Badava Rascal: ಟಾಲಿವುಡ್​ಗೆ ಹೊರಟ ‘ಬಡವ ರಾಸ್ಕಲ್’; ಖುಷಿ ವಿಚಾರ ಹಂಚಿಕೊಂಡ ಧನಂಜಯ  

‘ಪುಷ್ಪ’ ಚಿತ್ರದ ಜಾಲಿ ರೆಡ್ಡಿ ಪಾತ್ರಕ್ಕೆ ಧನಂಜಯ ಅವರೇ ಡಬ್ಬಿಂಗ್​ ಮಾಡಿದ್ದರು. ಈಗ ‘ಬಡವ ರಾಸ್ಕಲ್​’ ತೆಲುಗು ವರ್ಷನ್​ಗೆ ಅವರೇ ಡಬ್​ ಮಾಡುತ್ತಾರಾ ಎಂಬುದು ಸದ್ಯದ ಕುತೂಹಲ.

Badava Rascal: ಟಾಲಿವುಡ್​ಗೆ ಹೊರಟ ‘ಬಡವ ರಾಸ್ಕಲ್’; ಖುಷಿ ವಿಚಾರ ಹಂಚಿಕೊಂಡ ಧನಂಜಯ  
ಬಡವ ರಾಸ್ಕಲ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 29, 2022 | 4:48 PM

ಧನಂಜಯ (Dhananjay) ನಟನೆಯ ‘ಬಡವ ರಾಸ್ಕಲ್​’ ಸಿನಿಮಾ (Badava Rasacal Movie) ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ‘ಒಟಿಟಿ’ಯಲ್ಲಿ ರಿಲೀಸ್​ ಆದ ಈ ಚಿತ್ರಕ್ಕೆ ಪ್ರಶಂಸೆ ಸಿಕ್ಕಿದೆ. ಈಗ ಈ ಸಿನಿಮಾ ಟಾಲಿವುಡ್​ಗೆ ಕಾಲಿಡೋಕೆ ರೆಡಿ ಆಗಿದೆ. ‘ಬಡವ ರಾಸ್ಕಲ್​’ ಸಿನಿಮಾ ತೆಲುಗಿಗೆ ಡಬ್​ ಆಗಿ ತೆರೆಗೆ ಬರುತ್ತಿದೆ. ಶೀಘ್ರವೇ ರಿಲೀಸ್​ ದಿನಾಂಕ ಘೋಷಣೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಚಿತ್ರ ತೆಲುಗಿನಲ್ಲಿ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಗುವ ನಿರೀಕ್ಷೆ ಇದೆ. ಇದಕ್ಕೆ ಕಾರಣ ‘ಪುಷ್ಪ’ ಚಿತ್ರ (Pushpa Movie). ‘ಬಡವ ರಾಸ್ಕಲ್​’ ಚಿತ್ರಕ್ಕಿಂತ ಒಂದು ವಾರ ಮೊದಲು ತೆರೆಗೆ ಬಂದಿದ್ದು ‘ಪುಷ್ಪ’ ಚಿತ್ರ. ಈ ಸಿನಿಮಾದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಧನಂಜಯ ಅವರು ಮಿಂಚಿದ್ದರು. ‘ಪುಷ್ಪ 2’ನಲ್ಲೂ ಅವರ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸುವ ಸಾಧ್ಯತೆ ಇದೆ. ಸೂಪರ್​ ಹಿಟ್​ ಚಿತ್ರದ ಮೂಲಕ ಧನಂಜಯ ಅವರು ಟಾಲಿವುಡ್​ ಚಿತ್ರ ಲೋಕಕ್ಕೆ ಪರಿಚಯ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ‘ಬಡವ ರಾಸ್ಕಲ್​’ ತೆಲುಗಿನಲ್ಲಿ ರಿಲೀಸ್​ ಆದರೆ, ಇದು ಚಿತ್ರಕ್ಕೆ ಪ್ಲಸ್​ಪಾಯಿಂಟ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡಿತ್ತು. ಧನಂಜಯ ಅವರು ಹೀರೋ ಆಗಿ ಮಿಂಚಿದರೆ, ಅಮೃತಾ ಅಯ್ಯಂಗಾರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಂಗಾಯಣ ರಘು ಹಾಗೂ ತಾರಾ ಅವರು ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸಿತ್ತು. ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಜನವರಿ 26ರಂದು ಒಟಿಟಿಯಲ್ಲಿ ರಿಲೀಸ್​ ಆಗಿತ್ತು. ಈಗ ಟಾಲಿವುಡ್​ ಅಂಗಳಕ್ಕೆ ಕಾಲಿಡೋಕೆ ಸಿನಿಮಾ ಸಜ್ಜಾಗಿದೆ.

‘ಪುಷ್ಪ’ ಚಿತ್ರದ ಜಾಲಿ ರೆಡ್ಡಿ ಪಾತ್ರಕ್ಕೆ ಧನಂಜಯ ಅವರೇ ಡಬ್ಬಿಂಗ್​ ಮಾಡಿದ್ದರು. ಈಗ ‘ಬಡವ ರಾಸ್ಕಲ್​’ ತೆಲುಗು ವರ್ಷನ್​ಗೆ ಅವರೇ ಡಬ್​ ಮಾಡುತ್ತಾರಾ ಎಂಬುದು ಸದ್ಯದ ಕುತೂಹಲ. ಈ ಸಿನಿಮಾ ಯಾವಾಗ ತೆಲುಗಿನಲ್ಲಿ ರಿಲೀಸ್​ ಆಗಲಿದೆ ಎಂಬ ಕೌತಕವೂ ಮೂಡಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ಇತ್ತೀಚೆಗೆ ಸಿನಿಮಾ ಗೆಲುವಿನ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಈ ಮೂಲಕ ಗೆಲುವನ್ನು ಸಂಭ್ರಮಿಸಿತ್ತು. ಆದರೆ, ಕೊವಿಡ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಿಗೆ ಭೇಟಿ ನೀಡೋಕೆ ಚಿತ್ರತಂಡದ ಬಳಿ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಧನಂಜಯ ಅವರು ಬೇಸರ ಹೊರ ಹಾಕಿದ್ದರು. ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ಕೋರಿಕೊಂಡಿದ್ದರು.

ಇದನ್ನೂ ಓದಿ: ‘ಬಡವ ರಾಸ್ಕಲ್’​ ಒಟಿಟಿ ರಿಲೀಸ್​ ದಿನಾಂಕ ಘೋಷಣೆ; ಯಾವ ಪ್ಲಾಟ್​ಫಾರ್ಮ್​ನಲ್ಲಿ ತೆರೆಕಾಣಲಿದೆ ಧನಂಜಯ​ ಚಿತ್ರ?

‘ಬಡವ ರಾಸ್ಕಲ್​’ ಕಲೆಕ್ಷನ್​ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್