Srinagar Kitty: ‘ಗೌಳಿ’ ಚಿತ್ರದ ಕುರಿತು ಕುತೂಹಲಕರ ಮಾಹಿತಿ ಹಂಚಿಕೊಂಡ ನಿರ್ದೇಶಕ ಸೂರ
Gowli | Soora: ‘ಗೌಳಿ’ ಚಿತ್ರದ ಹೊಸ ಟೀಸರ್ ಇದೀಗ ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರದ ಕುರಿತು ನಿರ್ದೇಶಕ ಸೂರ ಮಾಹಿತಿ ಹಂಚಿಕೊಂಡಿದ್ದಾರೆ.
ಶ್ರೀನಗರ ಕಿಟ್ಟಿ ‘ಗೌಳಿ’ ಮೂಲಕ ಸ್ಯಾಂಡಲ್ವುಡ್ಗೆ ಭರ್ಜರಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಬುಧವಾರ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿದ್ದು, ಎಲ್ಲರ ಗಮನಸೆಳೆಯುತ್ತಿದೆ. ‘ಗೌಳಿ’ ಚಿತ್ರದ ಶೀರ್ಷಿಕೆಯೇ ಕುತೂಹಲ ಮೂಡಿಸಿತ್ತು. ಅದೊಂದು ಜನಾಂಗ ಎಂಬುದು ಹಲವರಿಗೆ ತಿಳಿದಿದ್ದರೂ ಚಿತ್ರಕ್ಕೂ ಅದಕ್ಕೂ ಸಂಬಂಧವೇನು ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು. ಇದಕ್ಕೆ ಟೀಸರ್ನಲ್ಲಿ ಸೂಕ್ಷ್ಮವಾಗಿ ಉತ್ತರ ಸಿಕ್ಕಿದೆ. ಜತೆಗೆ ನಿರ್ದೇಶಕ ಸೂರ ಈ ಕುರಿತು ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಫೋಟೋಗ್ರಾಫರ್ ಆಗಿದ್ದ ಸೂರ ನಿರ್ದೇಶಕರಾಗಿ ‘ಗೌಳಿ’ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕುರಿತು ಕುತೂಹಲಕರ ಮಾಹಿತಿ ಹಂಚಿಕೊಂಡ ಅವರು, ‘ಗೌಳಿ’ ಜನಾಂಗ ಮಹಾರಾಷ್ಟ್ರದಿಂದ ವಲಸೆ ಬಂದವರು. ಸಿದ್ದಿ ಜನಾಂಗದಂತೆಯೇ ಶಿರಸಿ, ಯಲ್ಲಾಪುರ ಈ ಭಾಗದಲ್ಲಿ ಗೌಳಿ ಜನರೂ ಇದ್ದಾರೆ. ಚಿತ್ರವನ್ನು ನೈಜ ಘಟನೆಗಳನ್ನು ಆಧರಿಸಿ ತಯಾರಿಸಲಾಗಿದೆ. ಆದರೆ ಆ ಘಟನೆಗಳು ನಡೆದಿರುವುದು ಬೇರೆಡೆ. ಈ ಚಿತ್ರದಲ್ಲಿ ಗೌಳಿ ಜನಾಂಗದ ಹಿನ್ನೆಲೆಯಲ್ಲಿ ಆ ಘಟನೆಗಳನ್ನು ಕಟ್ಟಿಕೊಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
Gowli Teaser: ‘ಗೌಳಿ’ ಮೂಲಕ ಶ್ರೀನಗರ ಕಿಟ್ಟಿ ಭರ್ಜರಿ ಕಮ್ಬ್ಯಾಕ್; ಫ್ಯಾನ್ಸ್ ಮನಗೆಲ್ಲುತ್ತಿರುವ ಟೀಸರ್ ಇಲ್ಲಿದೆ
ಇನ್ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿ, ಡಿಲೀಟ್ ಮಾಡಿದ ಕಂಗನಾ; ಅದರಲ್ಲಿತ್ತು ಹೊಸ ಸಮಾಚಾರ!