‘ಹು ಅಂತೀಯಾ ಮಾವ’ ರೀತಿ ಇನ್ನೊಂದು ಹಾಡಿನಲ್ಲಿ ಸಮಂತಾ ಡ್ಯಾನ್ಸ್​? ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ

‘ಹು ಅಂತೀಯಾ ಮಾವ’ ರೀತಿ ಇನ್ನೊಂದು ಹಾಡಿನಲ್ಲಿ ಸಮಂತಾ ಡ್ಯಾನ್ಸ್​? ಹೆಚ್ಚಿತು ಫ್ಯಾನ್ಸ್​ ನಿರೀಕ್ಷೆ
ಸಮಂತಾ

‘ಲೈಗರ್​’ ಸಿನಿಮಾದಲ್ಲಿ ಸಮಂತಾ ಅವರಿಂದ ಒಂದು ಐಟಂ ಡ್ಯಾನ್ಸ್​ ಮಾಡಿಸಬೇಕು ಎಂದು ಚಿತ್ರತಂಡ ತೀರ್ಮಾನಿಸಿದೆ. ಆ ಸಲುವಾಗಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.

TV9kannada Web Team

| Edited By: Madan Kumar

Jan 26, 2022 | 8:53 AM

ಆಡುವ ಮಕ್ಕಳೆಲ್ಲ ‘ಹು ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಅಂತ ಗುನುಗುತ್ತಿದ್ದಾರೆ. ಅಷ್ಟರಮಟ್ಟಿಗೆ ಆ ಹಾಡು ಜನಪ್ರಿಯ ಆಗಿದೆ. ಈ ಗೀತೆಯಲ್ಲಿ ಡ್ಯಾನ್ಸ್​ ಮಾಡಿರುವ ಸಮಂತಾ (Samantha) ಅವರ ಖ್ಯಾತಿ ಕೂಡ ಹೆಚ್ಚಿದೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾಗೆ ಸಿಕ್ಕ ಅತಿ ದೊಡ್ಡ ಗೆಲುವು ಇದು. ಡಿವೋರ್ಸ್​ ಪಡೆದ ನಂತರ ಅವರ ಆಯ್ಕೆಗಳು ಬದಲಾಗಿವೆ. ಬೋಲ್ಡ್​ ಪಾತ್ರಗಳನ್ನು ಅವರು ಮುಲಾಜಿಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ‘ಪುಷ್ಪ’ (Pushpa Movie) ಸಿನಿಮಾದಲ್ಲಿ ಅವರು ‘ಊ ಅಂಟಾವಾ ಮಾವ. ಊಊ ಅಂಟಾವಾ ಮಾವ..’ ಅಂತ ಮೈ ಚಳಿ ಬಿಟ್ಟು ಕುಣಿದಿದ್ದರಿಂದ ಆ ಸಾಂಗ್​ ಸೂಪರ್​ ಹಿಟ್​ ಆಯಿತು. ಚಿತ್ರದ ಭಾರಿ ಯಶಸ್ಸಿನ ಹಿಂದೆ ಆ ಹಾಡಿನ ಕೊಡುಗೆ ದೊಡ್ಡದಿದೆ. ಇದೇ ಸೂತ್ರವನ್ನು ಬಳಸಿಕೊಳ್ಳಲು ಇನ್ನೂ ಕೆಲವು ಸಿನಿಮಾ ತಂಡಗಳು ಪ್ಲ್ಯಾನ್​ ಮಾಡಿವೆ. ವಿಜಯ್​ ದೇವರಕೊಂಡ (Vijay Devarakonda) ಮತ್ತು ಅನನ್ಯಾ ಪಾಂಡೆ ಜೋಡಿಯ ‘ಲೈಗರ್​’ ಸಿನಿಮಾದಲ್ಲೂ ಸಮಂತಾ ಇಂಥದ್ದೊಂದು ಐಟಂ ಸಾಂಗ್​ ಮಾಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಆ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ದಕ್ಷಿಣ ಭಾರತದಲ್ಲಿ ‘ಅರ್ಜುನ್​ ರೆಡ್ಡಿ’ ಸಿನಿಮಾ ಮೂಲಕ ಭಾರಿ ಯಶಸ್ಸು ಪಡೆದುಕೊಂಡ ವಿಜಯ್​ ದೇವರಕೊಂಡ ಅವರು ‘ಲೈಗರ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಆ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಪುರಿ ಜಗನ್ನಾಥ್​. ಹಲವು ಕಾರಣಗಳಿಂದಾಗಿ ‘ಲೈಗರ್​’ ಚಿತ್ರ ಹೈಪ್​ ಪಡೆದುಕೊಂಡಿದೆ. ಜಗತ್ತಿನ ಖ್ಯಾತ ಬಾಕ್ಸಿಂಗ್​ ಪಟು ಮೈಕ್​ ಟೈಸನ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಫಸ್ಟ್​ ಗ್ಲಿಂಪ್ಸ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದರ ಬೆನ್ನಲ್ಲೇ ಐಟಂ ಸಾಂಗ್​ ಕುರಿತು ಗಾಸಿಪ್​ ಕೇಳಿಬಂದಿದೆ.

‘ಲೈಗರ್​’ ಸಿನಿಮಾದಲ್ಲಿ ಸಮಂತಾ ಅವರಿಂದ ಒಂದು ಐಟಂ ಡ್ಯಾನ್ಸ್​ ಮಾಡಿಸಬೇಕು ಎಂದು ಚಿತ್ರತಂಡ ತೀರ್ಮಾನಿಸಿದೆ. ಆ ಸಲುವಾಗಿ ಈಗಾಗಲೇ ಸಮಂತಾ ಜೊತೆ ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸಮಂತಾ ಒಪ್ಪಿಕೊಂಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ಸಿಗಬೇಕಿದೆ.

‘ಪುಷ್ಪ’ ಸಿನಿಮಾ ರಿಲೀಸ್​ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು. ಹೀಗಾಗಿ, ಪ್ರ್ಯಾಕ್ಟೀಸ್​ ಮಾಡೋಕೂ ಹೆಚ್ಚು ಅವಕಾಶ ಇರಲಿಲ್ಲ. ಆದಾಗ್ಯೂ ಸಮಂತಾ ಹೆಚ್ಚು ಸಮಯ ವ್ಯಯಿಸಿ ಈ ಹಾಡಿನ ಹೆಜ್ಜೆ ಕಲಿತಿದರು. ಪ್ರ್ಯಾಕ್ಟೀಸ್​ ಹೇಗಿತ್ತು ಮತ್ತು ಸ್ಟೆಪ್​ ಹೇಳಿಕೊಟ್ಟವರು ಯಾರು ಎಂಬುದನ್ನು ಸಮಂತಾ ಇತ್ತೀಚೆಗೆ ವಿವರಿಸಿದ್ದರು.

ಇದನ್ನೂ ಓದಿ:

ವಿಚ್ಛೇದನದ ನಂತರವೂ ಸಮಂತಾ ಮೇಲೆ ಕಡಿಮೆಯಾಗಿಲ್ಲ ಗೌರವ; ಸ್ಯಾಮ್ ಬಗ್ಗೆ ನಾಗ ಚೈತನ್ಯ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

ಮತ್ತೆ ನಾಗ ಚೈತನ್ಯ ಜೊತೆ ಸಂಸಾರ ಮಾಡ್ತಾರಾ ಸಮಂತಾ? ವಿಚ್ಛೇದನದ ಪೋಸ್ಟ್​ ಏಕಾಏಕಿ ಡಿಲೀಟ್​

Follow us on

Related Stories

Most Read Stories

Click on your DTH Provider to Add TV9 Kannada