‘ಬಡವ ರಾಸ್ಕಲ್’​ ಒಟಿಟಿ ರಿಲೀಸ್​ ದಿನಾಂಕ ಘೋಷಣೆ; ಯಾವ ಪ್ಲಾಟ್​ಫಾರ್ಮ್​ನಲ್ಲಿ ತೆರೆಕಾಣಲಿದೆ ಧನಂಜಯ​ ಚಿತ್ರ?

‘ಬಡವ ರಾಸ್ಕಲ್’​ ಒಟಿಟಿ ರಿಲೀಸ್​ ದಿನಾಂಕ ಘೋಷಣೆ; ಯಾವ ಪ್ಲಾಟ್​ಫಾರ್ಮ್​ನಲ್ಲಿ ತೆರೆಕಾಣಲಿದೆ ಧನಂಜಯ​ ಚಿತ್ರ?
ಧನಂಜಯ-ಅಮೃತಾ ಅಯ್ಯಂಗಾರ್

ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಸಾಕಷ್ಟು ನಗುವಿನ ಕಚಗುಳಿ ನೀಡಿತ್ತು. ಧನಂಜಯ ಅವರು ಹೀರೋ ಆಗಿ ಮಿಂಚಿದರೆ, ಅಮೃತಾ ಅಯ್ಯಂಗಾರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

TV9kannada Web Team

| Edited By: Rajesh Duggumane

Jan 19, 2022 | 6:42 PM

ಧನಂಜಯ (Dhananjaya)​ ನಟನೆಯ ‘ಬಡವ ರಾಸ್ಕಲ್​’ (Badava Rascal) ಸಿನಿಮಾ ಡಿಸೆಂಬರ್​ ಅಂತ್ಯದಲ್ಲಿ ತೆರೆಕಂಡು ಯಶಸ್ಸು ಗಳಿಸಿದೆ. ನಿರ್ಮಾಪಕನಾಗಿ ಮೊದಲ ಸಿನಿಮಾದಲ್ಲೇ ಧನಂಜಯ ಅವರು ಗೆದ್ದಿದ್ದಾರೆ. ಹಾಸ್ಯ ಕಥಾ ಹಂದರ ಇರುವ ಈ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಕೊವಿಡ್​ ಕಾರಣದಿಂದ ಸಿನಿಮಾವನ್ನು ಎಲ್ಲರಿಂದಲೂ ಕಣ್ತುಂಬಿಕೊಳ್ಳೋಕೆ ಸಾಧ್ಯವಾಗಿರಲಿಲ್ಲ. ಕೆಲವರು ಕೊರೊನಾ ಭಯದಿಂದ ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿರಲಿಲ್ಲ. ಹೀಗಾಗಿ, ಈ ಚಿತ್ರ ಒಟಿಟಿಗೆ ಯಾವಾಗ ಬರಲಿದೆ ಎಂದು ಅನೇಕರು ಕಾದಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಧನಂಜಯ​ ನಟನೆಯ ‘ಬಡವ ರಾಸ್ಕಲ್​’ ಚಿತ್ರ ಗಣರಾಜ್ಯೋತ್ಸವದ ಪ್ರಯುಕ್ತ ಒಟಿಟಿ ಪ್ಲಾಟ್​ಫಾರ್ಮ್​ಗೆ ಲಗ್ಗೆ ಇಡುತ್ತಿದೆ.  

ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಸಾಕಷ್ಟು ನಗುವಿನ ಕಚಗುಳಿ ನೀಡಿತ್ತು. ಧನಂಜಯ ಅವರು ಹೀರೋ ಆಗಿ ಮಿಂಚಿದರೆ, ಅಮೃತಾ ಅಯ್ಯಂಗಾರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಂಗಾಯಣ ರಘು ಹಾಗೂ ತಾರಾ ಅವರು ಧನಂಜಯ ಅವರ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸಿತ್ತು. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಈಗ ಜನವರಿ 26ರಂದು ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. ವೂಟ್​ ಆ್ಯಪ್​ನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ.

ಕೊವಿಡ್​ ಹೆಚ್ಚಾಗುವುದಕ್ಕೂ ಕೆಲವೇ ವಾರಗಳ ಮೊದಲು ಈ ಚಿತ್ರ ರಿಲೀಸ್​ (ಡಿಸೆಂಬರ್ 24) ಆಗಿತ್ತು. ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್​ ಮಾಡಿದೆ. ಆದರೆ, ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ಹಾಗೂ ವೀಕೆಂಡ್​ ಕರ್ಫ್ಯೂ ಜಾರಿಗೆ ಬಂದಿರುವುದರಿಂದ ಎಲ್ಲರಿಂದಲೂ ‘ಬಡವ ರಾಸ್ಕಲ್​’ ವೀಕ್ಷಿಸೋಕೆ ಸಾಧ್ಯವಾಗಿಲ್ಲ. ಅವರೆಲ್ಲರೂ ಈಗ ವೂಟ್​ನಲ್ಲಿ ಸಿನಿಮಾ ವೀಕ್ಷಿಸಬಹುದು.

ಇತ್ತೀಚೆಗೆ ಸಿನಿಮಾ ಗೆಲುವಿನ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಈ ಮೂಲಕ ಗೆಲುವನ್ನು ಸಂಭ್ರಮಿಸಿತ್ತು. ಆದರೆ, ಕೊವಿಡ್​ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಿಗೆ ಭೇಟಿ ನೀಡೋಕೆ ಚಿತ್ರತಂಡದ ಬಳಿ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಧನಂಜಯ ಅವರು ಬೇಸರ ಹೊರ ಹಾಕಿದ್ದರು. ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ಕೋರಿಕೊಂಡಿದ್ದರು.

ಇದನ್ನೂ ಓದಿ: ಪ್ರೇಕ್ಷಕರಿಗೆ ‘ಬಡವ ರಾಸ್ಕಲ್​’ ಚಿತ್ರ ಇಷ್ಟವಾಯ್ತಾ? ಧನಂಜಯ ಅಭಿಮಾನಿಗಳು ಹೇಳಿದ್ದೇನು?

‘ಬಡವ ರಾಸ್ಕಲ್​’ ಕಲೆಕ್ಷನ್​ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು

Follow us on

Related Stories

Most Read Stories

Click on your DTH Provider to Add TV9 Kannada