Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ ಮೊದಲ ಹೆಂಡತಿ ಬಗ್ಗೆ ಮಾತನಾಡಿದ್ದ ಸಮಂತಾ; ಸ್ಯಾಮ್​ ಹೀಗೆ ಹೇಳಿದ್ದಕ್ಕೂ ಇತ್ತು ಕಾರಣ

2019ರಲ್ಲಿ ಸಮಂತಾ ‘ಫೀಟ್​ ಅಪ್​ ವಿತ್​ ದಿ ಸ್ಟಾರ್ಸ್​’ ಹೆಸರಿನ ತೆಲುಗು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ನಾಗ ಚೈತನ್ಯ ಅವರನ್ನು ಹಸ್ಬಂಡ್ ಮಟೀರಿಯಲ್ ಎಂದು ಕರೆದಿದ್ದರು.

ನಾಗ ಚೈತನ್ಯ ಮೊದಲ ಹೆಂಡತಿ ಬಗ್ಗೆ ಮಾತನಾಡಿದ್ದ ಸಮಂತಾ; ಸ್ಯಾಮ್​ ಹೀಗೆ ಹೇಳಿದ್ದಕ್ಕೂ ಇತ್ತು ಕಾರಣ
ನಾಗ ಚೈತನ್ಯ, ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 12, 2022 | 9:26 PM

ನಾಗ ಚೈತನ್ಯ (Naga Chaitanya)  ಹಾಗೂ ಸಮಂತಾ (Samantha) ಬೇರೆ ಆಗಿ ಕೆಲವು ತಿಂಗಳು ಕಳೆದಿವೆ. ಇವರು ಬೇರೆ ಆಗಿರುವ ವಿಚಾರದಿಂದ ಕೆಲ ಅಭಿಮಾನಿಗಳಿಗೆ ನೋವಾಗಿದೆ. ಆ ನೋವು ಇನ್ನೂ ಮಾಸಿಲ್ಲ. ಈ ಬಗ್ಗೆ ಅನೇಕರು ಬೇಸರ ಹೊರಹಾಕುತ್ತಲೇ ಇದ್ದಾರೆ. ಕೆಲವರು ಹಳೆಯ ಘಟನೆಯನ್ನು ಮೆಲುಕು ಹಾಕುತ್ತಿದ್ದಾರೆ. ನಾಗ ಚೈತನ್ಯ ಬಗ್ಗೆ ಸಮಂತಾ ಹೇಳಿದ್ದ ಪ್ರೀತಿಯ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ನಾಗ ಚೈತನ್ಯ ಮೊದಲ ಪತ್ನಿ ಬಗ್ಗೆ ಸಮಂತಾ ಹೇಳಿದ್ದ ಮಾತು ಕೂಡ ಒಂದು. ಇದನ್ನು ಅಭಿಮಾನಿಗಳು ಈಗ ನೆನಪಿಸಿಕೊಂಡಿದ್ದಾರೆ. ಹಾಗಾದರೆ, ನಾಗ ಚೈತನ್ಯ ಅವರ ಮೊದಲ ಪತ್ನಿ ಯಾರಾಗಿದ್ದರು? ಆ ಪ್ರಶ್ನೆಗೆ ಸಮಂತಾ ನೀಡಿದ ಉತ್ತರ ಹೀಗಿತ್ತು.

ಸಮಂತಾ ಅವರು 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ದಂಪತಿ ಆ ಬಳಿಕ ವಿಚ್ಛೇದನ ಪಡೆದು ದೂರವಾದರು. 2019ರಲ್ಲಿ ಸಮಂತಾ ‘ಫೀಟ್​ ಅಪ್​ ವಿತ್​ ದಿ ಸ್ಟಾರ್ಸ್​’ ಹೆಸರಿನ ತೆಲುಗು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ನಾಗ ಚೈತನ್ಯ ಅವರನ್ನು ಹಸ್ಬಂಡ್ ಮಟೀರಿಯಲ್ ಎಂದು ಕರೆದಿದ್ದರು.

‘ನಾಗ ಚೈತನ್ಯ ಪತಿ ಆಗೋಕೆ ಹೇಳಿ ಮಾಡಿಸಿದ ಹಾಗಿದ್ದಾರೆ. ಅವರು ನನ್ನನ್ನು ಜೀರೋದಿಂದ ನೋಡಿದ್ದಾರೆ. ಅಮೆರಿಕದಲ್ಲಿದ್ದಾಗ ನನ್ನ ತಾಯಿಗೆ ಕರೆ ಮಾಡಲು ನನ್ನ ಬಳಿ ಹಣವಿರಲಿಲ್ಲ. ನಾನು ನಾಗ ಚೈತನ್ಯ ಫೋನ್ ತೆಗೆದುಕೊಂಡು ಮನೆಗೆ ಕರೆ ಮಾಡಿದ್ದೆ. ನಾಗ ಚೈತನ್ಯ ನನ್ನನ್ನು ಅಲ್ಲಿಂದ ಇಲ್ಲಿಯವರೆಗೆ ನೋಡಿದ್ದಾರೆ. ಉಳಿದವರೆಲ್ಲರೂ ನಾನು ಸವಸಿದ ರಸ್ತೆಯ ಅರ್ಧದಿಂದ ಅಷ್ಟೇ ನೋಡಿದ್ದಾರೆ’ ಎಂದಿದ್ದರು ಸಮಂತಾ.

ಈ ಕಾರ್ಯಕ್ರಮವನ್ನು ಲಕ್ಷ್ಮೀ ಮಂಚು ನಡೆಸಿಕೊಟ್ಟಿದ್ದರು. ಅವರು ಸಮಂತಾ ಹಾಗೂ ನಾಗ ಚೈತನ್ಯ ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಈ ವೇಳೆ ನಾಗ ಚೈತನ್ಯ ಮೊದಲ ಪತ್ನಿಯ ವಿಚಾರದ ಬಗ್ಗೆ ಸಮಂತಾ ಬಾಯ್ಬಿಟ್ಟಿದ್ದರು. ‘ತಲೆದಿಂಬು ನಾಗ ಚೈತನ್ಯ ಅವರ ಮೊದಲ ಪತ್ನಿ. ನಾನು ಕಿಸ್​ ಮಾಡಬೇಕು ಎಂದರೆ, ನಮ್ಮ ಮಧ್ಯೆ ಆ ಪಿಲ್ಲೋ ಇರುತ್ತಿತ್ತು. ಬಹುಶಃ ನಿಮಗೆ ಎಲ್ಲವೂ ಅರ್ಥವಾಯಿತು ಎಂದು ನಾನು ಭಾವಿಸಿದ್ದೇನೆ’ ಎಂದು ಹೇಳಿ ನಕ್ಕಿದ್ದರು ಸಮಂತಾ.

ಸಮಂತಾ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ತುಂಬಾನೇ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಅವರು ವಿಚ್ಛೇದನ ಪಡೆಯಬೇಕಾಯಿತು ಎನ್ನುವ ಮಾತು ಹರಿದಾಡಿತ್ತು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಈ ಬಗ್ಗೆ ಮಾತನಾಡಿದ್ದರು. ‘ಫ್ಯಾಮಿಲಿ ಮ್ಯಾನ್ ಅಥವಾ ಯಾವುದೇ ವಿಚಾರಕ್ಕೆ ಟ್ರೋಲ್ ಮಾಡಿದರೂ ನಾನು ಅವರಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಯಾವಾಗಲೂ ಇರೋದೆ ಹೀಗೆ. ನಾನು ಈ ರೀತಿಯ ಟೀಕೆಗಳಿಗೆ ಉತ್ತರ ನೀಡೋಕೆ ಹೋಗುವುದಿಲ್ಲ’ ಎಂದಿದ್ದರು ಅವರು.

ಇದನ್ನೂ ಓದಿ: ಏಪ್ರಿಲ್​ನಲ್ಲಿ ರಿಲೀಸ್​ ಆಗಲಿದೆ ಸಮಂತಾ ಹೊಸ ಚಿತ್ರ; ಈ ಬಾರಿ ಅಭಿಮಾನಿಗಳಿಗೆ ಏನಿದೆ ಸರ್ಪ್ರೈಸ್​?

ಸಮಂತಾ ಹಾದಿಯಲ್ಲಿ ನಾಗ ಚೈತನ್ಯ; ಹೊಸ ಪ್ರಯತ್ನಕ್ಕೆ ಸಿಗಲಿದೆಯೇ ಯಶಸ್ಸು?