AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಜಕ್ಕೂ ಅದು ಅನಿರೀಕ್ಷಿತವಾಗಿತ್ತು’; ಖುಷಿಯಿಂದ ಎಲ್ಲವನ್ನೂ ಹೇಳಿಕೊಂಡ ಮೇಘನಾ ರಾಜ್​

‘ನನ್ನಮ್ಮ ಸೂಪರ್​ ಸ್ಟಾರ್’​ ಹಾಗೂ ‘ಡಾನ್ಸಿಂಗ್ ಚಾಂಪಿಯನ್’ ಸಮ್ಮಿಲನದಲ್ಲಿ ಮಹಾ ಸಂಚಿಕೆ ಇಂದು (ಜನವರಿ 30) ಪ್ರಸಾರವಾಗಿದೆ. ಎರಡೂ ಶೋನ ಸ್ಪರ್ಧಿಗಳು ಒಂದೇ ವೇದಿಕೆ ಮೇಲೆ ಬಂದಿದ್ದರು. ಇದರಿಂದ ವೀಕ್ಷಕರಿಗೆ ಸಾಕಷ್ಟು ಮನರಂಜನೆ ಸಿಕ್ಕಿದೆ.

‘ನಿಜಕ್ಕೂ ಅದು ಅನಿರೀಕ್ಷಿತವಾಗಿತ್ತು’; ಖುಷಿಯಿಂದ ಎಲ್ಲವನ್ನೂ ಹೇಳಿಕೊಂಡ ಮೇಘನಾ ರಾಜ್​
ಮೇಘನಾ ರಾಜ್​
TV9 Web
| Edited By: |

Updated on: Jan 30, 2022 | 9:36 PM

Share

ನಟಿ ಮೇಘನಾ ರಾಜ್ ( Meghana Raj)​ ಪಾಲಿಗೆ 2020 ತುಂಬಾನೇ ಕರಾಳವಾಗಿತ್ತು. ಅವರ ಪತಿ ಚಿರಂಜೀವಿ ಸರ್ಜಾ (Chiranjeevi Sarja) ನಿಧನ ಹೊಂದಿದ್ದರು. ಇದು ಅವರಿಗೆ ಆಘಾತ ತಂದಿತ್ತು. ಈ ಘಟನೆ ನಡೆದು ಒಂದೂವರೆ ವರ್ಷದ ಮೇಲಾಗಿದೆ. ಆ ನೋವಿನ ಜತೆಯಲ್ಲಿ ಜೀವನ ಸಾಗಿಸುವುದನ್ನು ಮೇಘನಾ ರೂಢಿಸಿಕೊಂಡಿದ್ದಾರೆ. ಅವರು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್​ ಮಾಡಿದ್ದಾರೆ. ಮೇಘನಾ ಗೆಳೆಯ ಪನ್ನಗ ಭರಣ ನಿರ್ಮಾಣ ಮಾಡುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಅವರು ನಾಯಕಿ. ಇದರ ಜತೆಗೆ ಕಿರುತೆರೆ ಜಡ್ಜ್​ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಇದು ನಿಜಕ್ಕೂ ಅನಿರೀಕ್ಷಿತವಾಗಿತ್ತು ಎಂದಿದ್ದಾರೆ ಮೇಘನಾ.

ಕಲರ್ಸ್​ ಕನ್ನಡ ವಾಹಿನಿಯ ಇನ್​ಸ್ಟಾಗ್ರಾಮ್​ನಲ್ಲಿ ಮೇಘನಾ ರಾಜ್​ ಲೈವ್​ ಬಂದಿದ್ದರು. ಈ ವೇಳೆ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ‘ನಾನು ಮೊದಲ ಬಾರಿಗೆ ರಿಯಾಲಿಟಿ ಶೋ ಜಡ್ಜ್​ ಆಗಿದ್ದೇನೆ. ಇದು ಅನಿರೀಕ್ಷಿತವಾಗಿತ್ತು. ‘ಡಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋನ ಓಪನಿಂಗ್​ ಸಂಚಿಕೆಗೆ ನಾನು ಅತಿಥಿ ಜಡ್ಜ್​ ಆಗಿದ್ದೆ. ಆ ಬಳಿಕ ಈ ಶೋಗೆ ಪರ್ಮನೆಂಟ್​ ಜಡ್ಜ್​ ಆಗುತ್ತೇನೆ ಎಂದು ಊಹಿಸಿರಲಿಲ್ಲ. ನೀವು ಕಂಬ್ಯಾಕ್​ ಮಾಡಿ ಎಂದು ಕೋರಿಕೊಂಡ್ರಿ. ಆ ಕೋರಿಕೆಯನ್ನು ಈಡೇರಿಸಿದ್ದೇನೆ’ ಎಂದಿದ್ದಾರೆ ಮೇಘನಾ.

‘ಕಲರ್ಸ್​ ಕನ್ನಡ ಸೆಟ್​ನಲ್ಲಿ ಪಾಸಿಟಿವ್​ ವೈಬ್​ ಇದೆ. ನಾಲ್ಕು ಎಪಿಸೋಡ್​ ಮುಗಿದಿದೆ. ಎಲ್ಲಾ ಸ್ಪರ್ಧಿಗಳ ಜತೆ ಒಂದೊಳ್ಳೆಯ ಬಾಂಡಿಂಗ್​ ಬೆಳೆದಿದೆ. ಈ ಶೋಗೆ ನಾನು ಜಡ್ಜ್​ ಆಗಿರುವುದಕ್ಕೆ ತುಂಬಾನೇ ಹೆಮ್ಮೆ ಇದೆ. ನಾನು ಜಡ್ಜ್​ ಆಗಿ ಡ್ಯಾನ್ಸ್​ ಅನ್ನು ಇಷ್ಟಪಡ್ತೀನಿ. ಒಂದು ವೇದಿಕೆಗೆ ಹೋಗಿ ಡ್ಯಾನ್ಸ್​ ಎಂಜಾಯ್​​ ಮಾಡಿ ತುಂಬಾ ಸಮಯ ಆಗಿತ್ತು. ಅದು ಇಲ್ಲಿ ಈಡೇರಿದೆ. ನನಗೆ ಡ್ಯಾನ್ಸ್​ ಮಾಡಬೇಕು ಎನ್ನುವ ಆಸೆ ಇದೆ. ಆದರೆ, ಅದನ್ನು ಹಿಡಿದಿಟ್ಟುಕೊಂಡಿದ್ದೇನೆ ಎಂದಿದ್ದಾರೆ ಅವರು.

‘ನನ್ನಮ್ಮ ಸೂಪರ್​ ಸ್ಟಾರ್’​ ಹಾಗೂ ‘ಡಾನ್ಸಿಂಗ್ ಚಾಂಪಿಯನ್’ ಸಮ್ಮಿಲನದಲ್ಲಿ ಮಹಾ ಸಂಚಿಕೆ ಇಂದು (ಜನವರಿ 30) ಪ್ರಸಾರವಾಗಿದೆ. ಎರಡೂ ಶೋನ ಸ್ಪರ್ಧಿಗಳು ಒಂದೇ ವೇದಿಕೆ ಮೇಲೆ ಬಂದಿದ್ದರು. ಇದರಿಂದ ವೀಕ್ಷಕರಿಗೆ ಸಾಕಷ್ಟು ಮನರಂಜನೆ ಸಿಕ್ಕಿದೆ. ಈ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಪನ್ನಗ ಭರಣ ನಿರ್ಮಾಣದ ಹೊಸ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ಇದರ ಜತೆಗೆ ‘ಶಬ್ದ’ ಹೆಸರಿನ ಹೊಸ ಸಿನಿಮಾದಲ್ಲಿ ಮೇಘನಾ ಬಣ್ಣ ಹಚ್ಚುತ್ತಿದ್ದಾರೆ. ಈ ಬಗ್ಗೆ ಇಂದು ಅವರು ಲೈವ್​ನಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡಾನ್ಸಿಂಗ್​ ಚಾಂಪಿಯನ್​ ಶೋನಲ್ಲಿ ಚಿರು-ರಾಯನ್​ ಬಗ್ಗೆ ಮೇಘನಾ ರಾಜ್​ ಸರ್ಜಾ ಹೃದಯಸ್ಪರ್ಶಿ ಮಾತು

ಹೇಗೆ ಸಾಗ್ತಿದೆ ಮೇಘನಾ ರಾಜ್​ ಕಮ್​ಬ್ಯಾಕ್​ ಜರ್ನಿ? ವಿಡಿಯೋ ಮೂಲಕ ಖುಷಿ ಹಂಚಿಕೊಂಡ ನಟಿ

Follow Us
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ