Tejasswi Prakash: ಬಿಗ್ ಬಾಸ್ ಫಿನಾಲೆಗೂ ಮುನ್ನವೇ ಸ್ಪರ್ಧಿ ಜೊತೆ ನಡೆದಿತ್ತು ದೊಡ್ಡ ಡೀಲ್; ಈಗ ಸತ್ಯ ಬಹಿರಂಗ
Bigg Boss 15 winner Tejasswi Prakash: ಬಿಗ್ ಬಾಸ್ ಮನೆಯೊಳಗೆ ಇರುವವರಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ ಎಂಬುದು ಪ್ರೇಕ್ಷಕರ ನಂಬಿಕೆ. ಆದರೆ ತೇಜಸ್ವಿ ಪ್ರಕಾಶ್ ವಿಚಾರದಲ್ಲಿ ಬೇರೆಯೇ ಆಗಿದೆ.
ಬಿಗ್ ಬಾಸ್ ಕಾರ್ಯಕ್ರಮದ ಪಾರದರ್ಶಕತೆ ಬಗ್ಗೆ ಕೆಲವರಿಗೆ ಅನುಮಾನ ಇದೆ. ಅದೇನೇ ಇದ್ದರೂ ಈ ಕಾರ್ಯಕ್ರಮದ ಜನಪ್ರಿಯತೆಗೆ ಏನೂ ಧಕ್ಕೆ ಆಗಿಲ್ಲ. ಪ್ರತಿ ಬಾರಿ ಬಿಗ್ ಬಾಸ್ ವಿನ್ನರ್ ಹೆಸರು ಘೋಷಣೆ ಆದಾಗ ಜನರಿಗೆ ಒಂದಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಪ್ರೇಕ್ಷಕರ ವೋಟ್ ಮಾತ್ರವಲ್ಲದೇ ಇನ್ನೂ ಅನೇಕ ಕಾರಣಗಳಿಂದಾಗಿ ವಿನ್ನರ್ ಯಾರು ಎಂಬುದು ನಿರ್ಧಾರ ಆಗುತ್ತದೆ ಎಂಬ ಅನುಮಾನ ಪ್ರತಿ ಸೀಸನ್ನಲ್ಲೂ ವ್ಯಕ್ತವಾಗುತ್ತದೆ. ಈಗ ನಟಿ ತೇಜಸ್ವಿ ಪ್ರಕಾಶ್ (Tejasswi Prakash) ಅವರು ‘ಹಿಂದಿ ಬಿಗ್ ಬಾಸ್ 15’ರ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಭಾನುವಾರ (ಜ.30) ರಾತ್ರಿ ನಡೆದ ಕಲರ್ಫುಲ್ ಫಿನಾಲೆಯಲ್ಲಿ ಅವರನ್ನು ವಿನ್ನರ್ ಎಂದು ಘೋಷಿಸಲಾಯಿತು. ಅಚ್ಚರಿ ಎಂದರೆ, ಅವರು ಬಿಗ್ ಬಾಸ್ ವಿನ್ (Bigg Boss 15 winner) ಆಗುವುದಕ್ಕೂ ಮುನ್ನವೇ ಅವರ ಜೊತೆ ಒಂದು ದೊಡ್ಡ ಡೀಲ್ ನಡೆದಿತ್ತು! ಆ ಬಗ್ಗೆ ಈಗ ಮಾಹಿತಿ ಜಗಜ್ಜಾಹೀರಾಗಿದೆ. ಬಹುನಿರೀಕ್ಷಿತ ‘ನಾಗಿನ್ 6’ (Naagin 6) ಧಾರಾವಾಹಿಗೆ ನಾಯಕಿಯಾಗಿ ತೇಜಸ್ವಿ ಪ್ರಕಾಶ್ ಆಯ್ಕೆ ಆಗಿದ್ದಾರೆ. ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಈ ಆಯ್ಕೆ ಪ್ರಕ್ರಿಯೆ ನಡೆದಿತ್ತು ಎಂಬುದು ಅಚ್ಚರಿಯ ವಿಚಾರ.
ಬಿಗ್ ಬಾಸ್ ಮನೆಯೊಳಗೆ ಇರುವವರಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ ಎಂಬುದು ಪ್ರೇಕ್ಷಕರ ನಂಬಿಕೆ. ಆದರೆ ತೇಜಸ್ವಿ ಪ್ರಕಾಶ್ ವಿಚಾರದಲ್ಲಿ ಬೇರೆಯೇ ಆಗಿದೆ. ಅವರು ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಅವರನ್ನು ‘ನಾಗಿನ್ 6’ ತಂಡ ಸಂಪರ್ಕಿಸಿದೆ. ಕೆಲವು ದಿನಗಳ ಹಿಂದೆಯೇ ಅವರನ್ನು ಈ ಧಾರಾವಾಹಿಗೆ ನಾಯಕಿ ಎಂದು ತೀರ್ಮಾನಿಸಲಾಗಿತ್ತು. ಬಿಗ್ ಬಾಸ್ ಮನೆಯ ಒಳಗಡೆಯೇ ‘ನಾಗಿನ್ 6’ ಪ್ರೋಮೋ ಶೂಟಿಂಗ್ ಮಾಡಲಾಗಿತ್ತು. ಆ ಪ್ರೋಮೋವನ್ನು ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬಿತ್ತರಿಸಲಾಗಿದೆ. ‘ನಾಗಿನ್ 6’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವುದು ತೇಜಸ್ವಿ ಪ್ರಕಾಶ್ ಅವರೇ ಎಂಬುದನ್ನು ಈಗ ಬಹಿರಂಗ ಪಡಿಸಲಾಗಿದೆ.
ಈಗಾಗಲೇ ಈ ಜನಪ್ರಿಯ ಧಾರಾವಾಹಿ 5 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರು ಈ ಧಾರಾವಾಹಿಗೆ ಬಂಡವಾಳ ಹೂಡುತ್ತಿದ್ದಾರೆ. 6ನೇ ಸೀಸನ್ಗೆ ಯಾರು ನಾಯಕಿ ಆಗುತ್ತಾರೆ ಎಂಬ ಕೌತುಕ ಅನೇಕ ದಿನಗಳಿಂದ ಮನೆ ಮಾಡಿತ್ತು. ತೇಜಸ್ವಿ ಪ್ರಕಾಶ್ ಅವರ ಹೆಸರನ್ನು ಬಹಿರಂಗಪಡಿಸುವ ಮೂಲಕ ಆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ‘ನಾಗಿನ್ 6’ ಧಾರಾವಾಹಿಯಲ್ಲಿ ಹೊಸ ನಾಗಿಣಿಯಾಗಿ ನಟಿಸುವ ಅವಕಾಶ ಪಡೆದಿರುವ ತೇಜಸ್ವಿ ಪ್ರಕಾಶ್ ಅವರಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
View this post on Instagram
View this post on Instagram
ಬಿಗ್ ಬಾಸ್ ಟ್ರೋಫಿ, 40 ಲಕ್ಷ ರೂಪಾಯಿ ಬಹುಮಾನ ಮೊತ್ತದ ಜೊತೆಗೆ ಈ ಬಂಪರ್ ಚಾನ್ಸ್ ಕೂಡ ಸಿಕ್ಕಿರುವುದರಿಂದ ಅವರೀಗ ಸಖತ್ ಖುಷಿಯಲ್ಲಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಕಾರಣದಿಂದಾಗಿ ತೇಜಸ್ವಿ ಪ್ರಕಾಶ್ ಜನಪ್ರಿಯತೆ ದೇಶದಾದ್ಯಂತ ಹಬ್ಬಿದೆ.
ಇದನ್ನೂ ಓದಿ:
‘42ರ ಮಹಿಳೆಗೆ 28ರ ಹುಡುಗಿ ಆಂಟಿ ಅಂತ ಕರೆಯೋದು ತಪ್ಪಾ?’: ಶಮಿತಾ ಶೆಟ್ಟಿ-ತೇಜಸ್ವಿ ಪ್ರಕಾಶ್ ಜಗಳದಲ್ಲಿ ಜನರ ಪ್ರಶ್ನೆ
ಸೀರಿಯಲ್ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು
Published On - 8:28 am, Mon, 31 January 22