ಅಮೃತಾ ಅಯ್ಯಂಗಾರ್​ಗೆ ಡಾಲಿ ಧನಂಜಯ ಪ್ರಪೋಸ್​; ಖುಷಿಯಿಂದ ಕಮೆಂಟ್​​ ಮಾಡಿದ ಫ್ಯಾನ್ಸ್​

ಅಮೃತಾ ಅಯ್ಯಂಗಾರ್​ಗೆ ಡಾಲಿ ಧನಂಜಯ ಪ್ರಪೋಸ್​; ಖುಷಿಯಿಂದ ಕಮೆಂಟ್​​ ಮಾಡಿದ ಫ್ಯಾನ್ಸ್​
ಅಮೃತಾ ಅಯ್ಯಂಗಾರ್​, ಡಾಲಿ ಧನಂಜಯ

Daali Dhananjaya | Amrutha Iyengar: ರಿಯಲ್​ ಲೈಫ್​ನಲ್ಲಿಯೂ ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ ಅವರ ಜೋಡಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಸದ್ಯ ಈ ಪ್ರಪೋಸ್​ ವಿಡಿಯೋ ವೈರಲ್​ ಆಗುತ್ತಿದೆ.

TV9kannada Web Team

| Edited By: Madan Kumar

Jan 28, 2022 | 8:25 AM

ಕನ್ನಡ ಚಿತ್ರರಂಗದಲ್ಲಿ ನಟ ಡಾಲಿ ಧನಂಜಯ (Daali Dhananjaya) ಮತ್ತು ನಟಿ ಅಮೃತಾ ಅಯ್ಯಂಗಾರ್​ ಉತ್ತಮ ಜೋಡಿ ಎನಿಸಿಕೊಂಡಿದ್ದಾರೆ. ‘ಪಾಪ್​ ಕಾರ್ನ್​ ಮಂಕಿ ಟೈಗರ್​’ ಮತ್ತು ‘ಬಡವ ರಾಸ್ಕಲ್​’ ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡ ಈ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇಬ್ಬರ ನಟನೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ರಿಯಲ್​ ಲೈಫ್​ನಲ್ಲಿಯೂ ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ (Amrutha Iyengar) ನಡುವೆ ಉತ್ತಮ ಬಾಂಧವ್ಯ ಇದೆ. ಇವರಿಬ್ಬರ ಬಗ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಈಗ ಅಮೃತಾ ಅಯ್ಯಂಗಾರ್​ ಅವರಿಗೆ ಡಾಲಿ ಧನಂಜಯ ಪ್ರಪೋಸ್​ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಟ ಗಣೇಶ್​ ನಡೆಸಿಕೊಡುತ್ತಿರುವ ‘ಗೋಲ್ಡನ್​ ಗ್ಯಾಂಗ್​’ (Golden Gang) ಶೋನಲ್ಲಿ ಇಂಥದ್ದೊಂದು ಸನ್ನಿವೇಶ ನಡೆದಿದೆ. ಪ್ರಪೋಸ್​ ಮಾಡುವಾಗ ಧನಂಜಯ ನಾಚಿಕೊಂಡಿದ್ದಾರೆ. ಅಮೃತಾ ಅಯ್ಯಂಗಾರ್​ ಕೂಡ ನಾಚಿ ನೀರಾಗಿದ್ದಾರೆ. ಒಬ್ಬರ ನಡುವಿನ ಆ ರೊಮ್ಯಾಂಟಿಕ್​ ಸನ್ನಿವೇಶದ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಅದು ಸಖತ್​ ವೈರಲ್​ ಆಗುತ್ತಿದೆ. ‘ಕಂಗ್ರಾಜುಲೇಷನ್ಸ್​ ಡಾಲಿ ಭಾಯ್​’ ಎಂದು ಈಗಾಗಲೇ ಫ್ಯಾನ್ಸ್​ ಕಮೆಂಟ್​ ಮಾಡಲು ಆರಂಭಿಸಿದ್ದಾರೆ.

ತಮ್ಮ ಬದುಕಿನ ಬೆಸ್ಟ್​ ಸ್ನೇಹಿತರ ಬಗ್ಗೆ ಮಾತನಾಡುವ ಕಾರ್ಯಕ್ರಮವೇ ‘ಗೋಲ್ಡನ್​ ಗ್ಯಾಂಗ್​’. ಈ ಶೋನಲ್ಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ ಪಾಲ್ಗೊಂಡಿದ್ದಾರೆ. ‘ಮಂಡಿಯೂರಿ ಬೇಡುವೆನು. ಹೃದಯ ಕಾಲಡಿ ಇಡುವೆನು. ತೆಗೆದು ಬಚ್ಚಿಟ್ಟುಕೋ. ಇಲ್ಲಾ.. ತುಳಿದು ಕಾಲ್​ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ’ ಎಂದು ರೊಮ್ಯಾಂಟಿಕ್​ ಆಗಿ ಕವಿತೆ ಹೇಳುವ ಮೂಲಕ ಡಾಲಿ ಪ್ರಪೋಸ್​ ಮಾಡಿದ್ದಾರೆ. ಕೆಂಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಹೂವು ಸ್ವೀಕರಿಸಿದ ಅಮೃತಾ ಅವರು ‘ಬಡವ ರಾಸ್ಕಲ್’​ ಚಿತ್ರದ ಹಾಡು ಹೇಳಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಡ್ಯಾನ್ಸ್​ ಮಾಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಈ ಎಪಿಸೋಡ್​ ಜ.29 ಮತ್ತು ಜ.30ರ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ರಿಯಲ್​ ಲೈಫ್​ನಲ್ಲಿಯೂ ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ ಅವರ ಜೋಡಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಜೀ ಕನ್ನಡ ಹಂಚಿಕೊಂಡ ಪ್ರೋಮೋಗೆ ಅಭಿಮಾನಿಗಳು ಮಾಡುತ್ತಿರುವ ಕಮೆಂಟ್​ಗಳೇ ಅದಕ್ಕೆ ಸಾಕ್ಷಿ ಎನ್ನಬಹುದು.

View this post on Instagram

A post shared by Zee Kannada (@zeekannada)

‘ನಿಜಜೀವನದಲ್ಲೂ ಈ ಜೋಡಿ ತುಂಬ ಚೆನ್ನಾಗಿರುತ್ತೆ. ನೋಡಿದ್ರೆ ಡೌಟ್​ ಬರ್ತಿದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಒಳ್ಳೇ ಜೋಡಿ. ಬೇಗ ಸೇರಲಿ, ಜೊತೆಯಾಗಿ ಬದುಕು ಸಾಗಲಿ’ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ ಅವರು ಇದಕ್ಕೆಲ್ಲ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

ಇದನ್ನೂ ಓದಿ:

‘ನಾವು ಕಾಲಿಟ್ರೆ ಹೊಸ ಅಲೆ ಏಳತ್ತೆ’; ಸಿನಿಮಾ ಜರ್ನಿಯನ್ನು ಇನ್ನೊಂದು ರೀತಿ ಅರ್ಥೈಸಿದ ಧನಂಜಯ

ಬಳ್ಳಾರಿಯಲ್ಲಿ ಧನಂಜಯ ಅವರನ್ನು ನೋಡೋಕೆ ಮುಗಿಬಿದ್ದ ಫ್ಯಾನ್ಸ್​

Follow us on

Most Read Stories

Click on your DTH Provider to Add TV9 Kannada