Bigg Boss 15 Winner: ನಟಿ ತೇಜಸ್ವಿ ಪ್ರಕಾಶ್​ಗೆ ‘ಬಿಗ್​ ಬಾಸ್​ 15’ ವಿನ್ನರ್​ ಪಟ್ಟ; ಬಹುಮಾನದ ಮೊತ್ತ ಎಷ್ಟು?

Tejasswi Prakash: ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಅವರು ‘ಹಿಂದಿ ಬಿಗ್​ ಬಾಸ್​ 15’ರ ವಿನ್ನರ್​ ಆಗಿದ್ದಾರೆ. ನಟ ಕಮ್​ ಮಾಡೆಲ್​ ಪ್ರತೀಕ್​ ಸೆಹಜ್ಪಾಲ್​ ಅವರು ರನ್ನರ್​ ಅಪ್​ ಆಗಿದ್ದಾರೆ.

Bigg Boss 15 Winner: ನಟಿ ತೇಜಸ್ವಿ ಪ್ರಕಾಶ್​ಗೆ ‘ಬಿಗ್​ ಬಾಸ್​ 15’ ವಿನ್ನರ್​ ಪಟ್ಟ; ಬಹುಮಾನದ ಮೊತ್ತ ಎಷ್ಟು?
‘ಹಿಂದಿ ಬಿಗ್ ಬಾಸ್ 15’ರ ವಿನ್ನರ್ ತೇಜಸ್ವಿ ಪ್ರಕಾಶ್
Follow us
TV9 Web
| Updated By: ಮದನ್​ ಕುಮಾರ್​

Updated on:Jan 31, 2022 | 8:32 AM

ಜನಪ್ರಿಯ ‘ಹಿಂದಿ ಬಿಗ್​ ಬಾಸ್​ 15’ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ. ಈ ಸೀಸನ್​ನ ವಿನ್ನರ್ (Bigg Boss 15 Winner)​ ಯಾರು ಎಂಬುದು ಬಹಿರಂಗ ಆಗಿದೆ. ಹಲವು ರೀತಿಯಲ್ಲಿ ಗಮನ ಸೆಳೆದ ನಟಿ ತೇಜಸ್ವಿ ಪ್ರಕಾಶ್​ (Tejasswi Prakash) ಅವರು ‘ಬಿಗ್​ ಬಾಸ್​ 15’ರ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಅವರು ವಿನ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ (Shamita Shetty) ಅವರೇ ಈ ಬಾರಿ ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿಯಬಹುದು ಎಂದು ಅನೇಕರು ಅಂದಾಜಿಸಿದ್ದರು. ಆದರೆ ಆ ಲೆಕ್ಕಾಚಾರ ಉಲ್ಟಾ ಆಯಿತು. ಅಂತಿಮವಾಗಿ ತೇಜಸ್ವಿ ಪ್ರಕಾಶ್​ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. ಪ್ರತೀಕ್​ ಸೆಹಜ್ಪಾಲ್​ ಅವರು ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸಲ್ಮಾನ್​ ಖಾನ್​ ಅವರು ತೇಜಸ್ವಿ ಪ್ರಕಾಶ್​ ಅವರ ಕೈ ಎತ್ತುವ ಮೂಲಕ ಅವರೇ ವಿನ್ನರ್​ ಎಂಬುದನ್ನು ಘೋಷಿಸಿದರು. ಬರೋಬ್ಬರಿ 40 ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತೇಜಸ್ವಿ ಪ್ರಕಾಶ್​ ಪಡೆದಿದ್ದಾರೆ. ಭಾನುವಾರ (ಜ.30) ರಾತ್ರಿ ಅದ್ದೂರಿಯಾಗಿ ಬಿಗ್​ ಬಾಸ್​ 15ನೇ ಸೀಸನ್​ ಫಿನಾಲೆ ಕಾರ್ಯಕ್ರಮ ನಡೆಯಿತು. ಹಲವು ಘಟನೆಗಳಿಗೆ ಈ ವೇದಿಕೆ ಸಾಕ್ಷಿ ಆಯಿತು.

‘ಹಿಂದಿ ಬಿಗ್​ ಬಾಸ್​ 15’ ಫಿನಾಲೆಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ರಶ್ಮಿ ದೇಸಾಯಿ, ಪ್ರತೀಕ್​ ಸೆಹಜ್ಪಾಲ್​, ತೇಜಸ್ವಿ ಪ್ರಕಾಶ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ ಮತ್ತು ನಿಶಾಂತ್​ ಭಟ್​ ಅವರು ಫಿನಾಲೆ ತಲುಪಿದ್ದರು. ಎಲ್ಲರೂ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದರು. ವೈಲ್ಡ್​ ಕಾರ್ಡ್​ ಮೂಲಕ ಬಿಗ್​ ಬಾಸ್​ ಪ್ರವೇಶಿಸಿ, ಫೈನಲ್​ ಹಂತ ತಲುಪಿದ್ದ ರಶ್ಮಿ ದೇಸಾಯಿ ಅವರು ಮೊದಲು ಎಲಿಮಿನೇಟ್​ ಆದರು.

ಶಮಿತಾ ಶೆಟ್ಟಿ ವರ್ಸಸ್​ ತೇಜಸ್ವಿ ಪ್ರಕಾಶ್​:

ಈ ಸೀಸನ್​ನಲ್ಲಿ ಶಮಿತಾ ಶೆಟ್ಟಿ ಅವರಿಗೆ ತೇಜಸ್ವಿ ಪ್ರಕಾಶ್​ ಪ್ರಬಲ ಪ್ರತಿಸ್ಪರ್ಧಿ ಆಗಿದ್ದರು. ಶಮಿತಾ ಶೆಟ್ಟಿಗೆ ಆಂಟಿ ಎಂದು ಕರೆಯುವ ಮೂಲಕ ಅವರು ದೊಡ್ಡ ಕಿರಿಕ್​ ಮಾಡಿಕೊಂಡಿದ್ದರು. 42ರ ಪ್ರಾಯದ ಶಮಿತಾಗೆ 28ರ ಪ್ರಾಯದ ತೇಜಸ್ವಿ ಪ್ರಕಾಶ್​ ಅವರು ಆಂಟಿ ಎಂದು ಕರೆದಿದ್ದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ಶಮಿತಾ ಶೆಟ್ಟಿಯ ವಯಸ್ಸನ್ನು ಅವಮಾನಿಸಲಾಗಿದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹಲವರು ತೇಜಸ್ವಿ ಪ್ರಕಾಶ್​ ವಿರುದ್ಧ ಗುಡುಗಿದ್ದರು. ಇಷ್ಟೆಲ್ಲ ವಿರೋಧ ವ್ಯಕ್ತವಾದ ಕಾರಣ ಅವರಿಗೆ ಹೆಚ್ಚು ವೋಟ್​ ಸಿಗುವುದು ಅನುಮಾನ ಎಂದು ಊಹಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಅಂತಿಮವಾಗಿ ತೇಜಸ್ವಿ ಪ್ರಕಾಶ್​ ಬಿಗ್​ ಬಾಸ್​ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ.

View this post on Instagram

A post shared by ColorsTV (@colorstv)

ಈ ರಿಯಾಟಿಲಿ ಶೋ ಗೆದ್ದಿದ್ದರಿಂದ ತೇಜಸ್ವಿ ಪ್ರಕಾಶ್​ ಖ್ಯಾತಿ ಹೆಚ್ಚಿದೆ. ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರಲು ಆರಂಭಿಸಿವೆ. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ‘ಬಿಗ್​ ಬಾಸ್​ 15’ ಫಿನಾಲೆ ಎಪಿಸೋಡ್​ನಲ್ಲಿ ದೀಪಿಕಾ ಪಡುಕೋಣೆ ಕೂಡ ಭಾಗವಹಿಸಿದ್ದರು. ‘ಗೆಹರಾಯಿಯಾ’ ಸಿನಿಮಾದ ಪ್ರಚಾರಕ್ಕಾಗಿ ಅವರು ಬಿಗ್​ ಬಾಸ್​ಗೆ ಬಂದಿದ್ದರು. ಬಿಗ್​ ಬಾಸ್​ ಮಾಜಿ ಸ್ಪರ್ಧಿ ಶೆಹನಾಜ್​ ಗಿಲ್​ ಅವರು ಫಿನಾಲೆ ವೇದಿಕೆಯಲ್ಲಿ ದಿವಂಗತ ನಟ, ಪ್ರಿಯಕರ ಸಿದ್ದಾರ್ಥ್​ ಶುಕ್ಲಾಗೆ ನಮನ ಸಲ್ಲಿಸಿದರು.

ಇದನ್ನೂ ಓದಿ:

ದಕ್ಷಿಣ ಭಾರತಕ್ಕೂ ಕಾಲಿಟ್ಟ ‘ಬಿಗ್​ ಬಾಸ್​ ಒಟಿಟಿ’; ಕನ್ನಡಿಗರಲ್ಲೂ ಹೆಚ್ಚಿತು ಕುತೂಹಲ

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

Published On - 7:17 am, Mon, 31 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ