ಹೊಸ ಗರ್ಲ್​ಫ್ರೆಂಡ್ ಹುಡುಕಿಕೊಂಡ ರಾಕೇಶ್​ ಬಾಪಟ್​; ವಿಚಾರ ಕೇಳಿ ಶಾಕ್​ ಆದ ಶಮಿತಾ ಶೆಟ್ಟಿ

ಶಮಿತಾ ಹಾಗೂ ರಾಕೇಶ್​ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಪರಿಚಯಗೊಂಡರು. ಇಬ್ಬರ ಗೆಳೆತನ ಶೋ ಮುಗಿಯುವುದರೊಳಗೆ ಪ್ರೀತಿಗೆ ತಿರುಗಿತ್ತು. ಶೋ ಪೂರ್ಣಗೊಂಡ ಬಳಿಕವೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಹೊಸ ಗರ್ಲ್​ಫ್ರೆಂಡ್ ಹುಡುಕಿಕೊಂಡ ರಾಕೇಶ್​ ಬಾಪಟ್​; ವಿಚಾರ ಕೇಳಿ ಶಾಕ್​ ಆದ ಶಮಿತಾ ಶೆಟ್ಟಿ
ಶಮಿತಾ-ರಾಕೇಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 11, 2022 | 12:09 PM

‘ಹಿಂದಿ ಬಿಗ್​ ಬಾಸ್​ 15’ Hindi Bigg Boss 15) ಕೊನೆಯ ಹಂತ ತಲುಪಿದೆ. ‘ಬಿಗ್​ ಬಾಸ್​ ಒಟಿಟಿ’ ಮೂಲಕ ಹೆಸರು ಮಾಡಿದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಈ ಬಾರಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಈ ವಾರ ಅವರು ಮನೆಯ ಕ್ಯಾಪ್ಟನ್​ ಕೂಡ ಆಗಿದ್ದಾರೆ. ಅವರು ಗೆಲ್ಲೋ ಚಾನ್ಸ್​ ಹೆಚ್ಚಿದೆ ಎನ್ನುವ ಅಭಿಪ್ರಾಯ ವೀಕ್ಷಕರ ವಲಯದಲ್ಲಿ ಕೇಳಿ ಬಂದಿದೆ. ಈ ಮಧ್ಯೆ ಶಮಿತಾಗೆ ಅವರ ಗೆಳತಿ ನೇಹಾ ಭಾಸಿನ್ ಶಾಕ್​ ನೀಡಿದ್ದಾರೆ. ರಾಕೇಶ್ ಹೊಸ ಗರ್ಲ್​ಫ್ರೆಂಡ್​ ಹುಡುಕಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಈ ವಿಚಾರ ಕೇಳಿ ಶಮಿತಾ ಒಂದು ಕ್ಷಣ ಶಾಕ್​ಗೆ ಒಳಗಾದರು.

ಶಮಿತಾ ಹಾಗೂ ರಾಕೇಶ್​ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಪರಿಚಯಗೊಂಡರು. ಇಬ್ಬರ ಗೆಳೆತನ ಶೋ ಮುಗಿಯುವುದರೊಳಗೆ ಪ್ರೀತಿಗೆ ತಿರುಗಿತ್ತು. ಶೋ ಪೂರ್ಣಗೊಂಡ ಬಳಿಕವೂ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಬಿಗ್​ ಬಾಸ್​ 15ನೇ ಸೀಸನ್​ಗೆ ಶಮಿತಾ ಮೊದಲು ಮನೆ ಒಳಗೆ ಬಂದರೆ, ವೈಲ್ಡ್​ ಕಾರ್ಡ್​ ಮೂಲಕ ರಾಕೇಶ್​ ಬಂದಿದ್ದರು. ಅವರು ಈಗ ಎಲಿಮಿನೇಟ್​ ಆಗಿ ಮನೆಯಿಂದ ಹೊರ ನಡೆದಿದ್ದಾರೆ. ಹೀಗಾಗಿ, ರಾಕೇಶ್​ ಅವರನ್ನು ಶಮಿತಾ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ನೇಹಾ ಭಾಸಿನ್ ಅವರು ಅತಿಥಿಯಾಗಿ ಬಿಗ್​ ಬಾಸ್​ ವೇದಿಕೆ ಏರಿದ್ದರು. ಸಲ್ಮಾನ್​ ಖಾನ್​ ಜತೆ ಒಂದಷ್ಟು ಹರಟೆ ಹೊಡೆದರು. ಆ ಬಳಿಕ ಶಮಿತಾ ಜತೆ ಮಾತನಾಡೋ ಅವಕಾಶ ನೇಹಾಗೆ ಸಿಕ್ಕಿತ್ತು. ‘​ ನಿನ್ನನ್ನು ರಾಕೇಶ್ ನೆನಪಿಸಿಕೊಳ್ಳುತ್ತಿರುತ್ತಾನೆ. ಆದರೆ, ಆತ ಹೊಸ ಗರ್ಲ್​ಫ್ರೆಂಡ್​ ಮಾಡಿಕೊಂಡಿದ್ದಾನೆ’ ಎಂದು ನೇಹಾ ಹೇಳುತ್ತಿದ್ದಂತೆ ಶಮಿತಾ ಮುಖ ಬಾಡಿ ಹೋಯಿತು. ಆ ಬಳಿಕ ಇದು ಜೋಕ್​ ಎಂದರು ನೇಹಾ. ಆಗ ಶಮಿತಾಗೆ ಹೋದ ಉಸಿರು ಬಂದಂತಾಯಿತು. ‘ಏನಮ್ಮ, ದಯವಿಟ್ಟು ಹಾರ್ಟ್​ಅಟ್ಯಾಕ್​ ಮಾಡಿಸಬೇಡ’ ಎಂದರು ಶಮಿತಾ. ಆಗ ಸಲ್ಮಾನ್​ ಖಾನ್​ ಕೂಡ ನಕ್ಕರು.

ಜನವರಿ ಮಧ್ಯದ ವೇಳೆಗೆ ‘ಬಿಗ್​ ಬಾಸ್​ 15’ ಪೂರ್ಣಗೊಳ್ಳಬೇಕಿತ್ತು. ಆದರೆ, ಇದನ್ನು ಇನ್ನೂ ಎರಡು ವಾರ ವಿಸ್ತರಣೆ ಮಾಡಲಾಗಿದೆ. ಜನವರಿ ಅಂತ್ಯದ ವೇಳೆಗೆ ಈ ಶೋ ಪೂರ್ಣಗೊಳ್ಳಬಹುದು ಎನ್ನುವ ನಿರೀಕ್ಷೆ ಇದೆ. ಕೊರೊನಾ ವೈರಸ್​ ಹೆಚ್ಚುತ್ತಿರುವುದರಿಂದ ಫಿನಾಲೆ ನಡೆಸೋಕೆ ಸದ್ಯದ ಮಟ್ಟಿಗೆ ಬಿಗ್​ ಬಾಸ್​ ಫಿನಾಲೆ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್ ಅರ್ಧಕ್ಕೆ ತೊರೆದ ರಾಕೇಶ್ ಬಾಪಟ್​​-ಶಮಿತಾ ಶೆಟ್ಟಿ; ಏನಿದು ಸಮಾಚಾರ?

ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್​ ಖಾನ್ ಖಡಕ್​ ವಾರ್ನಿಂಗ್​​​; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ

Published On - 12:03 pm, Tue, 11 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ