Samantha: ಸಮಂತಾ ಶರ್ಟ್​ ಮೇಲೆ ಎಫ್ ವರ್ಡ್​​; ಇದು ಯಾರಿಗೆ ಕೊಟ್ಟ ಉತ್ತರ?

ಸಮಾನ್ಯವಾಗಿ ಟ್ರೋಲ್​ಗಳಿಗೆ ಸಮಂತಾ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಅನೇಕ ಟ್ರೋಲ್​ಗಳು ಹರಿದಾಡಿವೆ. ಈ ಎಲ್ಲದಕ್ಕೂ ಸಮಂತಾ ಉತ್ತರ ನೀಡಿಲ್ಲ. ಆದರೆ, ಈ ರೀತಿ ಟೀಕೆ ಮಾಡುವವರು ಹಾಗೂ ಟ್ರೋಲ್​ ಮಾಡುವವರಿಗೆ ಸಮಂತಾ ಈಗ ಒಂದೇ ಲೈನ್​ ಮೂಲಕ ಉತ್ತರ ನೀಡಿದ್ದಾರೆ.

Samantha: ಸಮಂತಾ ಶರ್ಟ್​ ಮೇಲೆ ಎಫ್ ವರ್ಡ್​​; ಇದು ಯಾರಿಗೆ ಕೊಟ್ಟ ಉತ್ತರ?
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 01, 2022 | 5:34 PM

ಪತಿಯಿಂದ ವಿಚ್ಛೇದನ ಪಡೆದ ನಂತರದಲ್ಲಿ ಸಮಂತಾ (Samantha) ಅವರು ತುಂಬಾನೇ ಬದಲಾಗಿದ್ದಾರೆ. ಅವರು ಡೋಂಟ್​ ಕೇರ್​ ಆ್ಯಟಿಟ್ಯೂಡ್ ಅಳವಡಿಸಿಕೊಂಡಿದ್ದಾರೆ. ವಿಚ್ಛೇದನ ಪಡೆದುಕೊಂಡ ಬಳಿಕ ಸಮಂತಾ ಅವರಿಗೆ ಇದ್ದ ಡಿಮ್ಯಾಂಡ್​​ ಹೆಚ್ಚಿದೆ. ಇತ್ತೀಚೆಗೆ ಅವರು ಡ್ಯಾನ್ಸ್​ ಮಾಡಿದ ‘ಹು ಅಂತಿಯಾ ಮಾವ..’ ಹಾಡು ಸೂಪರ್​ ಹಿಟ್​ ಆಯಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು. ಆದರೆ ಒಂದು ವರ್ಗದ ಜನರು ಸಮಂತಾರನ್ನು ದ್ವೇಷಿಸುತ್ತಿದ್ದಾರೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಾಕಷ್ಟು ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ. ಆದರೆ ಈ​ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ದೇಶ ವಿದೇಶದಲ್ಲಿ ಸುತ್ತಾಡುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇಂದು (ಫೆಬ್ರವರಿ 1) ಸಮಂತಾ ಮುಂಬೈನಲ್ಲಿ (Mumbai) ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಶರ್ಟ್​ ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಟ್ರೋಲ್​ಗಳಿಗೆ ಸಮಂತಾ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಅನೇಕ ಟ್ರೋಲ್​ಗಳು ಹರಿದಾಡಿವೆ. ಈ ಎಲ್ಲದಕ್ಕೂ ಸಮಂತಾ ಉತ್ತರ ನೀಡಿಲ್ಲ. ಆದರೆ, ಈ ರೀತಿ ಟೀಕೆ ಮಾಡುವವರು ಹಾಗೂ ಟ್ರೋಲ್​ ಮಾಡುವವರಿಗೆ ಸಮಂತಾ ಈಗ ಒಂದೇ ಲೈನ್​ ಮೂಲಕ ಉತ್ತರ ನೀಡಿದ್ದಾರೆ. ಅವರು ತೊಟ್ಟಿರುವ ಶರ್ಟ್​ ಮೇಲೆ ಎಫ್​ ವರ್ಡ್​​ ಇದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಟ್ರೋಲಿಗರಿಗೆ ಸಮಂತಾ ಓಪನ್​ ಆಗಿಯೇ ಉತ್ತರ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಸಮಂತಾ ಮುಂಬೈಗೆ ತೆರಳಿದ್ದಾರೆ. ಸಿನಿಮಾ ಕೆಲಸದ ನಿಮಿತ್ತ ಅವರು ಅಲ್ಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಸಮಂತಾ ಕೈಯಲ್ಲಿ ಈಗ ಅನೇಕ ಆಫರ್​ಗಳಿವೆ. ಫಿಲಿಪ್​ ಜಾನ್​ ನಿರ್ದೇಶನದ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಇಂಗ್ಲಿಷ್​ ಸಿನಿಮಾದಲ್ಲಿ ದ್ವಿಲಿಂಗಿ​ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ. ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಲೈಂಗಿಕ ಆಸಕ್ತಿ ಇರುವ ತಮಿಳು ಮಹಿಳೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆ ಅವರು ವಿಶೇಷ ಆಸಕ್ತಿ ಇಟ್ಟುಕೊಂಡಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.

ಇತ್ತೀಚೆಗೆ ಅವರು ಸ್ವಿಜರ್​ಲೆಂಡ್​ಗೆ ತೆರಳಿದ್ದರು. ಅಲ್ಲಿ ಹಾಯಾಗಿ ಸಮಯ ಕಳೆದು ಬಂದಿದ್ದರು. ಹಿಮಚ್ಛಾದಿತ ಪ್ರದೇಶಗಳಲ್ಲಿ ಸ್ಕೀಯಿಂಗ್​ ಮಾಡಲಾಗುತ್ತದೆ. ಅಂದರೆ, ಕಾಲಿಗೆ ಉದ್ದನೆಯ ಹಲಗೆ ರೀತಿಯ ವಸ್ತುವನ್ನು ಕಟ್ಟಿಕೊಂಡು, ಕೈನಲ್ಲಿ ಕೋಲು ಹಿಡಿದುಕೊಂಡು ಹಿಮದಲ್ಲಿ ಜಾರಿ ಹೋಗುತ್ತಾರೆ. ಇದನ್ನು ಸಮಂತಾ ಮಾಡಿದ್ದಾರೆ. ಇದಕ್ಕಾಗಿ ಅವರು ದುಬಾರಿ ಜಾಕೆಟ್​ ಖರೀದಿಸಿದ್ದರು. ಸಮಂತಾ Toni Sailer ಬ್ರ್ಯಾಂಡ್​ನ ಹಳದಿ ಬಣ್ಣದ ಜಾಕೆಟ್​ ಖರೀದಿಸಿದ್ದಾರೆ. ಇದಕ್ಕೆ ಅವರು 75 ಸಾವಿರ ರೂಪಾಯಿ ನೀಡಿದ್ದಾರೆ.

ಇದನ್ನೂ ಓದಿ: ‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ

Samantha: ಸಮಂತಾ ಸ್ಕೀಯಿಂಗ್ ಪಯಣ ಎಷ್ಟು ಕಷ್ಟವಿತ್ತು? ವಿಡಿಯೋ ಸಮೇತ ವಿವರಿಸಿದ ನಟಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್