AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್​ ಬಾಸ್​ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ

ಬಿಗ್​ ಬಾಸ್​​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕೆ ಶಮಿತಾ ಶೆಟ್ಟಿ ಅವರನ್ನು ಕೆಲವರು ಟ್ರೋಲ್​ ಮಾಡಿದ್ದರು. ಅದು ಸರಿಯಲ್ಲ ಎಂದು ಅವರೀಗ ಹೇಳಿದ್ದಾರೆ.

ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್​ ಬಾಸ್​ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
TV9 Web
| Edited By: |

Updated on: Feb 03, 2022 | 8:07 AM

Share

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಕುಟುಂಬದ ಕುರಿತು ಸಾರ್ವಜನಿಕವಾಗಿ ಅನೇಕ ಬಗೆಯ ಚರ್ಚೆಗಳು ನಡೆಯುವಂತಾಯಿತು. ಅದಕ್ಕೆಲ್ಲ ಕಾರಣ ಆಗಿದ್ದು, ಪತಿ ರಾಜ್​ ಕುಂದ್ರಾ ಅವರ ಮೇಲೆ ಕೇಳಿಬಂದ ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪ. ಈ ನಡುವೆ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ  (Shamita Shetty) ಕೂಡ ಹೆಚ್ಚು ಸುದ್ದಿಯಾದರು. ತಮ್ಮ ಕುಟುಂಬದವರು ಕಷ್ಟದಲ್ಲಿ ಇರುವಾಗಲೇ ತಾವು ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದು ಯಾಕೆ ಎಂಬ ಬಗ್ಗೆ ಶಮಿತಾ ಶೆಟ್ಟಿ ಈಗ ಬಾಯಿ ಬಿಟ್ಟಿದ್ದಾರೆ. ‘ಹಿಂದಿ ಬಿಗ್​ ಬಾಸ್​ 15’ನೇ (Bigg Boss 15) ಸೀಸನ್​ನಲ್ಲಿ ಶಮಿತಾ ಸ್ಪರ್ಧಿಸಿದರು. ಫಿನಾಲೆ ಹಂತದವರೆಗೂ ತಲುಪಿ ಹಣಾಹಣಿ ನೀಡಿದರು. ಅದಕ್ಕೂ ಮುನ್ನ ಅವರು ‘ಬಿಗ್​ ಬಾಸ್​ ಒಟಿಟಿ’ಯಲ್ಲೂ ಗಮನ ಸೆಳೆದಿದ್ದರು. ‘ಬಿಗ್​ ಬಾಸ್​ 15’ ಕೊನೆಗೊಂಡ ಬಳಿಕ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕುಟುಂಬದ ಸಂಕಷ್ಟದ ಸಮಯದ ಕುರಿತಾಗಿಯೂ ಅವರು ಮಾತನಾಡಿದ್ದಾರೆ.

ಶಿಲ್ಪಾ ಶೆಟ್ಟಿ ಕಷ್ಟದಲ್ಲಿ ಇರುವಾಗ ಅವರನ್ನು ಬಿಟ್ಟು ಶಮಿತಾ ಶೆಟ್ಟಿ ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಅನೇಕರು ಟೀಕೆ ಮಾಡಿದ್ದರು. ‘ಆ ವೇಳೆ ನಾನು ಅಕ್ಕನ ಜೊತೆ ಇರಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ನನಗೆ ಬೇಸರ ಇದೆ. ನಾನು ಆಕೆಯ ಜೊತೆ ಇರಬೇಕಿತ್ತು. ಬಿಗ್​ ಬಾಸ್​ ಒಟಿಟಿಯಲ್ಲಿ ಇದ್ದಾಗ ನನಗೆ ತುಂಬ ಚಿಂತೆ ಆಗಿತ್ತು. ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲ. ನನ್ನ ಮತ್ತು ಶಿಲ್ಪಾ ನಡುವೆ ತುಂಬ ಆತ್ಮೀಯವಾದ ಬಾಂಧವ್ಯ ಇದೆ. ಪ್ರತಿ ಬಾರಿ ಕಷ್ಟ ಎದುರಾದಾಗಲೂ ಕೂಡ ನಾನು ಇನ್ನಷ್ಟು ಸ್ಟ್ರಾಂಗ್​ ಆಗಿದ್ದೇವೆ. ಅಕ್ಕನ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.

ಬಿಗ್​ ಬಾಸ್​​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕೆ ಶಮಿತಾ ಶೆಟ್ಟಿ ಅವರನ್ನು ಕೆಲವರು ಟ್ರೋಲ್​ ಮಾಡಿದ್ದರು. ಅದು ಸರಿಯಲ್ಲ ಎಂದು ಅವರೀಗ ಹೇಳಿದ್ದಾರೆ. ‘ಟ್ರೋಲ್​ ಮಾಡಿದ್ದು ಅನ್ಯಾಯ. ಯಾಕೆಂದರೆ ಭಾವನ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ.  ಹಾಗಾಗಿ ಬಿಗ್​ ಬಾಸ್​ಗೆ ತೆರಳುವುದು ಸರಿ ಅಂತ ನನಗೆ ಅನಿಸಿತ್ತು. ಕೊವಿಡ್​ ಸಂದರ್ಭದಲ್ಲಿ ಕೆಲಸ ಇಲ್ಲದೇ ಎಷ್ಟೋ ಜನರು ಮನೆಯಲ್ಲಿ ಕುಳಿತಿದ್ದರು. ಅಂಥದ್ದರಲ್ಲಿ ನನ್ನ ಪಾಲಿಗೆ ಬಂದ ಕೆಲಸವನ್ನು ತಿರಸ್ಕರಿಸಲು ನನಗೆ ಇಷ್ಟ ಇರಲಿಲ್ಲ. ಅಲ್ಲದೇ ನಾನು ಹಣ ಗಳಿಸಬೇಕಿತ್ತು’ ಎಂದು ತಾವು ಬಿಗ್​ ಬಾಸ್​ಗೆ ಹೋಗಲು ನಿರ್ಧರಿಸಿದ್ದಕ್ಕೆ ಕಾರಣ ಏನೆಂಬುದನ್ನು ಶಮಿತಾ ಶೆಟ್ಟಿ ವಿವರಿಸಿದ್ದಾರೆ. ಈ ನಡುವೆ ಅವರು ರಾಕೇಶ್​ ಬಾಪಟ್​ ಜೊತೆಗಿನ ಡೇಟಿಂಗ್​ ಕಾರಣಕ್ಕೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ.

ಇದನ್ನೂ ಓದಿ:

ಶೀಘ್ರವೇ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಎಂಗೇಜ್​ಮೆಂಟ್​; ಅಭಿಮಾನಿ ವಲಯದಲ್ಲಿ ಜೋರಾಯ್ತು ಚರ್ಚೆ

‘42ರ ಮಹಿಳೆಗೆ 28ರ ಹುಡುಗಿ ಆಂಟಿ ಅಂತ ಕರೆಯೋದು ತಪ್ಪಾ?’: ಶಮಿತಾ ಶೆಟ್ಟಿ-ತೇಜಸ್ವಿ ಪ್ರಕಾಶ್​ ಜಗಳದಲ್ಲಿ ಜನರ ಪ್ರಶ್ನೆ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್