ಸಮಂತಾ ಹಾದಿಯಲ್ಲಿ ನಾಗ ಚೈತನ್ಯ; ಹೊಸ ಪ್ರಯತ್ನಕ್ಕೆ ಸಿಗಲಿದೆಯೇ ಯಶಸ್ಸು?

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಎಲ್ಲರೂ ಒಟಿಟಿಯತ್ತ ಹೆಚ್ಚು ಆಕರ್ಷಿತರಾದರು. ಚಿತ್ರಮಂದಿರಗಳು ಹಲವು ತಿಂಗಳ ಕಾಲ ಮುಚ್ಚಿದ್ದರಿಂದ ಅನೇಕ ನಿರ್ಮಾಪಕರಿಗೆ ಒಟಿಟಿ ಆಯ್ಕೆ ಅನಿವಾರ್ಯವಾಗಿತ್ತು. ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್​ ಸೀರಿಸ್​ ಕ್ರೇಜ್​ ಹೆಚ್ಚುತ್ತಾ ಬಂತು.

ಸಮಂತಾ ಹಾದಿಯಲ್ಲಿ ನಾಗ ಚೈತನ್ಯ; ಹೊಸ ಪ್ರಯತ್ನಕ್ಕೆ ಸಿಗಲಿದೆಯೇ ಯಶಸ್ಸು?
ಸಮಂತಾ, ನಾಗ ಚೈತನ್ಯ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 06, 2022 | 6:22 PM

ಸಮಂತಾ (Samantha) ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಯಾರೂ ಮುಟ್ಟಲಾರದಷ್ಟು ಎತ್ತರಕ್ಕೆ ಅವರು ಬೆಳೆದು ನಿಂತಿದ್ದಾರೆ. ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅವರು ಕೊಂಚವೂ ಹಿಂಜರಿಯುತ್ತಿಲ್ಲ. ಸಮಂತಾಗೆ ‘ದಿ ಫ್ಯಾಮಿಲಿ ಮ್ಯಾನ್​ 2’ (The Family Man 2)ವೆಬ್​ ಸರಣಿ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ಈ ವೆಬ್​ ಸೀರಿಸ್​ನಿಂದಾಗಿ ಅವರಿಗೆ ಬಾಲಿವುಡ್​ನಿಂದಲೂ ಆಫರ್​ಗಳು ಬರೋಕೆ ಆರಂಭವಾದವು. ಸಮಂತಾ ನಿರ್ವಹಿಸಿದ ರಾಜಿ ಪಾತ್ರದ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ನಡೆದಿತ್ತು. ಹೀಗಾಗಿ, ಈ ವೆಬ್​ ಸರಣಿಯಿಂದ ಸಮಂತಾ ಖ್ಯಾತಿ ದುಪ್ಪಟ್ಟಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಚ್ಚರಿ ವಿಚಾರ ಎಂದರೆ, ಸಮಂತಾ ಹಾದಿಯಲ್ಲಿ ಸಾಗೋಕೆ ನಾಗ ಚೈತನ್ಯ (Naga Chaitanya) ರೆಡಿ ಆಗಿದ್ದಾರೆ. ಅರ್ಥಾತ್​ ಅವರು ಕೂಡ ವೆಬ್​ ಸೀರಿಸ್​ನಲ್ಲಿ ನಟಿಸೋಕೆ ರೆಡಿ ಆಗಿದ್ದಾರೆ.  

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಎಲ್ಲರೂ ಒಟಿಟಿಯತ್ತ ಹೆಚ್ಚು ಆಕರ್ಷಿತರಾದರು. ಚಿತ್ರಮಂದಿರಗಳು ಹಲವು ತಿಂಗಳ ಕಾಲ ಮುಚ್ಚಿದ್ದರಿಂದ ಅನೇಕ ನಿರ್ಮಾಪಕರಿಗೆ ಒಟಿಟಿ ಆಯ್ಕೆ ಅನಿವಾರ್ಯವಾಗಿತ್ತು. ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್​ ಸೀರಿಸ್​ ಕ್ರೇಜ್​ ಹೆಚ್ಚುತ್ತಾ ಬಂತು. ಸ್ಟಾರ್​ ನಟರುಗಳು ವೆಬ್​ ಸೀರಿಸ್​ನಲ್ಲಿ ನಟಿಸೋಕೆ ಆದ್ಯತೆ ಕೊಡೋಕೆ ಆರಂಭಿಸಿದರು. ಈಗ ನಾಗ ಚೈತನ್ಯ ಕೂಡ ವೆಬ್​ ಸೀರಿಸ್​ ಲೋಕಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ.

‘ದೂಥ’ ವೆಬ್​ ಸರಣಿಯಲ್ಲಿ ನಾಗ ಚೈತನ್ಯ ನಟಿಸಲಿದ್ದಾರೆ ಎನ್ನಲಾಗಿದೆ. ವೆಬ್​ ಸೀರಿಸ್​ನ ಟೈಟಲ್​ ಸದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಇದೊಂದು ಭಿನ್ನ ಕಾನ್ಸೆಪ್ಟ್​ನಲ್ಲಿ ಮೂಡಿ ಬರುತ್ತಿರುವ ವೆಬ್​ ಸರಣಿ ಎನ್ನಲಾಗಿದೆ. ಇದೊಂದು ಹಾರರ್​ ಥ್ರಿಲ್ಲರ್​ ವೆಬ್​ ಸರಣಿ ಇರಬಹುದು ಎಂಬುದು ಹಲವರ ಊಹೆ.

ಕ್ರೈಮ್​, ಸಸ್ಪೆನ್ಸ್​ ಥ್ರಿಲ್ಲರ್​ ವೆಬ್​ ಸರಣಿಗಳು ಸಾಕಷ್ಟು ಹಿಟ್​ ಆಗಿವೆ. ಈಗ ನಾಗ ಚೈತನ್ಯ ಕೂಡ ಇದೇ ಮಾದರಿಯ ವೆಬ್​ ಸರಣಿ ಮೇಲೆ ಕಣ್ಣಿಟ್ಟಿದ್ದಾರೆ. ‘ದೂಥ’ ವೆಬ್​ ಸೀರಿಸ್​ ಮೂಲಕ ಅವರು ಪ್ರೇಕ್ಷಕರ ಎದುರು ಬರಲಿದ್ದಾರೆ ಎನ್ನಲಾಗುತ್ತಿದೆ.

ನಾಗ ಚೈತನ್ಯ ಅವರು ‘ಥ್ಯಾಂಕ್​ ಯೂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್​ ಕೆ. ಕುಮಾರ್​ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಶಿ ಖನ್ನಾ ಅವರು ಚಿತ್ರದ ನಾಯಕಿ. ಮಾಸ್ಕೋದಲ್ಲಿ ಇತ್ತೀಚೆಗೆ ತಂಡ ಚಿತ್ರೀಕರಣ ಮುಗಿಸಿದೆ.  ಕೊರೆಯುವ ಚಳಿಯಲ್ಲಿ ಸಿನಿಮಾ ತಂಡ ಶೂಟಿಂಗ್​ ಮುಗಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

 ವಿದೇಶದಲ್ಲಿ ಹಣ ಉಳಿಸಲು ಇಂಥ ಕೆಲಸ ಮಾಡಿದ್ರಾ​ ನಾಗ ಚೈತನ್ಯ-ರಾಶಿ ಖನ್ನಾ? ಇದು ಟಾಲಿವುಡ್​ ಗಾಸಿಪ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ