ಚಿತ್ರರಂಗಕ್ಕೆ ಮತ್ತೆ ತಾರತಮ್ಯ; ಎಲ್ಲದಕ್ಕೂ ಇದೆ ಅವಕಾಶ, ಥಿಯೇಟರ್​ಗೆ ಮಾತ್ರ ಮುಂದುವರಿದ ನಿರ್ಬಂಧ

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತಂದ ಟಫ್​ ರೂಲ್ಸ್​ನಿಂದಾಗಿ ಹಲವು ನಿರ್ಮಾಪಕರಿಗೆ ಸಿನಿಮಾ ರಿಲೀಸ್​ ಮಾಡೋಕೆ ಆಗಿಲ್ಲ. ಈ ಎಲ್ಲಾ ಕಾರಣದಿಂದ ಚಿತ್ರಮಂದಿರದ ಮೇಲೆ ಹೇರಿರುವ ನಿರ್ಬಂಧ ತೆಗೆಯಬೇಕು ಎಂಬುದು ಚಿತ್ರರಂಗದವರ ಒತ್ತಾಯ.

ಚಿತ್ರರಂಗಕ್ಕೆ ಮತ್ತೆ ತಾರತಮ್ಯ; ಎಲ್ಲದಕ್ಕೂ ಇದೆ ಅವಕಾಶ, ಥಿಯೇಟರ್​ಗೆ ಮಾತ್ರ ಮುಂದುವರಿದ ನಿರ್ಬಂಧ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 29, 2022 | 3:59 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ಇಂದು (ಜನವರಿ 29) ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಭೆಯಲ್ಲಿ ನೈಟ್​ ಕರ್ಫ್ಯೂ ರದ್ದು (Night Curfew Cancel) ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಹಲವು ನಿರ್ಬಂಧಗಳನ್ನು ಸಡಿಲ ಮಾಡಲಾಗಿದೆ. ಆದರೆ, ಚಿತ್ರರಂಗಕ್ಕೆ  ಮಾತ್ರ ತಾರತಮ್ಯ ಮಾಡಲಾಗಿದೆ. ಕೊವಿಡ್ ಕಾಣಿಸಿಕೊಂಡಾಗಿನಿಂದಲೂ ಸಾಕಷ್ಟು ತೊಂದರೆಗೆ ಸಿಲುಕಿರುವ ಚಿತ್ರರಂಗಕ್ಕೆ (Cinema Industry) ಸರ್ಕಾರದ ಹೊಸ ನಿಯಮದಿಂದ ಮತ್ತೆ ನಿರಾಸೆ ಆಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಹೀಗಾಗಿ, ದೊಡ್ಡದೊಡ್ಡ ಸಿನಿಮಾಗಳು ರಿಲೀಸ್​ ಆಗೋದು ಮತ್ತೆ ವಿಳಂಬ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿದೆ. ಮೊದಲನೇ ಅಲೆ ಕಾಣಿಸಿಕೊಂಡಾಗ ಚಿತ್ರಮಂದರಗಳಿಗೆ ಮೊದಲು ಬೀಗ ಹಾಕಲಾಗಿತ್ತು. ಅನ್​ಲಾಕ್​ ಪ್ರಕ್ರಿಯೆ ವೇಳೆ ಚಿತ್ರಮಂದಿರಕ್ಕೆ ಕೊನೆಯಲ್ಲಿ ಅವಕಾಶ ನೀಡಲಾಗಿತ್ತು. ಎರಡನೇ ಅಲೆ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ಈಗ ಕೊರೊನಾ ಮೂರನೇ ಅಲೆ ಸಂದರ್ಭದಲ್ಲೂ ಇದೇ ತಾರತಮ್ಯ ಮುಂದುವರಿದಿದೆ.

ಇಂದು ನಡೆದ ಸಭೆ ಬಳಿಕ ಮಾತನಾಡಿರುವ ಸಚಿವ ಆರ್. ಅಶೋಕ್​, ‘ಜನವರಿ 31ರಿಂದ ನೈಟ್ ಕರ್ಫ್ಯೂ ತೆರವುಗೊಳ್ಳಲಿದೆ. ಹೋಟೆಲ್, ಬಾರ್​​​ಗಳು ಪೂರ್ಣ ಪ್ರಮಾಣದಲ್ಲಿ ವಹಿವಾಟು ನಡೆಸಬಹುದು. ಸಿನಿಮಾ ಹಾಲ್​ಗಳಲ್ಲಿ 50:50 ಅವಕಾಶ. ಮದುವೆಗೆ 200 ಬದಲು 300 ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ. ಶಾಲೆಗಳು ಆರಂಭಗೊಳ್ಳಲಿದೆ’ ಎಂದಿದ್ದಾರೆ. ಚಿತ್ರಮಂದಿರದಲ್ಲಿ ಹೌಸ್​ಫುಲ್​ಗೆ ಅವಕಾಶ ನೀಡದೇ ಇರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರದ ನಿರ್ಧಾರಕ್ಕೆ ಫಿಲ್ಮ್ ಚೇಂಬರ್​ ಆಕ್ರೋಶ ಹೊರಹಾಕಿದೆ. ‘ಚಿತ್ರೋದ್ಯಮದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬೇರೆ ಎಲ್ಲಾ ಉದ್ಯಮಗಳಿಗೂ ಸರ್ಕಾರ ಅವಕಾಶ ನೀಡಿದೆ.  ಚಿತ್ರೋದ್ಯಮಕ್ಕೆ ಯಾಕೆ ಸಂಪೂರ್ಣ ಅವಕಾಶ ನೀಡುತ್ತಿಲ್ಲ? ಈಗಾಗಲೇ ನಿರ್ಮಾಪಕರು, ಕಲಾವಿದರು ಬೀದಿಗೆ ಬಂದಿದ್ದಾರೆ. ಥಿಯೇಟರ್​ಗಳಿಗೆ ಶೇ.100ರಷ್ಟು ಆಸನ ವ್ಯವಸ್ಥೆಗೆ ಅವಕಾಶ ನೀಡಲಿ’ ಎಂದು ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್.ಎಂ.ಸುರೇಶ್ ಹೇಳಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತಂದ ಟಫ್​ ರೂಲ್ಸ್​ನಿಂದಾಗಿ ಹಲವು ನಿರ್ಮಾಪಕರಿಗೆ ಸಿನಿಮಾ ರಿಲೀಸ್​ ಮಾಡೋಕೆ ಆಗಿಲ್ಲ. ಈಗಾಗಲೇ ಹಲವು ಪ್ರೊಡ್ಯೂಸರ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಮಾಡುವುದರ ಜತೆಗೆ ಸಾಲದ ಹೊರೆಯನ್ನೂ ಹೊತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಚಿತ್ರಮಂದಿರದ ಮೇಲೆ ಹೇರಿರುವ ನಿರ್ಬಂಧ ತೆಗೆಯಬೇಕು ಎಂಬುದು ಚಿತ್ರರಂಗದವರ ಒತ್ತಾಯ. ಒಂದೊಮ್ಮೆ ಥಿಯೇಟರ್​ಗಳಲ್ಲಿ ಹೌಸ್​ಫುಲ್​ಗೆ ಅವಕಾಶ ನೀಡಿದರೆ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್​ ಆಗಲಿವೆ. ಇದರಿಂದ ಚಿತ್ರರಂಗಕ್ಕೆ ಮೊದಲಿನ ಕಳೆ ಬರಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ವಾಣಿಜ್ಯ ಮಂಡಳಿ ಸದಸ್ಯರು ಮುಂದಾಗಿದ್ದಾರೆ. ಗೃಹ ಕಚೇರಿ ಕೃಷ್ಣಾಕ್ಕೆ ನಿಯೋಗ ಆಗಮಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್.ಎಂ. ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ ಸದಸ್ಯರ ನಿಯೋಗ ಬಂದಿದೆ.

ಇದನ್ನೂ ಓದಿ: ‘ನೀನೇ ನನ್ನ ಹೆಂಡ್ತಿ’ ಎಂದು ನಂಬಿಸಿ, ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪ; ಕನ್ನಡ ಸಿನಿಮಾ ನಿರ್ಮಾಪಕನ​ ಬಂಧನ

ನೈಟ್​ ಕರ್ಫ್ಯೂ ಇದ್ರೂ ನಡೀತಿತ್ತು ಸೀರಿಯಲ್​ ಶೂಟಿಂಗ್​; ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು?