AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಕುಮಾರ್-ಅನಂದ್ ಸಿಂಗ್ ಭೇಟಿ ಖಾಸಗಿಯಾಗಿದ್ದು ಅದರ ಬಗ್ಗೆ ಚರ್ಚೆಯ ಅಗತ್ಯವಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

ಶಿವಕುಮಾರ್-ಅನಂದ್ ಸಿಂಗ್ ಭೇಟಿ ಖಾಸಗಿಯಾಗಿದ್ದು ಅದರ ಬಗ್ಗೆ ಚರ್ಚೆಯ ಅಗತ್ಯವಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 02, 2022 | 9:42 PM

Share

ಸಿಂಗ್ ಮತ್ತು ಶಿವಕುಮಾರ್ ಅವರ ಭೇಟಿ ಖಾಸಗಿಯಾದದ್ದು ಅದರ ಬಗ್ಗೆ ಚರ್ಚಿಸುವ ಅವಶ್ಯಕತೆಯಿಲ್ಲ ಎಂದು ಪೂಜಾರಿ ಹೇಳಿದರು. ಎದುರಾಳಿ ಪಕ್ಷದ ನಾಯಕರೊಂದಿಗೆ ಸ್ನೇಹವಿಟ್ಟುಕೊಳ್ಳುವುದು ತಪ್ಪೇನೂ ಅಲ್ಲ ಎಂದು ಅವರು ಹೇಳಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Pujari) ಅವರು ನಿಸ್ಸಂಶಯವಾಗಿ ಚತುರ ರಾಜಕಾರಣಿಗಳು. ಮಾಧ್ಯಮದವರು ಸಂದಿಗ್ಧ ಪ್ರಶ್ನೆಗಳನ್ನು ಕೇಳಿದರೂ ಅವರು ನಗುತ್ತಾ ಜಾಣ್ಮೆಯಿಂದ ಮತ್ತು ವಿವಾದಕ್ಕೀಡಾಗದ ರೀತಿಯಲ್ಲಿ ಉತ್ತರಿಸುತ್ತಾರೆ. ಬುಧವಾರದಂದು ಅವರು ರಾಮನಗರದಲ್ಲಿ (Ramanagara) ಮಾಧ್ಯಮದವರೊಂದಿಗೆ ಮಾತಾಡುವಾಗ ಈ ಅಂಶ ಮತ್ತೊಮ್ಮೆ ವೇದ್ಯವಾಯಿತು. ರಾಮನಗರ ಇತ್ತೀಚಿಗೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಪ್ರಾಯಶಃ ಕಾಂಗ್ರೆಸ್ ಪಕ್ಷ ಪಾದಯಾತ್ರೆಯ ಎರಡನೇ ಹಂತವನ್ನು ಅಲ್ಲಿಂದಲೇ ಶುರುಮಾಡಲಿರುವ ಕಾರಣಕ್ಕಿರಬಹುದು. ಬಿಡಿ ಆ ವಿಷಯ ಬೇರೆ. ನಿಮಗೆ ಗೊತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಬಸವರಾಜ ಬೊಮ್ಮಾಯಿ (Basavaraj Bommai) ಸಂಪುಟದಲ್ಲಿ ಸಚಿವರಾಗಿರುವ ಅನಂದ್ ಸಿಂಗ್ (Anand Singh) ನಡುವಿನ ಇತ್ತೀಚಿನ ಭೇಟಿ ರಾಜಕೀಯ ವಲಯಗಳಲ್ಲಿ ಭಾರಿ ಚರ್ಚೆ ಆಗುತ್ತಿದೆ. ಏತನ್ಮಧ್ಯೆ, ಸಿದ್ದರಾಮಯ್ಯ ಸಹ ಕೆಲ ಬಿಜೆಪಿ ಮತ್ತು ಜೆಡಿ (ಎಸ್) ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಅಂತ ಆಗಾಗ ಹೇಳುತ್ತಿದ್ದಾರೆ. ಅವರ ಮಾತಿನ ಮರ್ಮ ಜನರಿಗೆ ಅರ್ಥವಾಗುತ್ತಿಲ್ಲ ಆದರೆ ಗೊಂದಲವಂತೂ ಸೃಷ್ಟಿಸುತ್ತಿದೆ.

ಸಿಂಗ್ ಮತ್ತು ಡಿಕೆಶಿ ವಿಷಯವನ್ನೇ ಪೂಜಾರಿ ಅವರಿಗೆ ಪ್ರಧಾನವಾಗಿ ಕೇಳಲಾಯಿತು. ಅದಕ್ಕೆ ಅವರು ಒಬ್ಬ ಸಚಿವನಾಗಿ ತಮ್ಮ ಇತಿಮಿತಿಗಳನ್ನು ಹೇಳಿಕೊಂಡು ಪಕ್ಷದ ಸಂಘಟನಾತ್ಮಕ ವಿಷಯಗಳನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೋಡಿಕೊಳ್ಳುತ್ತಾರೆ ಮತ್ತು ಆಡಳಿತಾತ್ಮಕ ಸಂಗತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೋಡಿಕೊಳ್ಳುತ್ತಾರೆ. ಸರ್ಕಾರ ಮತ್ತು ಪಕ್ಷದ ಸಂಘಟನೆ ಚಟುವಟಿಕೆಗಳು ವ್ಯವಸ್ಥಿತವಾಗಿ ಸಾಗುತ್ತಿವೆ, ಯಾವ ಗೊಂದಲಗಳು ಇಲ್ಲ ಎಂದು ಹೇಳಿದರು.

ಸಿಂಗ್ ಮತ್ತು ಶಿವಕುಮಾರ್ ಅವರ ಭೇಟಿ ಖಾಸಗಿಯಾದದ್ದು ಅದರ ಬಗ್ಗೆ ಚರ್ಚಿಸುವ ಅವಶ್ಯಕತೆಯಿಲ್ಲ ಎಂದು ಪೂಜಾರಿ ಹೇಳಿದರು. ಎದುರಾಳಿ ಪಕ್ಷದ ನಾಯಕರೊಂದಿಗೆ ಸ್ನೇಹವಿಟ್ಟುಕೊಳ್ಳುವುದು ತಪ್ಪೇನೂ ಅಲ್ಲ ಎಂದು ಅವರು ಹೇಳಿದರು.

ಸರ್ಕಾರದ ಅವಧಿ ಮುಗಿಯುವವರೆಗೆ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಪೂಜಾರಿ ಅವರು, ಮಾಧ್ಯಮದವರು ಏನೆಲ್ಲಾ ಕತೆಗಳನ್ನು ಸೃಷ್ಟಿಸುತ್ತೀರಿ ಎಂದು ನಗಾಡಿದರು.

ಅವಧಿ ಮುಗಿಯುವವರೆಗೆ ಬೊಮ್ಮಾಯಿ ಅವರೇ ಮುಂದುವರಿಯುತ್ತಾರೆ, ಕಳೆದ ಆರು ತಿಂಗಳುಗಳಲ್ಲಿ ಅವರು ಅತ್ಯುತ್ತಮ, ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡಿದ್ದಾರೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಅವರು ಧೃತಿಗೆಟ್ಟಿಲ್ಲ. ಅವರು ಮುಂದುವರಿಯವ ಬಗ್ಗೆ ಗೊಂದಲಗಳಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇದನ್ನೂ ಓದಿ: Viral Video: ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಯುವತಿಯನ್ನು ಕಾಪಾಡಿದ ಪುರುಷರು; ಶಾಕಿಂಗ್ ವಿಡಿಯೋ ವೈರಲ್