ಮಧುಗಿರಿ ಶಾಸಕ ವೀರಭದ್ರಯ್ಯ ನಿಷ್ಪ್ರಯೋಜಕ ವ್ಯಕ್ತಿ ಅಂದರು ರಾಮಕೃಷ್ಣ ಆಶ್ರಮದ ನಿರ್ಮಲಾನಂದ ಸ್ವಾಮೀಜಿ!

ಮಧುಗಿರಿ ಶಾಸಕ ವೀರಭದ್ರಯ್ಯ ನಿಷ್ಪ್ರಯೋಜಕ ವ್ಯಕ್ತಿ ಅಂದರು ರಾಮಕೃಷ್ಣ ಆಶ್ರಮದ ನಿರ್ಮಲಾನಂದ ಸ್ವಾಮೀಜಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 02, 2022 | 7:27 PM

ಜನ ಮತ್ತು ಸ್ವಾಮೀಜಿ ಸೇರಿ ಪುರಸಭೆಯ ಅಧಿಕಾರಿ ಮತ್ತು ಇತರ ಸಿಬ್ಬಂದಿಯ ಗಮನಕ್ಕೆ ವಿಷಯ ತಂದರೂ ಅವರೆಲ್ಲ ಜವಾಬ್ದಾರಿಯನ್ನು ಬೇರೆಯವರ ಮೇಲೆ ಜಾರಿಸಿದ್ದಾರೆ. ಬುಧವಾರ ಪುರಸಭೆಯ ಆರೋಗ್ಯ ನಿರೀಕ್ಷಕ ಯಾವುದೋ ಕಾರಣ ನಿಮಿತ್ತ ಅಲ್ಲಿಗೆ ಬಂದವರು ಸ್ವಾಮೀಜಿಗಳ ಕೈಗೆ ತಗ್ಲಾಕಿಕೊಂಡಿದ್ದಾರೆ. ಸ್ವಾಮೀಜಿಗಳು ಅವರಿಗೆ ಎಕ್ಕಾಮಕ್ಕಾ ಉಗಿಯುತ್ತಿದ್ದಾರೆ.

ಮಧುಗಿರಿ ರಾಮಕೃಷ್ಣ ಆಶ್ರಮದ ನಿರ್ಮಲಾನಂದ ಸ್ವಾಮೀಜಿ (Nirmalananda Swamiji) ಅವರ ಕೋಪ ನೆತ್ತಿಗೇರಿದೆ. ಅವರ ಕೋಪ ಸಹಜ ಮತ್ತು ತಾರ್ಕಿಕವೂ ಆಗಿದೆ. ಮಧುಗಿರಿ ಪಟ್ಟಣದ ಪುರಸಭೆ ಸಿಬ್ಬಂದಿ ವಿರುದ್ಧ ಕೆಂಡ ಕಾರುತ್ತಿರುವ ಸ್ವಾಮೀಜಿಯವರು ಮುಧುಗಿರಿ ಶಾಸಕ ವೀರಭದ್ರಯ್ಯ (MLA Veerabhadraiah) ಅವರನ್ನು ನಿಷ್ಪ್ರಯೋಜಕ ವ್ಯಕ್ತಿ ಎಂದು ಜರಿಯುತ್ತಿದ್ದಾರೆ. ಅವರ ಕೋಪಕ್ಕೆ ಕಾರಣ ಇಲ್ಲದಿಲ್ಲ. ಏನಾಗಿದೆ ಎಂದರೆ, ಪಟ್ಟಣದ ಪುರಸಭೆಯ ಸಮೀಪ ಒಳಚರಂಡಿ (UGD) ಒಡೆದು ನೀರು ರಸ್ತೆಗೆ ಬರುತ್ತಿದೆ ಮತ್ತು ಅದರಿಂದ ದುರ್ನಾತವೂ ಸೂಸುತ್ತಿದೆ, ಅಲ್ಲೇ ಮಣ್ಣು ಕುಪ್ಪೆ ಹಾಕಲಾಗಿದೆ ಮತ್ತು ಸದರಿ ರಸ್ತೆಯ ಪೂರ್ತಿಯಾಗಿ ಹದಗೆಟ್ಟಿದೆ. ಜನ ಮತ್ತು ಸ್ವಾಮೀಜಿ ಸೇರಿ ಪುರಸಭೆಯ ಅಧಿಕಾರಿ ಮತ್ತು ಇತರ ಸಿಬ್ಬಂದಿಯ ಗಮನಕ್ಕೆ ವಿಷಯ ತಂದರೂ ಅವರೆಲ್ಲ ಜವಾಬ್ದಾರಿಯನ್ನು ಬೇರೆಯವರ ಮೇಲೆ ಜಾರಿಸಿದ್ದಾರೆ. ಬುಧವಾರ ಪುರಸಭೆಯ ಆರೋಗ್ಯ ನಿರೀಕ್ಷಕ (health inspector) ಯಾವುದೋ ಕಾರಣ ನಿಮಿತ್ತ ಅಲ್ಲಿಗೆ ಬಂದವರು ಸ್ವಾಮೀಜಿಗಳ ಕೈಗೆ ತಗ್ಲಾಕಿಕೊಂಡಿದ್ದಾರೆ. ಸ್ವಾಮೀಜಿಗಳು ಅವರಿಗೆ ಎಕ್ಕಾಮಕ್ಕಾ ಉಗಿಯುತ್ತಿದ್ದಾರೆ.

ಅವರ ಕೋಪ ಶಮನಗೊಂಡ ನಂತರ ಮಾಧ್ಯಮದವರು ಅವರೊಂದಿಗೆ ಮಾತಾಡಿದ್ದಾರೆ. ರಸ್ತೆ ಮತ್ತು ಒಳಚರಂಡಿಯಿಂದ ಜನರಿಗೆ ಅಗುತ್ತಿರುವ ಸಮಸ್ಯೆ ಬಗ್ಗೆ ಹಲವಾರು ದಿನಗಳಿಂದ ಪುರಸಭೆ ಸಿಬ್ಬಂದಿಯ ಗಮನಕ್ಕೆ ತಂದರೂ ಅವರು ಗಮನ ಹರಿಸುತ್ತಿಲ್ಲ. ಪಕ್ಕದಲ್ಲೇ ಶಾಲೆಯಿದೆ, ಮಹಿಳಾ ಸಮಾಜವಿದೆ. ರಸ್ತೆಯಿಂದ ಏಳುತ್ತಿರುವ ಧೂಳು ಮಕ್ಕಳ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಷಯವನ್ನು ಚೀಫ್ ಆಫೀಸರ್ ಗಮನಕ್ಕೆ ತಂದರೆ ಅವರು ಇಂಜಿನೀಯರ್ಗೆ ಹೇಳಿ ಅಂತಾರೆ, ಇಂಜಿನೀಯರ್, ಹೆಲ್ತ್ ಆಫೀಸರ್ ಗೆ ಹೇಳಿ ಅಂತಾರೆ, ಹೆಲ್ತ್ ಆಫೀಸರ್ ಈ ಕೆಲಸ ನನ್ನದಲ್ಲ ಅಂತ ಜಾರಿಕೊಳ್ಳುತ್ತಾರೆ. ಹಾಗಾದರೆ, ಜನ ಯಾರನ್ನು ಕೇಳಬೇಕು ಅಂತ ಸ್ವಾಮೀಜಿ ಆಕ್ರೋಷ ಹೊರಹಾಕುತ್ತಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮದವರು ವಿಷಯವನ್ನು ಶಾಸಕರ ಗಮನಕ್ಕೆ ತರಲಾಗಿದೆಯೇ ಅಂತ ಕೇಳಿದಾಗ, ಅವರೊಬ್ಬ ನಿಷ್ಪ್ರಯೋಜಕ ವ್ಯಕ್ತಿ ಅಂತ ಅಸಾಮಾಧಾನ ವ್ಯಕ್ತಪಡಿಸುತ್ತಾರೆ,

ಇದನ್ನೂ ಓದಿ:  ತುಮಕೂರು: ಬದುಕಿರುವ ಗ್ರಾ.ಪಂ. ಸದಸ್ಯ ಸತ್ತಿದ್ದಾನೆಂದು ವೋಟರ್ ಐಡಿ ರದ್ದು; ತಹಶೀಲ್ದಾರ್​ಗೆ ದೂರು ಸಲ್ಲಿಕೆ!