‘ಗೆಹರಾಯಿಯಾ’ ರಿಲೀಸ್​ ಆದ ಬಳಿಕ ಹೊರಬಿತ್ತು ಸಿನಿಮಾ ತಂಡದ 100 ಕೋಟಿ ರೂಪಾಯಿ ಡೀಲ್​ ವಿಚಾರ

ಆಧುನಿಕ ಜಗತ್ತಿನ ಸಂಬಂಧಗಳು ಹೇಗೆ ಗೊಂದಲಮಯ ಆಗುತ್ತಿದೆ ಎನ್ನುವ ವಿಚಾರವನ್ನು ‘ಗೆಹರಾಯಿಯಾ’ ಹೇಳುತ್ತಿದೆ. ಈ ಚಿತ್ರದ ಬಗ್ಗೆ ದೀಪಿಕಾ ಮೊದಲಿನಿಂದಲೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಲೇ ಬರುತ್ತಿದ್ದರು. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

‘ಗೆಹರಾಯಿಯಾ’ ರಿಲೀಸ್​ ಆದ ಬಳಿಕ ಹೊರಬಿತ್ತು ಸಿನಿಮಾ ತಂಡದ 100 ಕೋಟಿ ರೂಪಾಯಿ ಡೀಲ್​ ವಿಚಾರ
ಗೆಹರಾಯಿಯಾ ಸಿನಿಮಾ ಪೋಸ್ಟರ್
TV9kannada Web Team

| Edited By: Rajesh Duggumane

Feb 12, 2022 | 5:57 PM

ಕೊರೊನಾ ಮೂರನೇ ಅಲೆ (Covid 3rd Wave) ನಿಧಾನವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ, ಸಾಲುಸಾಲು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ದೊಡ್ಡ ಬಜೆಟ್​ನ ಚಿತ್ರಗಳು ಕಾದುಕೂತು ರಿಲೀಸ್​ ದಿನಾಂಕವನ್ನು ಘೋಷಣೆ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ಕೆಲ ಚಿತ್ರಗಳು ಒಟಿಟಿ ಹಾದಿ ಹಿಡಿದಿವೆ. ದೀಪಿಕಾ ಪಡುಕೋಣೆ (Deepika Padukone) ಹಾಗೂ ಸಿದ್ಧಾಂತ್​ ಚತುರ್ವೇದಿ ನಟನೆಯ ‘ಗೆಹರಾಯಿಯಾ’ ಚಿತ್ರ (Gehraiyaan Movie) ಕೂಡ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಚಿತ್ರವನ್ನು ಖರೀದಿಸಲು ಅಮೇಜಾನ್​ ಪ್ರೈಮ್​ ವಿಡಿಯೋ ಕೊಟ್ಟ ಮೊತ್ತ ಎಷ್ಟು ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರಹಾಕುತ್ತಿದ್ದಾರೆ. ಈ ಡೀಲ್​ ವಿಚಾರ ಕೇಳಿ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಆಧುನಿಕ ಜಗತ್ತಿನ ಸಂಬಂಧಗಳು ಹೇಗೆ ಗೊಂದಲಮಯ ಆಗುತ್ತಿದೆ ಎನ್ನುವ ವಿಚಾರವನ್ನು ‘ಗೆಹರಾಯಿಯಾ’ ಹೇಳುತ್ತಿದೆ. ಈ ಚಿತ್ರದ ಬಗ್ಗೆ ದೀಪಿಕಾ ಮೊದಲಿನಿಂದಲೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಲೇ ಬರುತ್ತಿದ್ದರು. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ದೀಪಿಕಾ ನಟನೆಗೆ ಎಲ್ಲ ಕಡೆಗಳಿಂದಲೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾವನ್ನು ಅಮೇಜಾನ್​ ಪ್ರೈಮ್​ ವಿಡಿಯೋ ಬರೋಬ್ಬರಿ 100 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನುವ ಮಾಹಿತಿ ಈಗ ಹೊರಬಿದ್ದಿದೆ.

ಕೆಲ ಸಿನಿಮಾಗಳು ಚಿತ್ರಮಂದಿರದಲ್ಲಿ ರಿಲೀಸ್​ ಆದ ಬಳಿಕ ಒಟಿಟಿಗೆ ಕಾಲಿಡುತ್ತವೆ. ಈ ಸಂದರ್ಭದಲ್ಲಿ ನಿರ್ಮಾಪಕರಿಗೆ ಒಟಿಟಿ ಪ್ಲಾಟ್​ಫಾರ್ಮ್​ಗಳು ಕಡಿಮೆ ಮೊತ್ತವನ್ನು ಆಫರ್ ಮಾಡುತ್ತಾರೆ. ಆದರೆ, ನೇರವಾಗಿ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಚಿತ್ರತಂಡಕ್ಕೆ ದೊಡ್ಡ ಮೊತ್ತ ಸಿಗಲಿದೆ. ಅದೇ ರೀತಿ, ‘ಗೆಹರಾಯಿಯಾ’ ಚಿತ್ರಕ್ಕೆ 100 ಕೋಟಿ ರೂಪಾಯಿ ನೀಡಿದೆ ಎನ್ನಲಾಗಿದೆ. ಒಟಿಟಿ ಪ್ಲಾಟ್​ಫಾರ್ಮ್​ ವ್ಯಾಪ್ತಿ ಹೆಚ್ಚುತ್ತಿದ್ದಂತೆ ಅವುಗಳ ಮಧ್ಯೆ ಸ್ಪರ್ಧೆ ಹೆಚ್ಚಿದೆ. ಹೀಗಾಗಿ, ಸ್ಟಾರ್​ ನಟ/ನಟಿಯರ ಚಿತ್ರಗಳನ್ನು ಖರೀದಿ ಮಾಡೋಕೆ ಅನೇಕರು ಮುಂದೆ ಬರುತ್ತಿದ್ದಾರೆ.

‘ಗೆಹರಾಯಿಯಾ’ ಚಿತ್ರದಲ್ಲಿ ಕೆಲವು ಟ್ವಿಸ್ಟ್​ಗಳಿವೆ. ಆ ಬಗ್ಗೆಯೂ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕ್ಲೈಮ್ಯಾಕ್ಸ್​ನ ದೃಶ್ಯ ಸಾಕಷ್ಟು ಜನರಿಗೆ ಖುಷಿ ನೀಡಿದೆ. ದೀಪಿಕಾ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಯೋಗ ಟೀಚರ್​ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರತಿ ಫ್ರೇಮ್​ನಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಪ್ರಬುದ್ಧವಾಗಿ ನಟಿಸಿದ್ದಾರೆ. ಅವರ ನಟನೆ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಸಿದ್ಧಾಂತ್​ ಚತುರ್ವೇದಿ ಅವರಿಗೆ ಈ ಸಿನಿಮಾದಿಂದ ದೊಡ್ಡ ಮೈಲೇಜ್​ ಸಿಗೋದು ಪಕ್ಕಾ. ಅವರು ತೆರೆಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಅನನ್ಯಾ ಪಾಂಡೆ ಅವರಿಗೆ ಈ ಚಿತ್ರದಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ. ಅವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇನ್ನಷ್ಟು ಪಳಗಬೇಕಿದೆ. ಧೈರ್ಯ ಕರ್ವ ಅವರ ನಟನೆಯೂ ಮೆಚ್ಚಿಕೊಳ್ಳುವಂತಹದ್ದು. ನಾಸಿರುದ್ದೀನ್ ಶಾ ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ ಇದ್ದರೂ ಅವರ ಪಾತ್ರಕ್ಕೆ ಇರುವ ಪ್ರಾಮುಖ್ಯತೆ ತುಂಬಾನೇ ದೊಡ್ಡದು.

ಇದನ್ನೂ ಓದಿ: ನಿಜ ಜೀವನದಲ್ಲೂ ‘ಗೆಹರಾಯಿಯಾ’ ಕಥೆ; ಸಿದ್ಧಾಂತ್​ ಜತೆ ಫ್ಲರ್ಟ್​ ಮಾಡಿದ್ದ ಕಸಿನ್​ನ ಗರ್ಲ್​ಫ್ರೆಂಡ್​

Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada