AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದ ಕಿಡಿಗೇಡಿಗಳು; ಇಲ್ಲಿದೆ ಒರಿಜಿನಲ್​ ಫೋಟೋ

ತಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದವರಿಗೆ ಮಾಳವಿಕಾ ಮೋಹನನ್​ ಛೀಮಾರಿ ಹಾಕಿದ್ದಾರೆ. ದುರ್ಬಳಕೆ ಆಗಿರುವ ಒರಿಜಿನಲ್​ ಫೋಟೋವನ್ನು ಅವರು ತೋರಿಸಿದ್ದಾರೆ.

ನಟಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದ ಕಿಡಿಗೇಡಿಗಳು; ಇಲ್ಲಿದೆ ಒರಿಜಿನಲ್​ ಫೋಟೋ
ಮಾಳವಿಕಾ ಮೋಹನನ್
TV9 Web
| Edited By: |

Updated on: Feb 03, 2022 | 9:26 AM

Share

ಸೆಲೆಬ್ರಿಟಿ ಆಗಿರುವುದು ಅಷ್ಟು ಸುಲಭವಲ್ಲ. ಸಾರ್ವಜನಿಕ ವಲಯದಲ್ಲಿ ಇರುವವರೆಗೆ ಅನೇಕ ತಾಪತ್ರಯಗಳು ಎದುರಾಗುತ್ತವೆ. ಅದರಲ್ಲೂ ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಸೆಲೆಬ್ರಿಟಿಗಳ ಫೋಟೋ​ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಿದೆ. ಈಗಾಗಲೇ ಅನೇಕ ನಟಿಯರು ಈ ರೀತಿಯ ಸೈಬರ್​ ಕ್ರೈಂ (Cyber Crime) ಬಗ್ಗೆ ದೂರು ನೀಡಿದ್ದಿದೆ. ಈಗ ಜನಪ್ರಿಯ ನಟಿ ಮಾಳವಿಕಾ ಮೋಹನನ್​ (Malavika Mohanan) ಅವರು ಗರಂ ಆಗಿದ್ದಾರೆ. ಅವರ ಫೋಟೋವನ್ನು ಯಾರೋ ಕೆಟ್ಟದಾಗಿ ಎಡಿಟ್​ ಮಾಡಿದ್ದಾರೆ. ಈ ನಟಿಯ ಒಂದು ಚಂದದ ಫೋಟೋವನ್ನು ಇಟ್ಟುಕೊಂಡು, ಅದನ್ನು ಅಶ್ಲೀಲವಾಗಿ ಎಡಿಟ್​ ಮಾಡಲಾಗಿದೆ. ಅಲ್ಲದೇ, ಆ ಅಶ್ಲೀಲ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಅದನ್ನು ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಮಾಳವಿಕಾ ಮೋಹನನ್​ ಅವರ ಅಭಿಮಾನಿಗಳು ಕೂಡ ಒಂದು ಕ್ಷಣ ಶಾಕ್​ ಆದರು. ಪರಿಶೀಲಿಸಿ ನೋಡಿದಾಗ ಮಾಳವಿಕಾ ಮೋಹನನ್​ ಅವರ ಫೋಟೋ ಈ ರೀತಿ ದುರ್ಬಳಕೆ ಆಗಿದೆ ಎಂಬುದು ತಿಳಿಯಿತು. ತಕ್ಷಣಕ್ಕೆ ಈ ಎಡಿಟೆಡ್​ ಫೇಕ್​ ಫೋಟೋ (Fake Photo) ನೋಡಿದ ಕೆಲವು ಮಾಧ್ಯಮಗಳು ಕೂಡ ಯಾಮಾರಿವೆ. ಅಶ್ಲೀಲ ಫೋಟೋವನ್ನು ನಿಜವೆಂದು ತಿಳಿದು ಆ ಕುರಿತು ಸುದ್ದಿ ಪ್ರಕಟಿಸಿವೆ. ಅದರ ವಿರುದ್ಧ ಮಾಳವಿಕಾ ಮೋಹನನ್​ ಗುಡುಗಿದ್ದಾರೆ.

ದಕ್ಷಿಣ ಭಾರತದಲ್ಲಿ ಮಾಳವಿಕಾ ಮೋಹನನ್​ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ‘ಮಾಸ್ಟರ್​’ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅವರ ಖ್ಯಾತಿ ಹೆಚ್ಚಿತು. 2016ರಲ್ಲಿ ತೆರೆಕಂಡ ಕನ್ನಡದ ‘ನಾನು ಮತ್ತು ವರಲಕ್ಷ್ಮೀ’ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ವಿಶ್ವವಿಖ್ಯಾತ ನಿರ್ದೇಶಕ ಮಜಿದ್​ ಮಜಿದಿ ನಿರ್ದೇಶನ ಮಾಡಿದ್ದ ‘ಬಿಯಾಂಡ್​ ದಿ ಕ್ಲೌಡ್ಸ್​’ ಸೀರಿಸ್​ನಲ್ಲಿ ಅವರು ಅಭಿನಯಿಸುವ ಅವಕಾಶ ಪಡೆದಿದ್ದರು. ಇಷ್ಟೆಲ್ಲ ಜನಪ್ರಿಯತೆ ಇರುವ ನಟಿಗೆ ಈಗ ಎಡಿಟೆಡ್​ ಫೋಟೋದಿಂದ ಕಿರಿಕಿರಿ ಆಗಿದೆ.

ತಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್​ ಮಾಡಿದವರಿಗೆ ಮಾಳವಿಕಾ ಮೋಹನನ್​ ಛೀಮಾರಿ ಹಾಕಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಒರಿಜಿನಲ್​ ಫೋಟೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಅವರು ತಮ್ಮ ಮಾತನ್ನು ಸಾಬೀತುಪಡಿಸಿದ್ದಾರೆ. ‘ಕೆಲವೇ ತಿಂಗಳ ಹಿಂದೆ ತೆಗೆದ ಫೋಟೋ ಇದು. ಇದನ್ನು ಬಳಸಿಕೊಂಡು ಯಾರೋ ಅಶ್ಲೀಲವಾಗಿ ಎಡಿಟ್​ ಮಾಡಿದ್ದಾರೆ. ಕೆಲವು ಮಾಧ್ಯಮಗಳೂ ಸೇರಿದಂತೆ ಅನೇಕರು ಅಶ್ಲೀಲ ಫೋಟೋವನ್ನು ವೈರಲ್​ ಮಾಡುತ್ತಿದ್ದಾರೆ. ಅದು ಸರಿಯಲ್ಲ. ನಿಮಗೆ ಫೇಕ್​ ಫೋಟೋ ಕಾಣಿಸಿದರೆ ಅದನ್ನು ರಿಪೋರ್ಟ್​ ಮಾಡಿ’ ಎಂದು ಮಾಳವಿಕಾ ಮೋಹನನ್​ ಬರೆದುಕೊಂಡಿದ್ದಾರೆ.

ಈ ರೀತಿ ಫೇಕ್​ ಫೋಟೋದ ಹಾವಳಿಗೆ ಬೇಸರ ಮಾಡಿಕೊಂಡಿರುವುದು ಮಾಳವಿಕಾ ಮೋಹನನ್​ ಮಾತ್ರವಲ್ಲ. ಈ ಹಿಂದೆ ನಟಿಯರಾದ ಶ್ರುತಿ ಹಾಸನ್​, ಪಾಯಲ್​ ರಜಪೂತ್​ ಮುಂತಾದವರಿಗೂ ಕೂಡ ಇದೇ ರೀತಿ ಕಿರಿಕಿರಿ ಆಗಿತ್ತು.

ಇದನ್ನೂ ಓದಿ:

‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್​ ಕುಂದ್ರಾ

ನಟಿಯರ ಫೋಟೋ ನೋಡಿ ಯಾಮಾರಬೇಡಿ; ಇಲ್ಲಿದೆ ‘ವರದನಾಯಕ’ ಹೀರೋಯಿನ್​ ಅಸಲಿ ಕಥೆ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು