‘ನಾನು ಹಣಕ್ಕಾಗಿಯೇ ಎಂದೂ ಸಿನಿಮಾ ಮಾಡಿಲ್ಲ’: ನಟಿ ಪ್ರೇಮಾ
ಇತ್ತೀಚಿನ ವರ್ಷಗಳಲ್ಲಿ ಪ್ರೇಮಾ ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಪ್ರೇಮಾ ಒಪ್ಪಿಕೊಂಡಿರುವ ಕೆಲವೇ ಸಿನಿಮಾಗಳ ಪೈಕಿ ‘ವೆಡ್ಡಿಂಗ್ ಗಿಫ್ಟ್’ (Wedding Gift Movie) ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಕನ್ನಡ ಚಿತ್ರರಂಗದಲ್ಲಿ ನಟಿ ಪ್ರೇಮಾ (Prema) ಅವರು ಮಾಡಿದ ಮೋಡಿ ಅಂತಿಂಥದ್ದಲ್ಲ. ಒಂದು ಕಾಲದಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಪ್ರೇಮಾ ಒಪ್ಪಿಕೊಂಡಿರುವ ಕೆಲವೇ ಸಿನಿಮಾಗಳ ಪೈಕಿ ‘ವೆಡ್ಡಿಂಗ್ ಗಿಫ್ಟ್’ (Wedding Gift Movie) ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರಕ್ಕೆ ವಿಕ್ರಮ್ ಪ್ರಭು ನಿರ್ದೇಶನ ಮಾಡಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಸೋನು ಗೌಡ (Sonu Gowda), ನಿಶಾನ್ ನಾಣಯ್ಯ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಮಾಡಿದ್ದಾರೆ. ಬಾಲಚಂದ್ರ ಪ್ರಭು ಸಂಗೀತ ನೀಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರೇಮಾ ಮಾತನಾಡಿದ್ದಾರೆ. ಅಲ್ಲದೆ, ‘ನಾನು ಹಣಕ್ಕಾಗಿಯೇ ಎಂದೂ ಸಿನಿಮಾ ಮಾಡಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: Raayan Raj Sarja: ಸಮಂತಾ ಸ್ಟೆಪ್ ಹಾಕೋದನ್ನು ನೋಡಿ ಖುಷಿಪಟ್ಟ ರಾಯನ್ ರಾಜ್ ಸರ್ಜಾ
‘ಸಮಂತಾ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ’; ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ