ಚಾಮರಾಜನಗರ: ಜಾತಿ ಪ್ರಮಾಣಪತ್ರ ನೀಡುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲ್ಲ; ಭೋವಿ ಜನಾಂಗದಿಂದ ಸಿಎಂಗೆ ಪತ್ರ

ಚಾಮರಾಜನಗರ: ಜಾತಿ ಪ್ರಮಾಣಪತ್ರ ನೀಡುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲ್ಲ; ಭೋವಿ ಜನಾಂಗದಿಂದ ಸಿಎಂಗೆ ಪತ್ರ

ವಡ್ಡ ಅಥವಾ ಭೋವಿ ಜಾತಿಯ ಪ್ರಮಾಣ ಪತ್ರ ನೀಡಿದರಷ್ಟೇ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಸದ್ಯ ಕಳೆದ ಐದು ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

TV9kannada Web Team

| Edited By: ganapathi bhat

Jan 28, 2022 | 3:08 PM

ಚಾಮರಾಜನಗರ: ಜಾತಿ ಪ್ರಮಾಣ ಪತ್ರ ನೀಡುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದು ಇಲ್ಲಿನ ಕೊಳ್ಳೆಗಾಲ ತಾಲೂಕಿನ ವಂಡರಬಾಳು ಗ್ರಾಮದ ಭೋವಿ ಜನಾಂಗದವರು ಹೇಳಿದ್ದಾರೆ. ಜಾತಿ ಪ್ರಮಾಣ ಪತ್ರ ನೀಡದಕ್ಕೆ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿಲ್ಲ. ಮಕ್ಕಳನ್ನ ಶಾಲೆಗೆ ಕಳುಹಿಸಲ್ಲ ಅಂತ ಪೋಷಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕೊಳ್ಳೆಗಾಲ ತಾಲೂಕಿನ ವಂಡರಬಾಳು ಗ್ರಾಮದ ಭೋವಿ ಜನಾಂಗದವರಿಂದ ಜಾತಿ ಪ್ರಮಾಣ ಪತ್ರಕ್ಕೆ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ರೀತಿ ಪ್ರತಿಭಟಿಸುತ್ತಿರುವುದಾಗಿ ಹೇಳಿದ್ದಾರೆ.

ಜಾತಿ ಪ್ರಮಾಣ ಪತ್ರ ನೀಡದ ಸೌಲಭ್ಯ ವಂಚಿತರಾಗುತ್ತಿದ್ದೇವೆ‌. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ಜಾತಿಯ ಪ್ರಮಾಣ ಪತ್ರ ನೀಡ್ತಾ ಇರೋದ್ರಿಂದ ಸರ್ಕಾರಿ ಸವಲತ್ತು ಸಿಗುತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ವಡ್ಡ ಅಥವಾ ಭೋವಿ ಜಾತಿಯ ಪ್ರಮಾಣ ಪತ್ರ ನೀಡಿದರಷ್ಟೇ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಸದ್ಯ ಕಳೆದ ಐದು ದಿನಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಚಾಮರಾಜನಗರ: ಆನೆ ದಾಳಿ, ರೈತ ಗಂಭೀರ ಗಾಯ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಚೆಂಗಡಿ ಗ್ರಾಮದ ಬಳಿ ರೈತನೊಬ್ಬ ಆನೆ ದಾಳಿಗೆ ಒಳಗಾದ ಘಟನೆ ನಡೆದಿದೆ. ಮುನಿವೆಂಕಟೇಗೌಡ (52) ಆನೆ ದಾಳಿಗೆ ಒಳಗಾಗಿದ್ದಾರೆ. ಚಂಗಡಿಯಿಂದ ಕಾಡಿನ ರಸ್ತೆಯಲ್ಲಿ ಕೌದಳ್ಳಿಗೆ ಬರುವಾಗ ಆನೆದಾಳಿ ನಡೆದಿದೆ. ಗಾಯಗೊಂಡ ಮುನಿವೆಂಕಟೇಗೌಡ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಬಿಸಿಯೂಟ ಸೇವಿಸಿದ್ದ 60 ಮಕ್ಕಳ ಆರೋಗ್ಯದಲ್ಲಿ ಏರುಪೇರು

ಇದನ್ನೂ ಓದಿ: ಚಾಮರಾಜನಗರ: ಅರಣ್ಯ ಇಲಾಖೆ‌ ವಾಹನದ ಮೇಲೆ ಕಾಡಾನೆ ದಾಳಿ, ಜೀಪ್​ ನುಚ್ಚುನೂರು, ಅಧಿಕಾರಿ-ಸಿಬ್ಬಂದಿಗೆ ಗಾಯ

Follow us on

Related Stories

Most Read Stories

Click on your DTH Provider to Add TV9 Kannada