ಶೀಘ್ರವೇ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಎಂಗೇಜ್​ಮೆಂಟ್​; ಅಭಿಮಾನಿ ವಲಯದಲ್ಲಿ ಜೋರಾಯ್ತು ಚರ್ಚೆ

ಶೀಘ್ರವೇ ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​ ಎಂಗೇಜ್​ಮೆಂಟ್​; ಅಭಿಮಾನಿ ವಲಯದಲ್ಲಿ ಜೋರಾಯ್ತು ಚರ್ಚೆ
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್

ಶಮಿತಾ ಹಾಗೂ ರಾಕೇಶ್​ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಪರಿಚಯಗೊಂಡರು. ಇಬ್ಬರ ಗೆಳೆತನ ಶೋ ಮುಗಿಯುವುದರೊಳಗೆ ಪ್ರೀತಿಗೆ ತಿರುಗಿತ್ತು. ಶೋ ಪೂರ್ಣಗೊಂಡ ಬಳಿಕವೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು.

TV9kannada Web Team

| Edited By: Rajesh Duggumane

Jan 30, 2022 | 4:08 PM

‘ಹಿಂದಿ ಬಿಗ್​ ಬಾಸ್​ 15’ (Hindi Bigg Boss 15) ಕೊನೆಯ ಹಂತ ತಲುಪಿದೆ. ಇಂದು (ಜನವರಿ 30) ಫಿನಾಲೆ (Hindi Bigg Boss 15 Finale) ನಡೆಯುತ್ತಿದೆ. ಇದಕ್ಕೆ ವೇದಿಕೆ ಸಜ್ಜಾಗಿದೆ. ‘ಬಿಗ್​ ಬಾಸ್​ ಒಟಿಟಿ’ ಮೂಲಕ ಹೆಸರು ಮಾಡಿದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ (Shanita Shetty) ಈ ಬಾರಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ರೇಸ್​ನಲ್ಲಿ ಐದು ಜನ ಇದ್ದು ಶಮಿತಾ ಗೆಲ್ಲುವ ಚಾನ್ಸ್​ ಹೆಚ್ಚಿದೆ ಎನ್ನುವ ಅಭಿಪ್ರಾಯ ವೀಕ್ಷಕರ ವಲಯದಲ್ಲಿ ಕೇಳಿ ಬಂದಿದೆ. ಫಿನಾಲೆ ಮುಗಿಸಿ ಬಂದ ನಂತರ ಶಮಿತಾ ಜತೆ ​ಎಂಗೇಜ್​ಮೆಂಟ್​ ಆಗೋ ಸೂಚನೆ ನೀಡಿದ್ದಾರೆ ಬಾಯ್​ಫ್ರೆಂಡ್​ ರಾಕೇಶ್​ ಬಾಪಟ್. ಶಮಿತಾ ಬಿಗ್​ ಬಾಸ್​ ಮನೆಯಿಂದ ಹೊರ ಬರುತ್ತಿದ್ದಂತೆ ನಿಶ್ಚಿತಾರ್ಥ ನೆರವೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಫಿನಾಲೆಗೂ ಮೊದಲು ಅಂದರೆ ಶನಿವಾರ (ಜನವರಿ 29) ರಾಕೇಶ್​ ಮತ್ತು ಶಮಿತಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ಹಾಗೂ ಶಮಿತಾ ಗೆಳತಿ ಆಕಾಂಕ್ಷಾ ಮಲ್ಹೋತ್ರಾ ಶೋಗೆ ಆಗಮಿಸಿದ್ದರು. ಈ ವೇಳೆ ಶಮಿತಾಗೆ ಏನಾದರೂ ಹೇಳಿ ಎನ್ನುವ ಮಾತನ್ನು ಸಲ್ಮಾನ್​ ಖಾನ್​ ಹೇಳಿದರು. ಆಗ ಮೈಕ್​ ಕಸಿದುಕೊಂಡ ಆಕಾಂಕ್ಷಾ, ‘ಐ ಲವ್​ ಯೂ ಶಮಿತಾ. ನೀನು ಟ್ರೋಪಿ ಹಿಡಿದು ಬರುವುದನ್ನು ಕಾದು ನೋಡುತ್ತಿದ್ದೇನೆ’ ಎಂದಿದ್ದಾರೆ.

ಈ ವೇಳೆ ಮಾತನಾಡಿದ ರಾಕೇಶ್​, ‘ಶಮಿತಾ ಅವರು ನಿನ್ನನ್ನು ಕೇವಲ ಪ್ರೀತಿಸುತ್ತಾರೆ. ಆದರೆ ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ. ನಿಮ್ಮ ತಾಯಿ ನನಗೆ ಉತ್ತಮ ಸ್ನೇಹಿತರಾದರು. ಶಮಿತಾ ನೀವು ಎಲ್ಲರನ್ನೂ ಅಚ್ಚರಿಗೊಳಿಸಿದ್ದೀರಿ. ನಿಮಗೆ ಹ್ಯಾಟ್ಸ್ ಆಫ್. ನಾನು ನಿನ್ನನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಹಗ್​ ಮಾಡಲು ಕಾದಿದ್ದೇನೆ’ ಎಂದಿದ್ದಾರೆ ರಾಕೇಶ್​.

ಈ ವಿಚಾರದಲ್ಲಿ ಸಲ್ಮಾನ್​ ಖಾನ್​ ನಗೆ ಚಟಾಕಿ ಹಾರಿಸಿದ್ದಾರೆ. ‘ತಾಯಿ ಎದುರು ಈ ರೀತಿ ಮಾತನಾಡಬಾರದು ರಾಕೇಶ್​. ನಿಮ್ಮ ಕಿಡ್ನಿಯಲ್ಲಿದ್ದ ಕಲ್ಲನ್ನು ಇತ್ತೀಚೆಗಷ್ಟೇ ತೆಗೆಯಲಾಗಿದೆ’ ಎಂದರು. ರಾಕೇಶ್​ಗೆ ಕಿಡ್ನ ಸ್ಟೋನ್​ ಆಗಿತ್ತು. ಈ ಕಾರಣಕ್ಕೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಹೀಗಾಗಿ, ಅವರು ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಹೊರ ನಡೆದಿದ್ದರು. ಇಬ್ಬರೂ ಶೀಘ್ರವೇ ಎಂಗೇಜ್​ಮೆಂಟ್​ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಶಮಿತಾ ಹಾಗೂ ರಾಕೇಶ್​ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಪರಿಚಯಗೊಂಡರು. ಇಬ್ಬರ ಗೆಳೆತನ ಶೋ ಮುಗಿಯುವುದರೊಳಗೆ ಪ್ರೀತಿಗೆ ತಿರುಗಿತ್ತು. ಶೋ ಪೂರ್ಣಗೊಂಡ ಬಳಿಕವೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಬಿಗ್​ ಬಾಸ್​ 15ನೇ ಸೀಸನ್​ಗೆ ಶಮಿತಾ ಮೊದಲು ಮನೆ ಒಳಗೆ ಬಂದರೆ, ವೈಲ್ಡ್​ ಕಾರ್ಡ್​ ಮೂಲಕ ರಾಕೇಶ್​ ಬಂದಿದ್ದರು. ಅನಾರೋಗ್ಯ ಕಾರಣದಿಂದ ಅವರು ಹೊರ ನಡೆದಿದ್ದರು. ಹೀಗಾಗಿ, ರಾಕೇಶ್​ ಅವರನ್ನು ಶಮಿತಾ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಮಿಸ್ ಮಾಡಿಕೊಂಡಿದ್ದರು. ಪ್ರತೀಕ್​ ಸೆಹಜ್ಪಾಲ್, ನಿಶಾಂತ್​ ಭಟ್​, ಕರಣ್​ ಕುಂದ್ರಾ, ತೇಜಸ್ವಿ ಪ್ರಕಾಶ್​ ಕೂಡ ಫಿನಾಲೆಯಲ್ಲಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ಮಡಿದ ಪ್ರಿಯಕರ ಸಿದ್ದಾರ್ಥ್​ಗೆ ಬಿಗ್​ ಬಾಸ್​ ಫಿನಾಲೆಯಲ್ಲಿ ಶೆಹನಾಜ್​ ಗಿಲ್​ ನಮನ

‘ಬಿಗ್​ ಬಾಸ್’ ವೈಷ್ಣವಿ ಗೌಡ ಹೊಸ ಸಿನಿಮಾಗೆ ಭರ್ಜರಿ ಕ್ಲೈಮ್ಯಾಕ್ಸ್​; ಸೆನ್ಸಾರ್​ ಪ್ರಕ್ರಿಯೆ ಮುಗಿಸಿದ ‘ಬಹುಕೃತ ವೇಷಂ’

Follow us on

Related Stories

Most Read Stories

Click on your DTH Provider to Add TV9 Kannada