AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ

ಇವರ ವಿಚ್ಛೇದನದ ಬಗ್ಗೆ ಅಕ್ಕಿನೇನಿ ನಾಗಾರ್ಜುನ ಅವರು ಮಾತನಾಡಿದ್ದಾರೆ ಎಂದು ಸಾಕಷ್ಟು ವರದಿಗಳು ಪ್ರಸಾರವಾದವು. ಆದರೆ, ತಾವು ಸಮಂತಾ ಬಗ್ಗೆ ಆಗಲೀ, ನಾಗ ಚೈತನ್ಯ ಬಗ್ಗೆ ಆಗಲೀ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅಕ್ಕಿನೇನಿ ನಾಗಾರ್ಜುನ ಸ್ಪಷ್ಟನೆ ನೀಡಿದ್ದಾರೆ.

‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ, ಸಮಂತಾ, ನಾಗ ಚೈತನ್ಯ
TV9 Web
| Edited By: |

Updated on: Jan 27, 2022 | 9:22 PM

Share

ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಆಗಿದ್ದಾರೆ. ತೆರೆಯ ಮೇಲೆ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದಿದ್ದ ಈ ಜೋಡಿ ನಂತರ ನಿಜ ಜೀವನದಲ್ಲೂ ಗಂಡ-ಹೆಂಡತಿ ಆದರು. ಆದರೆ ಇಬ್ಬರೂ ಬೇರೆ ಆಗಲು ನಿರ್ಧರಿಸಿದ ಈ ಸೆಲೆಬ್ರಿಟಿಗಳು, ಈಗ ತಮ್ಮದೇ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇಬ್ಬರೂ ಪರಸ್ಪರ ಒಪ್ಪಿ, ಗೌರವಯುತವಾಗಿ ಬೇರೆಯಾಗುತ್ತಿದ್ದೇವೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಇಬ್ಬರೂ ಬೇರೆ ಆಗಿದ್ದೇಕೆ ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಇವರ ವಿಚ್ಛೇದನದ ಬಗ್ಗೆ ಅಕ್ಕಿನೇನಿ ನಾಗಾರ್ಜುನ ಅವರು ಮಾತನಾಡಿದ್ದಾರೆ ಎಂದು ಸಾಕಷ್ಟು ವರದಿಗಳು ಪ್ರಸಾರವಾದವು. ಆದರೆ, ತಾವು ಸಮಂತಾ ಬಗ್ಗೆ ಆಗಲೀ, ನಾಗ ಚೈತನ್ಯ ಬಗ್ಗೆ ಆಗಲೀ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅಕ್ಕಿನೇನಿ ನಾಗಾರ್ಜುನ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಇಂಗ್ಲಿಷ್​ ಹಾಗೂ ಹಿಂದಿ ವೆಬ್​ಸೈಟ್​ಗಳು ಪ್ರಕಟಿಸಿದ ಸುದ್ದಿ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಫಸ್ಟ್​ಪೋಸ್ಟ್​ ಒಂದು ವರದಿ ಬಿತ್ತರ ಮಾಡಿತ್ತು. ‘ಈ ಎಲ್ಲ ಸಂದರ್ಭಗಳಲ್ಲಿ ಅವನು ಅಷ್ಟೊಂದು ಶಾಂತನಾಗಿ ಇದ್ದಿದ್ದಕ್ಕೆ ಅವನ ಬಗ್ಗೆ ನನಗೆ ಹೆಮ್ಮೆ ಇದೆ. ಒಂದು ಮಾತು ಹೇಳುವಷ್ಟು ಕೂಡ ಆತ ಪ್ರಚೋದನೆಗೆ ಒಳಗಾಗಲಿಲ್ಲ. ಎಲ್ಲ ತಂದೆಯರ ರೀತಿ ನಾನು ಕೂಡ ಮಗನ ಬಗ್ಗೆ ಚಿಂತೆಗೆ ಒಳಗಾಗಿದ್ದೆ. ಆದರೆ ಅವನಿಗೆ ನನ್ನ ಬಗ್ಗೆಯೇ ಚಿಂತೆ ಜಾಸ್ತಿ ಆಗಿತ್ತು’ ಎಂದು ನಾಗಾರ್ಜುನ ಹೇಳಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇದೇ ರೀತಿಯ ಅನೇಕ ವರದಿಗಳು ಬಿತ್ತರಗೊಂಡಿದ್ದವು.

ಈ ಬಗ್ಗೆ ಅಕ್ಕಿನೇನಿ ನಾಗಾರ್ಜುನ ಟ್ವೀಟ್​ ಮಾಡಿದ್ದಾರೆ. ‘ಸಾಮಾಜಿಕ ಜಾಲತಾಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಮಂತಾ ಮತ್ತು ನಾಗ ಚೈತನ್ಯ ಅವರ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ಹೇಳಿಕೆಗಳನ್ನು ಬಿತ್ತರ ಮಾಡುತ್ತಿವೆ. ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಅಸಂಬದ್ಧ. ಮಾಧ್ಯಮ ಮಿತ್ರರು ದಯವಿಟ್ಟು ವದಂತಿಗಳನ್ನು ಸುದ್ದಿಯಾಗಿ ಪೋಸ್ಟ್ ಮಾಡಬಾರದು ಎಂದು ನಾನು ವಿನಂತಿಸುತ್ತೇನೆ’ ಎಂದಿದ್ದಾರೆ ಅಕ್ಕಿನೇನಿ ನಾಗಾರ್ಜುನ.\

ಕೊವಿಡ್​ ಹಾವಳಿಯ ಕಾರಣದಿಂದ ಅನೇಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಲಾಗಿದೆ. ನೈಟ್​ ಕರ್ಫ್ಯೂ ಹಾಗೂ ವೀಕೆಂಡ್​ ಕರ್ಫ್ಯೂ ಸಹ ಜಾರಿಯಲ್ಲಿದೆ. ಹಾಗಿದ್ದರೂ ಕೂಡ ‘ಬಂಗಾರ‍್ರಾಜು’ ಚಿತ್ರವನ್ನು ಬಿಡುಗಡೆ ಮಾಡಿರುವುದು ಅಚ್ಚರಿಗೆ ಕಾರಣ ಆಗಿತ್ತು. ಆದರೆ, ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡಿತ್ತು.

ಇದನ್ನೂ ಓದಿ: ‘ಹು ಅಂತೀಯಾ ಮಾವ’ ರೀತಿ ಇನ್ನೊಂದು ಹಾಡಿನಲ್ಲಿ ಸಮಂತಾ ಡ್ಯಾನ್ಸ್​? ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ 

Raayan Raj Sarja: ಸಮಂತಾ ಸ್ಟೆಪ್​ ಹಾಕೋದನ್ನು ನೋಡಿ ಖುಷಿಪಟ್ಟ ರಾಯನ್​ ರಾಜ್​ ಸರ್ಜಾ