ಬಿಗ್ ಬಾಸ್ ವಿನ್ನರ್ಗೆ ಕಂಕಣ ಭಾಗ್ಯ?; ದೊಡ್ಮನೆಯಿಂದ ಹೊರಬಂದ ಎರಡೇ ದಿನದಲ್ಲಿ ಸಿಹಿಸುದ್ದಿ
40 ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತೇಜಸ್ವಿ ಪ್ರಕಾಶ್ ಪಡೆದಿದ್ದಾರೆ. ಈಗ ದೊಡ್ಮನೆಯಿಂದ ಹೊರ ಬಂದ ಅವರು ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವ್ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವು ಅಲ್ಲಿಯೇ ಕೊನೆಯಾದರೆ, ಇನ್ನೂ ಕೆಲವು ಜೋಡಿಗಳು ಮನೆಯಿಂದ ಹೊರ ಬಂದು ಮದುವೆ ಆಗಿದ್ದಾರೆ. ಇತ್ತೀಚೆಗೆ ಪೂರ್ಣಗೊಂಡಿದ್ದ ಹಿಂದಿ ಬಿಗ್ ಬಾಸ್ ಸೀಸನ್ 15ರ (Hindi Bigg Boss 15 Winner ) ವಿನ್ನರ್ ತೇಜಸ್ವಿ ಪ್ರಕಾಶ್ (Tejasswi Prakash) ಕೂಡ ಇದೇ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ಸಹ ಸ್ಪರ್ಧಿ ಕರಣ್ ಕುಂದ್ರಾ (Karan Kundra) ಅವರನ್ನು ಮದುವೆ ಆಗೋಕೆ ರೆಡಿ ಆಗಿದ್ದಾರೆ. ಮನೆಯಿಂದ ಹೊರ ಬಂದ ಎರಡೇ ದಿನಕ್ಕೆ ಮದುವೆ ಪ್ಲ್ಯಾನ್ ನಡೆದಿದೆ ಎನ್ನುವ ಸುದ್ದಿ ಜೋರಾಗಿದೆ. ಹಾಗಾದರೆ, ಈ ಜೋಡಿ ಶೀಘ್ರವೇ ಮದುವೆ ಆಗುತ್ತಾರಾ? ಇಲ್ಲ. ಎರಡೂ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿದ್ದು, ಕಂಕಣ ಕೂಡಿ ಬಂದಾಗ ಮದುವೆ ಆಗಲಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹಲವು ರೀತಿಯಲ್ಲಿ ಗಮನ ಸೆಳೆದ ನಟಿ ತೇಜಸ್ವಿ ಪ್ರಕಾಶ್ ಅವರು ‘ಬಿಗ್ ಬಾಸ್ 15’ರ ವಿನ್ನರ್ ಆಗಿ ಹೊರಹೊಮ್ಮಿದರು. ಅವರು ವಿನ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯಬಹುದು ಎಂದು ಅನೇಕರು ಅಂದಾಜಿಸಿದ್ದರು. ಆದರೆ ಆ ಲೆಕ್ಕಾಚಾರ ಉಲ್ಟಾ ಆಗಿತ್ತು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಳು. 40 ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತೇಜಸ್ವಿ ಪ್ರಕಾಶ್ ಪಡೆದಿದ್ದಾರೆ. ಈಗ ದೊಡ್ಮನೆಯಿಂದ ಹೊರ ಬಂದ ಅವರು ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.
ಕರಣ್ ಕುಂದ್ರಾ ಹಾಗೂ ತೇಜಸ್ವಿ ಪ್ರಕಾಶ್ ಜೋಡಿ ಸಾಕಷ್ಟು ಗಮನ ಸೆಳೆದಿತ್ತು. ಇದೊಂದು ಪಬ್ಲಿಸಿಟಿ ಗಿಮಿಕ್ ಎಂದು ಅನೇಕರು ಆಡಿಕೊಂಡಿದ್ದರು. ಆದರೆ, ಈ ಜೋಡಿ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಈ ಜೋಡಿ ಮದುವೆ ಆಗೋ ಆಲೋಚನೆಯಲ್ಲಿದೆ ಅನ್ನೋದು ವಿಶೇಷ.
View this post on Instagram
ಬಿಗ್ ಬಾಸ್ ಫಿನಾಲೆಯಲ್ಲಿ ಕರಣ್ ತಂದೆ ಕೂಡ ಆಗಮಿಸಿದ್ದರು. ಅವರಿಗೆ ಈ ಜೋಡಿ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ್ದ ಕರಣ್ ತಂದೆ, ‘ಎಲ್ಲವೂ ಹೀಗೆ ನಡೆದರೆ, ಶೀಘ್ರವೇ ಮದುವೆ ಪ್ಲ್ಯಾನ್ ಮಾಡುತ್ತೇವೆ’ ಎಂದಿದ್ದರು. ಈ ವಿಡಿಯೋ ಅಭಿಮಾನಿ ವಲಯದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಕರಣ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ತೇಜಸ್ವಿ ಮನೆಗೆ ಭೇಟಿ ನೀಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಈ ಜೋಡಿಯನ್ನು ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕರಣ್ ಹಾಗೂ ತೇಜಸ್ವಿ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆಯರಾಗಿದ್ದರು. ದಿನ ಕಳೆದಂತೆ ಅವರು ಹತ್ತಿರವಾದರು. ನಂತರ ಅವರು ಪ್ರೀತಿಯಲ್ಲಿ ಬಿದ್ದರು. ಈ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss 15 Winner: ನಟಿ ತೇಜಸ್ವಿ ಪ್ರಕಾಶ್ಗೆ ‘ಬಿಗ್ ಬಾಸ್ 15’ ವಿನ್ನರ್ ಪಟ್ಟ; ಬಹುಮಾನದ ಮೊತ್ತ ಎಷ್ಟು?
‘ಬಿಗ್ ಬಾಸ್ 15’ ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್; ಇಲ್ಲಿವೆ ಖ್ಯಾತ ನಟಿಯ ಮನಮೋಹಕ ಫೋಟೋಗಳು
Published On - 7:23 pm, Tue, 1 February 22