿ ರಾಮಾನುಜಾಚಾರ್ಯರ ಪರಿಶ್ರಮ ಇದೆ. ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತರು ರಾಮಾನುಜಾಚಾರ್ಯ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಕೂಡ ರಾಮಾನುಜರನ್ನು ಪ್ರಶಂಸಿಸುತ್ತಿದ್ದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದ್ದರು. ಕನಕದಾಸರು ಕನ್ನಡದಲ್ಲಿ ರಾಮಾನುಜರನ್ನು ಪ್ರಶಂಸಿಸಿದ್ದಾರೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟ ಅಧಿಕಾರಕ್ಕಾಗಿ ನಡೆದದ್ದಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾನವತೆ, ಆಧ್ಯಾತ್ಮಿಕತೆ ಇತ್ತು ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.

ಇಲ್ಲಿ 108 ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೇ ಸ್ಥಳದಲ್ಲಿ 108 ಮಂದಿರಗಳ ದರ್ಶನ ಸಿಗುತ್ತಿದೆ. ಚಿನ್ನಜೀಯರ್ ಶ್ರೀಗಳ ಸ್ನೇಹದಿಂದ ಪೂರ್ಣಾಹುತಿಯಲ್ಲಿ ಭಾಗಿ ಆಗಿದ್ದೇನೆ. ಇದನ್ನು ದೇಶದ ಜನರ ಕನಸು ನನಸಾಗಿಸಲು ಸಮರ್ಪಿಸುವೆ. ಭಾರತದಲ್ಲಿ ಜ್ಞಾನವನ್ನು ಖಂಡನೆ, ಮಂಡನೆ, ಸ್ವೀಕೃತಿ ಮಾಡಲಾಗುತ್ತೆ. ನಮ್ಮಲ್ಲಿ ದ್ವೈತ, ಅದ್ವೈತ ಎರಡೂ ಇವೆ. ರಾಮಾನುಜರ ವಿಶಿಷ್ಟ ಅದ್ವೈತ ಸಿದ್ಧಾಂತ ನಮಗೆ ಪ್ರೇರಣೆ. ರಾಮಾನುಜರ ಭಾಷ್ಯಗಳಲ್ಲಿ ಜ್ಞಾನದ ಪರಾಕಾಷ್ಠೆ ಇದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಹೈದಾರಾಬಾದ್ ಅನ್ನು ಭಾಗ್ಯನಗರ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ. ಇಲ್ಲಿ ತೆಲುಗು ಸಂಸ್ಕೃತಿಯನ್ನು ಸಮೃದ್ಧಿಗೊಳಿಸಲಾಗಿದೆ. ರಾಮಾನುಜಾಚಾರ್ಯರ ಬೋಧನೆಗಳು ಸಮಾಜಕ್ಕೆ ದಾರಿದೀಪ ಎಂದು ಹೇಳಿದ್ದಾರೆ. ಈ ವೇಳೆ, ತೆಲುಗು ಚಿತ್ರರಂಗ ಇಡೀ ವಿಶ್ವಕ್ಕೇ ವ್ಯಾಪಿಸಿದೆ ಎಂದೂ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Statue of Equality: ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಲೋಕಾರ್ಪಣೆ; ಫೋಟೊಗಳು ಇಲ್ಲಿವೆ

ಇದನ್ನೂ ಓದಿ: PM Modi Ramanuja statue Inauguration Live: ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ

Published On - 7:40 pm, Sat, 5 February 22

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?