‘42ರ ಮಹಿಳೆಗೆ 28ರ ಹುಡುಗಿ ಆಂಟಿ ಅಂತ ಕರೆಯೋದು ತಪ್ಪಾ?’: ಶಮಿತಾ ಶೆಟ್ಟಿ-ತೇಜಸ್ವಿ ಪ್ರಕಾಶ್​ ಜಗಳದಲ್ಲಿ ಜನರ ಪ್ರಶ್ನೆ

Bigg Boss 15: ನಟಿ ಶಮಿತಾ ಶೆಟ್ಟಿ ಅವರಿಗೆ ಈಗ 42ರ ಪ್ರಾಯ. ತೇಜಸ್ವಿ ಪ್ರಕಾಶ್​ ಅವರಿಗೆ ಈಗ 28 ವರ್ಷ ವಯಸ್ಸು. ಅದೇ ಕಾರಣದಿಂದ ಅವರು ಶಮಿತಾಗೆ ಆಂಟಿ ಎಂದು ಕರೆದಿದ್ದಾರೆ.

‘42ರ ಮಹಿಳೆಗೆ 28ರ ಹುಡುಗಿ ಆಂಟಿ ಅಂತ ಕರೆಯೋದು ತಪ್ಪಾ?’: ಶಮಿತಾ ಶೆಟ್ಟಿ-ತೇಜಸ್ವಿ ಪ್ರಕಾಶ್​ ಜಗಳದಲ್ಲಿ ಜನರ ಪ್ರಶ್ನೆ
ಶಮಿತಾ ಶೆಟ್ಟಿ, ತೇಜಸ್ವಿ ಪ್ರಕಾಶ್
Follow us
| Updated By: ಮದನ್​ ಕುಮಾರ್​

Updated on:Jan 30, 2022 | 8:20 AM

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುತ್ತದೆ. ಈ ಶೋನಲ್ಲಿ ನಡೆಯುವ ಜಗಳಗಳನ್ನೂ ವೀಕ್ಷಕರು ಎಂಜಾಯ್​ ಮಾಡ್ತಾರೆ. ಅದೇ ರೀತಿ ಪರ-ವಿರೋಧದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಮಾಡುತ್ತಾರೆ. ಈಗ ‘ಹಿಂದಿ ಬಿಗ್​ ಬಾಸ್​ 15’ ಫಿನಾಲೆ (Bigg Boss 15 Finale) ಹಂತಕ್ಕೆ ಬಂದಿದೆ. ಇಂದು (ಜ.30) ಈ ಸೀಸನ್​ ವಿನ್ನರ್​ (Bigg Boss 15 Winner) ಯಾರು ಎಂಬುದನ್ನು ಸಲ್ಮಾನ್ ಖಾನ್​ ಘೋಷಿಸಲಿದ್ದಾರೆ. ‘ಹಿಂದಿ ಬಿಗ್​ ಬಾಸ್​ 15’ರ ಆರು ಫೈನಲಿಸ್ಟ್​ಗಳ ಪೈಕಿ ರಶ್ಮಿ ದೇಸಾಯಿ ಅವರು ಎಲಿಮಿನೇಟ್​ ಆಗಿದ್ದು, ಈಗ 5 ಜನರ ನಡುವೆ ಹಣಾಹಣಿ ಮುಂದುವರಿದಿದೆ. ಈ ಐವರಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ (Shamita Shetty)ಕೂಡ ಇದ್ದಾರೆ. ಅವರಿಗೆ ಟಫ್​ ಸ್ಪರ್ಧೆ ನೀಡುತ್ತಿದ್ದಾರೆ ನಟಿ ತೇಜಸ್ವಿ ಪ್ರಕಾಶ್​. ಹಲವು ಕಾರಣಗಳಿಂದಾಗಿ ಈ ನಟಿಯರಿಬ್ಬರ ನಡುವೆ ಜಗಳ ಏರ್ಪಟ್ಟಿದೆ. ಈ ಹಿಂದಿನ ಒಂದು ಎಪಿಸೋಡ್​ನಲ್ಲಿ ಶಮಿತಾ ಶೆಟ್ಟಿಗೆ ಆಂಟಿ ಎಂದು ತೇಜಸ್ವಿ ಪ್ರಕಾಶ್​ (Tejasvi Prakash) ಕರೆದಿದ್ದರು. ಅದೇ ವಿಚಾರವನ್ನು ಇಟ್ಟುಕೊಂಡು ಫಿನಾಲೆವರೆಗೂ ಜಗಳ ಮಾಡಲಾಗಿದೆ. ಈ ವಿಷಯದಲ್ಲಿ ಕೆಲವರು ಶಮಿತಾ ಶೆಟ್ಟಿಗೆ ಬೆಂಬಲ ಸೂಚಿಸಿದರೆ, ಇನ್ನು ಕೆಲವರು ತೇಜಸ್ವಿ ಪ್ರಕಾಶ್​ ಅವರನ್ನು ಬೆಂಬಲಿಸಿದ್ದಾರೆ.

ನಟಿ ಶಮಿತಾ ಶೆಟ್ಟಿ ಅವರಿಗೆ ಈಗ 42ರ ಪ್ರಾಯ. ತೇಜಸ್ವಿ ಪ್ರಕಾಶ್​ ಅವರಿಗೆ ಈಗ 28 ವರ್ಷ ವಯಸ್ಸು. ಅದೇ ಕಾರಣದಿಂದ ಅವರು ಶಮಿತಾಗೆ ಆಂಟಿ ಎಂದು ಕರೆದಿದ್ದಾರೆ. ಆದರೆ ಇದು ಶಮಿತಾ ಅವರ ವಯಸ್ಸಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಬಿಪಾಶಾ ಬಸು ಕೂಡ ತೇಜಸ್ವಿ ಪ್ರಕಾಶ್​ ಅವರ ಮಾತನ್ನು ವಿರೋಧಿಸಿದ್ದಾರೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಒಂದಷ್ಟು ಜನರು ತೇಜಸ್ವಿ ಪರವಾಗಿ ಬ್ಯಾಟ್​ ಬೀಸಿದ್ದಾರೆ.

‘ಆಂಟಿ ಎಂಬುದು ಕೆಟ್ಟ ಪದ ಅಲ್ಲ. ವಯಸ್ಸು, ಲುಕ್​ ಮತ್ತು ವ್ಯಕ್ತಿತ್ವವನ್ನು ನೀವು ಯಾವ ರೀತಿ ನೋಡುತ್ತಿದ್ದೀರಿ ಎಂಬುದನ್ನು ಇದು ತಿಳಿಸುತ್ತದೆ. ಒಂದು ವೇಳೆ ಆಂಟಿ ಎಂಬ ಪದವನ್ನು ನೀವು ತಪ್ಪಾಗಿ ಅರ್ಥೈಸಿದರೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಅಗೌರವ ತೋರಿಸಿದಂತೆ ಆಗುತ್ತದೆ’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ.

‘ಆಂಟಿ ಅಂತ ಕರೆಯೋದು ಯಾವಾಗಿನಿಂದ ಒಂದು ಕೆಟ್ಟ ಪದ ಆಯ್ತು? ತೇಜಸ್ವಿ ಪ್ರಕಾಶ್​ ಅವರನ್ನೂ ಹಲವು ರೀತಿಯಲ್ಲಿ ನಿಂದಿಸಲಾಗಿತ್ತು. ಆದರೆ ಅವರು ಅದನ್ನು ದೊಡ್ಡದು ಮಾಡಲಿಲ್ಲ’ ಎಂದು ಅವರ ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅದೇನೇ ಇರಲಿ, ‘ಬಿಗ್ ​ಬಾಸ್​ ಒಟಿಟಿ’ ಮತ್ತು ‘ಹಿಂದಿ ಬಿಗ್​ ಬಾಸ್’ 15ನೇ ಸೀಸನ್​ನಲ್ಲಿ ಭಾಗವಹಿಸಿದ ಬಳಿಕ ಶಮಿತಾ ಶೆಟ್ಟಿ ಅವರು ಜನಪ್ರಿಯತೆ ಹೆಚ್ಚಿದೆ. ಅಂತಿಮವಾಗಿ ಅವರು ಈ ಬಾರಿ ಟ್ರೋಫಿ ಎತ್ತಿ ಹಿಡಿಯೋತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮಾಡಿದೆ. ಪ್ರತೀಕ್​ ಸೆಹಜ್ಪಾಲ್, ನಿಶಾಂತ್​ ಭಟ್​, ಕರಣ್​ ಕುಂದ್ರಾ, ತೇಜಸ್ವಿ ಪ್ರಕಾಶ್​ ಕೂಡ ಫಿನಾಲೆಯಲ್ಲಿದ್ದಾರೆ.

ಇದನ್ನೂ ಓದಿ:

‘ಬಿಗ್​ ಬಾಸ್ 15’​ ಫಿನಾಲೆಯಲ್ಲಿ ಶಮಿತಾ ಶೆಟ್ಟಿ; ವಿನ್ನರ್​ ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿರೋದು ಯಾರೆಲ್ಲ?

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

Published On - 8:17 am, Sun, 30 January 22

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು