‘ಬಿಗ್​ ಬಾಸ್’ ವೈಷ್ಣವಿ ಗೌಡ ಹೊಸ ಸಿನಿಮಾಗೆ ಭರ್ಜರಿ ಕ್ಲೈಮ್ಯಾಕ್ಸ್​; ಸೆನ್ಸಾರ್​ ಪ್ರಕ್ರಿಯೆ ಮುಗಿಸಿದ ‘ಬಹುಕೃತ ವೇಷಂ’

‘ಬಿಗ್​ ಬಾಸ್’ ವೈಷ್ಣವಿ ಗೌಡ ಹೊಸ ಸಿನಿಮಾಗೆ ಭರ್ಜರಿ ಕ್ಲೈಮ್ಯಾಕ್ಸ್​; ಸೆನ್ಸಾರ್​ ಪ್ರಕ್ರಿಯೆ ಮುಗಿಸಿದ ‘ಬಹುಕೃತ ವೇಷಂ’
ವೈಷ್ಣವಿ ಗೌಡ-ಶಶಿಕಾಂತ್

ವೈಷ್ಣವಿ ಗೌಡ ಅವರ ಮುಂದಿನ ಚಿತ್ರದ ಹೆಸರು ‘ಬಹುಕೃತ ವೇಷಂ’. ‘ಗೌಡ್ರು ಸೈಕಲ್’ ಸಿನಿಮಾದ ನಾಯಕ ಶಶಿಕಾಂತ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ಕೆ. ಎಳ್ಳಂಪಳ್ಳಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

TV9kannada Web Team

| Edited By: Rajesh Duggumane

Jan 29, 2022 | 5:54 PM

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಒಂದು ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ನಟಿ ವೈಷ್ಣವಿ ಗೌಡ (Vaishnavi Gowda). ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ (Kannada Bigg Boss 8)ಕ್ಕೆ ತೆರಳಿದ ನಂತರದಲ್ಲಿ ಈ ಅಭಿಮಾನಿ ಬಳಗ ಹಿರಿದಾಗಿದೆ. ಅವರನ್ನು ಇಷ್ಟಪಡೋಕೆ ಅಭಿಮಾನಿಗಳಿಗೆ ಹಲವು ಕಾರಣ ಸಿಕ್ಕಿವೆ. ಅಂದುಕೊಂಡ ಮಟ್ಟಿಗೆ ವೋಟ್​ ಬೀಳದ ಕಾರಣ ಬಿಗ್​ ಬಾಸ್​ ಗೆಲ್ಲೋಕೆ ಅವರಿಗೆ ಸಾಧ್ಯವಾಗಿಲ್ಲ. ಟ್ರೋಫಿ ಗೆಲ್ಲದೇ ಇದ್ದರೂ ಅವರ ಜನಪ್ರಿಯತೆ ಹೆಚ್ಚಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಷ್ಟೇ ಅಲ್ಲ, ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಹಲವು ಸಿನಿಮಾ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈಗ ಅವರ ನಟನೆಯ ಹೊಸ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಭರ್ಜರಿಯಾಗಿ ಮೂಡಿ ಬಂದಿದೆಯಂತೆ.  

ವೈಷ್ಣವಿ ಗೌಡ ಅವರ ಮುಂದಿನ ಚಿತ್ರದ ಹೆಸರು ‘ಬಹುಕೃತ ವೇಷಂ’. ‘ಗೌಡ್ರು ಸೈಕಲ್’ ಸಿನಿಮಾದ ನಾಯಕ ಶಶಿಕಾಂತ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ಕೆ. ಎಳ್ಳಂಪಳ್ಳಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇವರು ಈ ಹಿಂದೆ ‘ಗೌಡ್ರು ಸೈಕಲ್’ ಚಿತ್ರ ನಿರ್ದೇಶನ ಮಾಡಿದ್ದರು. ಈಗ ಅವರು ‘ಬಹುಕೃತ ವೇಷಂ’ ಚಿತ್ರದ ಕ್ಲೈಮ್ಯಾಕ್ಸ್​ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಮೂಡಿಬಂದಿದೆ ಬಂದಿದೆ ಎಂಬುದು ಅವರ ಅಭಿಪ್ರಾಯ.

ಸಾಮಾನ್ಯವಾಗಿ ಕ್ಲೈಮ್ಯಾಕ್ಸ್​ನಲ್ಲಿ ಒಂದು ದೊಡ್ಡ ಫೈಟ್​ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಹಾಗಿಲ್ಲ. ‘ನಾಲ್ಕುವರೆ ನಿಮಿಷದ ಸಂಭಾಷಣೆ ಕ್ಲೈಮ್ಯಾಕ್ಸ್​ನಲ್ಲಿರಲಿದೆ. ಈ ಸಂಭಾಷಣೆ ಎಲ್ಲಿಯೂ ಕಟ್​ ಆಗುವುದಿಲ್ಲ. ಶಶಿಕಾಂತ್ ಹಾಗೂ ವೈಷ್ಣವಿ ಗೌಡ ಪೈಪೋಟಿ ಮೇಲೆ ಅಭಿನಯಿಸಿದ್ದಾರೆ’ ಎಂದು ನಿರ್ದೇಶಕ ಪ್ರಶಾಂತ್ ಕೆ. ಎಳ್ಳಂಪಳ್ಳಿ ತಿಳಿಸಿದ್ದಾರೆ.

ಎಚ್. ನಂದ ಹಾಗೂ ಡಿ.ಕೆ. ರವಿ ನಿರ್ಮಾಣದ ಈ ಚಿತ್ರಕ್ಕೆ ಅಧ್ಯಾಯ್ ತೇಜ್ ಕಥೆ ಚಿತ್ರಕಥೆ ಬರೆದಿದ್ದಾರೆ.  ಗಾಯಕ ವಿಜಯ ಪ್ರಕಾಶ್​ ಕಂಠದಲ್ಲಿ ಮೂಡಿ ಬಂದಿರುವ ‘ಮಾತುಕತೆ ನಿಂತ ಕಥೆ..’ ಹಾಡು​ ಹಾಗೂ ‘ಜೇಮ್ಸ್’ ಚಿತ್ರದ ನಿರ್ದೇಶಕರಾದ ಚೇತನ್ ಕುಮಾರ್ ಬರೆದ ‘ಮಾಮಾಹುಷಾರು..’ ಸಾಂಗ್​ ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಲಹರಿ ಆಡಿಯೋ ಮೂಲಕ‌ ಬಿಡುಗಡೆಯಾಗಿರುವ ಟೀಸರ್​​ಗೂ ಪ್ರಶಂಸೆ ಸಿಕ್ಕಿದೆ.

ವೈಶಾಖ್ ವಿ. ಭಾರ್ಗವ್​ ಅವರು ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತ ನಿರ್ದೇಶಕರಾಗಿ ಇದು ಅವರಿಗೆ ಮೊದಲ ಅನುಭವ. ಕಿರಣ್ ಕೃಷ್ಣ ಮೂರ್ತಿ ಅವರು ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹರ್ಷಕುಮಾರ್ ಗೌಡ ಛಾಯಾಗ್ರಹಣ ನೀಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ‘ ಸಿನಿಮಾಗೆ ಸಂಕಲನ ಮಾಡಿರೋ ಜ್ಞಾನೇಶ್ ಬಿ. ಮಾತಾಡ್ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ. ಸಿನಿಮಾದ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು ಚಿತ್ರದ ಸೆನ್ಸಾರ್ ಕೂಡ ಪೂರ್ಣಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಬಹುಕೃತ ವೇಷಂ’ ಚಿತ್ರ ಕರ್ನಾಟಕ ರಾಜ್ಯಾದ್ಯಂತ  ತೆರೆಕಾಣಲಿದೆ.

ಇದನ್ನೂ ಓದಿ:  ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ

ಆರ್​ಸಿಬಿ ಮಾಸ್ಕ್​ ಧರಿಸಿ ಮಿಂಚಿದ ವೈಷ್ಣವಿ ಗೌಡ; ಈ ಸಲ ಕಪ್​ ನಮ್ಮದೇ ಎಂದ ಸನ್ನಿಧಿ

Follow us on

Related Stories

Most Read Stories

Click on your DTH Provider to Add TV9 Kannada