- Kannada News Photo gallery Siddhant Chaturvedi Reveled that once his cousin girlfriend flirted with him
ನಿಜ ಜೀವನದಲ್ಲೂ ‘ಗೆಹರಾಯಿಯಾ’ ಕಥೆ; ಸಿದ್ಧಾಂತ್ ಜತೆ ಫ್ಲರ್ಟ್ ಮಾಡಿದ್ದ ಕಸಿನ್ನ ಗರ್ಲ್ಫ್ರೆಂಡ್
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್ ಫೈರ್ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್ ಗರ್ಲ್ಫ್ರೆಂಡ್ ಜತೆ ಫ್ಲರ್ಟ್ ಮಾಡಿದ್ದೀರಾ?’ ಎಂದು ಸಿದ್ಧಾಂತ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.
Updated on: Jan 24, 2022 | 3:10 PM

ಇತ್ತೀಚೆಗೆ ರಿಲೀಸ್ ಆದ ‘ಗೆಹರಾಯಿಯಾ’ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ಗರ್ಲ್ಫ್ರೆಂಡ್ ಕಸಿನ್ ಜತೆಗೆ ಸಿದ್ಧಾಂತ್ ಫ್ಲರ್ಟ್ ಮಾಡುತ್ತಾರೆ. ನಂತರ ಇದು ಮಿತಿಮೀರುತ್ತದೆ.

ಸಿನಿಮಾದ ಹೀರೋ ಸಿದ್ಧಾಂತ್ ಚತುರ್ವೇದಿಗೂ ನಿಜ ಜೀವನದಲ್ಲಿ ಹೀಗೆಯೇ ಆಗಿತ್ತು! ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್ ಫೈರ್ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್ ಗರ್ಲ್ಫ್ರೆಂಡ್ ಜತೆ ಫ್ಲರ್ಟ್ ಮಾಡಿದ್ದೀರಾ?’ ಎಂದು ಸಿದ್ಧಾಂತ್ಗೆ ಕೇಳಲಾಯಿತು.

ಇದಕ್ಕೆ ಸಿದ್ಧಾಂತ್ ಉತ್ತರಿಸಿದ್ದಾರೆ. ‘ನನ್ನ ಕಸಿನ್ನ ಗರ್ಲ್ಫ್ರೆಂಡ್ ನನ್ನ ಅಭಿಮಾನಿ. ಆಕೆ ನನ್ನ ಜತೆ ಫ್ಲರ್ಟ್ ಮಾಡಿದ್ದಳು. ಆದರೆ, ನಾನು ತಿರುಗಿ ಫ್ಲರ್ಟ್ ಮಾಡಿಲ್ಲ’ ಎಂದಿದ್ದಾರೆ ಅವರು.

ಇದನ್ನು ಕೇಳಿ ‘ಗೆಹರಾಯಿಯಾ’ ತಂಡದವರು ಅಚ್ಚರಿ ಹೊರ ಹಾಕಿದ್ದಾರೆ. ‘ಈ ಮಾತನ್ನು ಕೇಳಿ ಸಿದ್ದಾರ್ಥ್ ಕಸಿನ್ ತೊಂದರಗೆ ಸಿಲುಕುತ್ತಾರೆ’ ಎಂದು ನಕ್ಕರು ನಿರ್ದೇಶಕ ಶಕುನ್ ಬಾತ್ರಾ.




