Samantha: ಸಮಂತಾ ಸ್ಕೀಯಿಂಗ್ ಪಯಣ ಎಷ್ಟು ಕಷ್ಟವಿತ್ತು? ವಿಡಿಯೋ ಸಮೇತ ವಿವರಿಸಿದ ನಟಿ

Skiing: ಬಹುಭಾಷಾ ನಟಿ ಸಮಂತಾ ಪ್ರಸ್ತುತ ಸ್ವಿಟ್ಜರ್​ಲ್ಯಾಂಡ್​ನಲ್ಲಿದ್ದಾರೆ. ಸ್ಕೀಯಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ನಟಿ, ಈ ಕಲಿಕೆಗೆ ನೆರವಾದವರನ್ನು ಪರಿಚಯಿಸಿದ್ದಾರೆ.

Samantha: ಸಮಂತಾ ಸ್ಕೀಯಿಂಗ್ ಪಯಣ ಎಷ್ಟು ಕಷ್ಟವಿತ್ತು? ವಿಡಿಯೋ ಸಮೇತ ವಿವರಿಸಿದ ನಟಿ
ಸ್ಕೀಯಿಂಗ್ ಮಾಡುತ್ತಿರುವ ಸಮಂತಾ (ಎಡ ಚಿತ್ರ), ಟ್ರೇನರ್ ಜತೆ ನಟಿ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on: Jan 28, 2022 | 3:19 PM

ಬಹುಭಾಷಾ ನಟಿ ಸಮಂತಾ (Samantha) ಸದ್ಯ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ. ಸ್ವಿಟ್ಜರ್ಲ್ಯಾಂಡ್​ನಲ್ಲಿರುವ (Switzerland) ಅವರು, ಹೊಸ ಹೊಸ ಚಟುವಟಿಕೆಗಳನ್ನು ಕಲಿಯುತ್ತಿದ್ದಾರೆ. ಪ್ರಸ್ತುತ ಸ್ಕೀಯಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ಸಮಂತಾ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಸ್ಕೀಯಿಂಗ್ (Skiing) ಮಾಡುವುದು ಸುಲಭವಲ್ಲ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಇದರ ಅನುಭವ ಬಹಳ ಕಡಿಮೆಯೆಂದೇ ಹೇಳಬೇಕು. ಆದ್ದರಿಂದ ಸ್ಕೀಯಿಂಗ್ ಮಾಡಲು ಪರಿಣಿತರಿಂದ ವಿಶೇಷ ತರಬೇತಿ ಪಡೆಯಬೇಕಾಗುತ್ತದೆ. ಹೀಗೆಯೇ ತರಬೇತಿ ಪಡೆದಿದ್ದ ಸಮಂತಾ, ಕೆಲ ದಿನಗಳ ಮೊದಲು ಯಶಸ್ವಿಯಾಗಿ ಸ್ಕೀಯಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ್ದರು. ಅದರಲ್ಲಿ ಅವರು ಇಂತಹ ಒಂದು ಪಯಣಕ್ಕಾಗಿ ನೂರಾರು ಬಾರಿ ಬಿದ್ದು ಏಳಬೇಕಾಗುತ್ತದೆ ಎಂಬರ್ಥದಲ್ಲಿ ಬರೆದುಕೊಂಡಿದ್ದರು.

ಇದೀಗ ಸಮಂತಾ ತಮ್ಮ ಅಭ್ಯಾಸ ಸಂದರ್ಭದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಇಂತಹ ಸವಾಲಿನ ಆಟಕ್ಕೆ ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸಿದ ತಮ್ಮ ಗುರುವನ್ನೂ ಪರಿಚಯಿಸಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಕೀಯಿಂಗ್ ಕಲಿಸಿರುವ ಟ್ರೇನರ್ ಕೇಟ್ ಮೆಕ್​ಬ್ರೈಡ್ ಅವರೊಂದಿಗಿನ ಚಿತ್ರ ಹಂಚಿಕೊಂಡಿರುವ ಸಮಂತಾ, ಸ್ಕೀಯಿಂಗ್ ಪಯಣದ ಕುರಿತು ಬರೆದುಕೊಂಡಿದ್ದಾರೆ.

ಅಂಬೆಗಾಲಿಡುತ್ತಾ ಸ್ಕೀಯಿಂಗ್ ಆರಂಭಿಸಿದೆ. ನೂರಾರು ಬಿದ್ದೆ. ಪ್ರತೀ ಬಾರಿಯೂ ಸಾವರಿಸಿಕೊಂಡು ಎದ್ದಿದ್ದೇನೆ. ಹಲವು ಬಾರಿ ಸಾಕು, ಬಿಟ್ಟುಬಿಡೋಣ ಎನ್ನಿಸಿತ್ತು. ಆದರೆ ಎಲ್ಲವನ್ನೂ ಎದುರಿಸುವುದನ್ನು ಹೇಳಿಕೊಟ್ಟ ಟ್ರೇನರ್​ಗೆ ಆಭಾರಿ. ಎಲ್ಲಾ ಬದಲಾವಣೆಗೆ ಕಾರಣ ನೀವು ಎಂದು ಸಮಂತಾ ಬರೆದುಕೊಂಡಿದ್ದಾರೆ.

ಸಮಂತಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಸ್ಕೀಯಿಂಗ್ ಕಲಿಯುವ ಯತ್ನದಲ್ಲಿ ನೂರಾರು ಬಾರಿ ವಿಫಲವಾಗಿದ್ದಿದೆ. ಬಿದ್ದಿದ್ದೇನೆ, ಎದ್ದಿದ್ದೇನೆ ಎಂದು ಸಮಂತಾ ಬರೆದುಕೊಂಡಿದ್ದಕ್ಕೆ ಸಾಕ್ಷಿಯಾಗಿ ನಟಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಕೀಯಿಂಗ್ ಮಾಡುತ್ತಾ ಮಾಡುತ್ತಾ ಸಮತೋಲನ ತಪ್ಪಿ ಅವರು ಮುಗ್ಗರಿಸಿದ್ದಾರೆ. ಆ ವಿಡಿಯೋ ಇಲ್ಲಿದೆ.

ಸಮಂತಾ ಸ್ಕೀಯಿಂಗ್​ ಯತ್ನ ವಿಫಲವಾಗಿದ್ದು ಹೀಗೆ:

ಚಿತ್ರಗಳ ವಿಷಯಕ್ಕೆ ಬಂದರೆ ಸಮಂತಾ ದೇವ್ ಮೋಹನ್ ಅವರೊಂದಿಗೆ ‘ಶಾಕುಂತಲಂ’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಗುಣಶೇಖರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ವಿಶೇಷವೆಂದರೆ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೀಲಿಮಾ ಗುಣ ನಿರ್ಮಾಣ ಮಾಡುತ್ತಿರುವ ಚಿತ್ರ ಅತ್ಯಾಧುನಿಕ ತಂತ್ರಜ್ಞಾನದ ವಿಎಫ್​ಎಕ್ಸ್ ಅನ್ನು ಚಿತ್ರದಲ್ಲಿ ಬಳಸಲಿದೆ ಎಂದು ವರದಿಯಾಗಿದೆ. ಸಮಂತಾ ಕಡೆಯದಾಗಿ ‘ಪುಷ್ಪ: ದಿ ರೈಸ್’ ಚಿತ್ರ ಐಟಂ ಸಾಂಗ್​ನಲ್ಲಿ ಕುಣಿದು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.

ಇದನ್ನೂ ಓದಿ:

Raayan Raj Sarja: ಸಮಂತಾ ಸ್ಟೆಪ್​ ಹಾಕೋದನ್ನು ನೋಡಿ ಖುಷಿಪಟ್ಟ ರಾಯನ್​ ರಾಜ್​ ಸರ್ಜಾ

ಬ್ರಾ ಸೈಜ್​ ವಿಚಾರದಲ್ಲಿ ದೇವರನ್ನು ಎಳೆದು ತಂದ ಕಿರುತೆರೆ ನಟಿ ವಿರುದ್ಧ ಎಫ್​ಐಆರ್​ ದಾಖಲು

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?