ತುಮಕೂರು: ಬದುಕಿರುವ ಗ್ರಾ.ಪಂ. ಸದಸ್ಯ ಸತ್ತಿದ್ದಾನೆಂದು ವೋಟರ್ ಐಡಿ ರದ್ದು; ತಹಶೀಲ್ದಾರ್​ಗೆ ದೂರು ಸಲ್ಲಿಕೆ!

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮ ಪಂಚಾಯತ್ ಸದಸ್ಯ ಟಿ. ಶಿವಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಗೌರಿಶಂಕರ್​ ಜೊತೆ ಆಗಮಿಸಿ ತಹಶೀಲ್ದಾರ್​ಗೆ ದೂರು ಸಲ್ಲಿಕೆ ಮಾಡಲಾಗಿದೆ. ತುಮಕೂರು ತಹಶೀಲ್ದಾರ್​ಗೆ ಗ್ರಾಮ ಪಂಚಾಯತ್ ಸದಸ್ಯ ಟಿ.ಶಿವಪ್ರಸಾದ್ ದೂರು ನೀಡಿದ್ದಾರೆ.

ತುಮಕೂರು: ಬದುಕಿರುವ ಗ್ರಾ.ಪಂ. ಸದಸ್ಯ ಸತ್ತಿದ್ದಾನೆಂದು ವೋಟರ್ ಐಡಿ ರದ್ದು; ತಹಶೀಲ್ದಾರ್​ಗೆ ದೂರು ಸಲ್ಲಿಕೆ!
Follow us
TV9 Web
| Updated By: ganapathi bhat

Updated on: Feb 01, 2022 | 7:24 PM

ತುಮಕೂರು: ಬದುಕಿರುವ ಗ್ರಾಮ ಪಂಚಾಯತ್ ಸದಸ್ಯ ಸತ್ತಿದ್ದಾನೆಂದು ವೋಟರ್​ ಐಡಿ ರದ್ದು ಮಾಡಿರುವ ಘಟನೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಳೂರು ಗ್ರಾಮ ಪಂಚಾಯತ್​ನಲ್ಲಿ ನಡೆದಿದೆ. ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ ಟಿ. ಶಿವಪ್ರಸಾದ್ ವೋಟರ್ ಐಡಿ ರದ್ದುಮಾಡಲಾಗಿದೆ. ವ್ಯಕ್ತಿ ಸತ್ತಿದ್ದಾನೆಂದು ಮತದಾರರ ಗುರುತಿನ ಚೀಟಿಯನ್ನು ತಾಲೂಕು ಅಧಿಕಾರಿಗಳು ರದ್ದು ಮಾಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮ ಪಂಚಾಯತ್ ಸದಸ್ಯ ಟಿ. ಶಿವಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಗೌರಿಶಂಕರ್​ ಜೊತೆ ಆಗಮಿಸಿ ತಹಶೀಲ್ದಾರ್​ಗೆ ದೂರು ಸಲ್ಲಿಕೆ ಮಾಡಲಾಗಿದೆ. ತುಮಕೂರು ತಹಶೀಲ್ದಾರ್​ಗೆ ಗ್ರಾಮ ಪಂಚಾಯತ್ ಸದಸ್ಯ ಟಿ.ಶಿವಪ್ರಸಾದ್ ದೂರು ನೀಡಿದ್ದಾರೆ.

ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ!

ವ್ಯಕ್ತಿ ಸತ್ತ ಮೇಲೆ ನೀಡುವ ಮರಣ ಪ್ರಮಾಣಪತ್ರ ಅಧಿಕಾರಿಗಳ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬನಿಗೆ ಜೀವಂತ ಇದ್ದಾಗಲೇ ಸಿಕ್ಕಿದ ಘಟನೆ ನಡೆದಿತ್ತು. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕು ಕಚೇರಿಯಲ್ಲಿ ನಡೆಯಬಾರದ್ದೊಂದು ಘಟನೆ ನಡೆದು ಹೋಗಿತ್ತು. ಇದರಲ್ಲಿ ಅಧಿಕಾರಿಗಳ ಎಡವಟ್ಟು ಅನ್ನೋದು ಒಂದು ಅಂಶವಾದರೆ, ತಾಲ್ಲೂಕು ಕಚೇರಿಯಲ್ಲಿ ಹಣ ಕೊಟ್ಟರೆ ಯಾರನ್ನು ಬೇಕಾದರೂ ಸಾಯಿಸಬಹುದು, ಯಾರನ್ನು ಬೇಕಾದ್ರು ಬದುಕಿಸಬಹುದು ಅನ್ನೋದು ಪ್ರಶ್ನೆಯಾಗಿತ್ತು. ಮುಳಬಾಗಿಲು ತಾಲೂಕಿನ ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಇನ್ನೂ ಜೀವಂತವಾಗಿ ಇರುವಾಗಲೇ ಅವರನ್ನು ದಾಖಲೆಗಳಲ್ಲಿ ಸಾಯಿಸಲಾಗಿತ್ತು.

ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್​ ಎಂಬುವರು ತಮಗಿರುವ ಒಂದಷ್ಟು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಅದರ ಜೊತೆಗೆ ಸಣ್ಣದೊಂದು ಅಂಗಡಿ ಹಾಕಿಕೊಂಡು ಜೀವನ ಮಾಡಿಕೊಂಡು ಬದುಕುತ್ತಿದ್ದರು. ಹೀಗಿರುವಾಗಲೇ ಅವರಿಗೆ ಕಳೆದ 2021 ನೇ ಜುಲೈ 7 ರಂದು ರೈತ ಶಿವರಾಜ್​ ಮರಣ ಹೊಂದಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದರು.

ಅದು ಶಿವರಾಜ್​ ಅವರಿಗೆ ಗೊತ್ತಾಗಿಲ್ಲ, ಶಿವರಾಜ್ ಕುಟುಂಬ ಎಂ.ಹೊಸಹಳ್ಳಿ ಗ್ರಾಮದ ಹೊರಗೆ ಸಣ್ಣದೊಂದು ಚಿಲ್ಲರೆ ಅಂಗಡಿ‌ ಹಾಕಿಕೊಂಡು‌ ಜೀವನ ಮಾಡುತ್ತಿದ್ದರು. ಜೊತೆಗೆ ಗ್ರಾಮದ ಯಾರ ವಿಷಯಕ್ಕೂ ಹೋಗದೆ ತಾವಾಯಿತು ತಮ್ಮ ಬದುಕುಯಾಯಿತೆಂದು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಹೀಗಿರುವಾಗಲೇ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಿನಂತೆ ಪಡಿತರ ಆಹಾರ ಪಡೆಯಲು ಹೋದ ವೇಳೆ ರೈತ ಶಿವರಾಜ್​ಗೆ ಆಘಾತ ಕಾರಿ ಅಂಶ ಹೊರಬಿದ್ದಿತ್ತು. ಶಿವರಾಜ್ ಮೃತರಾಗಿದ್ದು ಅವರನ್ನು ಪಡಿತರ ಚೀಟಿಯಿಂದ‌ ಹೆಸರನ್ನು ಕೈ‌ ಬಿಡಲಾಗಿದೆ ಅನ್ನೋ ವಿಷಯ ಗೊತ್ತಾಗಿತ್ತು. ಇದರಿಂದ‌ ಈಡೀ ಕುಟುಂಬ‌ ಅಘಾತಕ್ಕೊಳಗಾಗಿದ್ದರು.

ಇದನ್ನೂ ಓದಿ: ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?

ಇದನ್ನೂ ಓದಿ: ಚಾಮರಾಜನಗರ: ಜಾತಿ ಪ್ರಮಾಣಪತ್ರ ನೀಡುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲ್ಲ; ಭೋವಿ ಜನಾಂಗದಿಂದ ಸಿಎಂಗೆ ಪತ್ರ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ