ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ ಸಮಂತಾ ಹೊಸ ಚಿತ್ರ; ಈ ಬಾರಿ ಅಭಿಮಾನಿಗಳಿಗೆ ಏನಿದೆ ಸರ್ಪ್ರೈಸ್?
‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಸಮಂತಾ ಜೊತೆ ವಿಜಯ್ ಸೇತುಪತಿ ಮತ್ತು ನಯನತಾರಾ ಕೂಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದಾರೆ.
ನಟಿ ಸಮಂತಾ (Samantha) ಅವರಿಗೆ ವೃತ್ತಿಜೀವನದಲ್ಲೀಗ ಬ್ಯಾಕ್ ಟು ಬ್ಯಾಕ್ ಯಶಸ್ಸು ಸಿಗುತ್ತಿದೆ. ಅನೇಕ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಅವರ ಆಯ್ಕೆಗಳು ಬದಲಾಗಿವೆ. ವೈಯಕ್ತಿಕ ಖುಷಿಗೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ದೇಶ-ವಿದೇಶ ಸುತ್ತುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೊಸ ಹೊಸ ಸಾಹಸಗಳನ್ನು ಸಮಂತಾ ಮಾಡುತ್ತಿದ್ದಾರೆ. ಅದರ ಜೊತೆಗೆ ಹೆಚ್ಚು ಬೋಲ್ಡ್ ಆದಂತಹ ಸಿನಿಮಾ ಮತ್ತು ಪಾತ್ರಗಳನ್ನು ಕೂಡ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಸಮಂತಾ ಅವರು ನಟಿಸಿರುವ ಹೊಸ ತಮಿಳು ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಕಾದು ವಾಕುಲ ರೆಂಡು ಕಾದಲ್’ (Kaathu Vaakula Rendu Kaadhal) ಶೀರ್ಷಿಕೆಯ ಈ ಚಿತ್ರದಿಂದ ಹೊಸ ಅಪ್ಡೇಟ್ ನೀಡಲಾಗಿದೆ. ಖ್ಯಾತ ನಟಿ ನಯನತಾರಾ ಅವರ ಪ್ರಿಯಕರ ವಿಘ್ನೇಶ್ ಶಿವನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ಗಳು ಗಮನ ಸೆಳೆದಿವೆ. ಫೆ.2ರಂದು ವಿಘ್ನೇಶ್ ಶಿವನ್ (Vignesh Shivan) ಹಂಚಿಕೊಂಡಿರುವ ಮಾಹಿತಿ ಪ್ರಕಾರ ಈ ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆ ಆಗಲಿದೆ.
‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಸಮಂತಾ ಜೊತೆ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಸಮಂತಾ, ವಿಜಯ್ ಸೇತುಪತಿ ಮತ್ತು ನಯನತಾರಾ ಅವರ ಕಾಂಬಿನೇಷನ್ ಕಾರಣದಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಸಮಂತಾ ಅವರು ಹೆಚ್ಚು ಹೆಚ್ಚು ಬೋಲ್ಡ್ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಅವರು ಕಾಣಿಸಿಕೊಂಡ ಪರಿಗೆ ಎಲ್ಲರೂ ಅಚ್ಚರಿಪಟ್ಟಿದ್ದರು. ಇನ್ನು, ‘ಪುಷ್ಪ’ ಚಿತ್ರದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ವಾಮ..’ ಹಾಡಿನಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡರು.
ಪ್ರತಿಬಾರಿಯೂ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುತ್ತಿರುವ ಸಮಂತಾ ಅವರು ‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಯಾವ ರೀತಿಯ ಪಾತ್ರವನ್ನು ನಿಭಾಯಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ತಮ್ಮ ನೆಚ್ಚಿನ ನಟಿ ಯಾವ ರೀತಿ ಸರ್ಪ್ರೈಸ್ ನೀಡುತ್ತಾರೆ ಎಂಬುದನ್ನು ತಿಳಿಯಲು ಏಪ್ರಿಲ್ವರೆಗೂ ಕಾಯಬೇಕಿದೆ. ಫೆ.11ರಂದು ಈ ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ವಿಘ್ನೇಶ್ ಶಿವನ್ ಘೋಷಿಸಿದ್ದಾರೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನೊಂದು ಐಟಂ ಡ್ಯಾನ್ಸ್?
ಸಮಂತಾ ಅವರು ‘ಊ ಅಂಟಾವಾ ಮಾವ. ಊಊ ಅಂಟಾವಾ ಮಾವ..’ ಅಂತ ಮೈ ಚಳಿ ಬಿಟ್ಟು ಕುಣಿದಿದ್ದರಿಂದ ಆ ಸಾಂಗ್ ಸೂಪರ್ ಹಿಟ್ ಆಯಿತು. ‘ಪುಷ್ಪ’ ಚಿತ್ರದ ಭಾರಿ ಯಶಸ್ಸಿನ ಹಿಂದೆ ಆ ಹಾಡಿನ ಕೊಡುಗೆ ದೊಡ್ಡದಿದೆ. ಇದೇ ಸೂತ್ರವನ್ನು ಬಳಸಿಕೊಳ್ಳಲು ಇನ್ನೂ ಕೆಲವು ಸಿನಿಮಾ ತಂಡಗಳು ಪ್ಲ್ಯಾನ್ ಮಾಡಿವೆ. ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿಯ ‘ಲೈಗರ್’ ಸಿನಿಮಾದಲ್ಲೂ ಸಮಂತಾ ಇಂಥದ್ದೊಂದು ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಆ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ:
Samantha: ಸಮಂತಾ ಶರ್ಟ್ ಮೇಲೆ ಎಫ್ ವರ್ಡ್; ಇದು ಯಾರಿಗೆ ಕೊಟ್ಟ ಉತ್ತರ?
Samantha: ಅಬ್ಬಬ್ಬಾ, ಸಮಂತಾ ಖರೀದಿಸಿದ ಈ ಎರಡು ಜಾಕೆಟ್ನ ಬೆಲೆ ಇಷ್ಟೊಂದಾ?