ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?

ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಿನಂತೆ ಪಡಿತರ ಆಹಾರ ಪಡೆಯಲು ಹೋದ ವೇಳೆ ರೈತ ಶಿವರಾಜ್​ಗೆ ಆಘಾತ ಕಾರಿ ಅಂಶ ಹೊರಬಿದ್ದಿದೆ. ಶಿವರಾಜ್ ಮೃತರಾಗಿದ್ದು ಅವರನ್ನು ಪಡಿತರ ಚೀಟಿಯಿಂದ‌ ಹೆಸರನ್ನು ಕೈ‌ ಬಿಡಲಾಗಿದೆ ಅನ್ನೋ ವಿಷಯ ಗೊತ್ತಾಗಿದೆ. ಇದರಿಂದ‌ ಈಡೀ ಕುಟುಂಬ‌ ಅಘಾತಕ್ಕೊಳಗಾಗಿದ್ದಾರೆ.

ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?
ಜೀವಂತ ರೈತನಿಗೆ ಮರಣ ಪ್ರಮಾಣಪತ್ರ!
Follow us
TV9 Web
| Updated By: ganapathi bhat

Updated on: Jan 30, 2022 | 6:16 PM

ಕೋಲಾರ: ವ್ಯಕ್ತಿ ಸತ್ತ ಮೇಲೆ ನೀಡುವ ಮರಣ ಪ್ರಮಾಣಪತ್ರ ಅಧಿಕಾರಿಗಳ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬನಿಗೆ ಜೀವಂತ ಇದ್ದಾಗಲೇ ಸಿಕ್ಕಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕು ಕಚೇರಿಯಲ್ಲಿ ನಡೆಯಬಾರದ್ದೊಂದು ಘಟನೆ ನಡೆದು ಹೋಗಿದೆ. ಇದರಲ್ಲಿ ಅಧಿಕಾರಿಗಳ ಎಡವಟ್ಟು ಅನ್ನೋದು ಒಂದು ಅಂಶವಾದರೆ, ತಾಲ್ಲೂಕು ಕಚೇರಿಯಲ್ಲಿ ಹಣ ಕೊಟ್ಟರೆ ಯಾರನ್ನು ಬೇಕಾದರೂ ಸಾಯಿಸಬಹುದು, ಯಾರನ್ನು ಬೇಕಾದ್ರು ಬದುಕಿಸಬಹುದು ಅನ್ನೋದು ಸಾಬೀತಾಗಿದೆ. ಹೌದು. ಮುಳಬಾಗಿಲು ತಾಲೂಕಿನ ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಇನ್ನೂ ಜೀವಂತವಾಗಿ ಇರುವಾಗಲೇ ಅವರನ್ನು ದಾಖಲೆಗಳಲ್ಲಿ ಸಾಯಿಸಲಾಗಿದೆ.

ಎಂ. ಹೊಸಹಳ್ಳಿ ಗ್ರಾಮದ ರೈತ ಶಿವರಾಜ್​ ಎಂಬುವರು ತಮಗಿರುವ ಒಂದಷ್ಟು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಅದರ ಜೊತೆಗೆ ಸಣ್ಣದೊಂದು ಅಂಗಡಿ ಹಾಕಿಕೊಂಡು ಜೀವನ ಮಾಡಿಕೊಂಡು ಬದುಕುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಕಳೆದ 2021 ನೇ ಜುಲೈ 7 ರಂದು ರೈತ ಶಿವರಾಜ್​ ಮರಣ ಹೊಂದಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಅದು ಶಿವರಾಜ್​ ಅವರಿಗೆ ಗೊತ್ತಾಗಿಲ್ಲ, ಶಿವರಾಜ್ ಕುಟುಂಬ ಎಂ.ಹೊಸಹಳ್ಳಿ ಗ್ರಾಮದ ಹೊರಗೆ ಸಣ್ಣದೊಂದು ಚಿಲ್ಲರೆ ಅಂಗಡಿ‌ ಹಾಕಿಕೊಂಡು‌ ಜೀವನ ಮಾಡುತ್ತಿದ್ದಾರೆ ಜೊತೆಗೆ ಗ್ರಾಮದ ಯಾರ ವಿಷಯಕ್ಕೂ ಹೋಗದೆ ತಾವಾಯಿತು ತಮ್ಮ ಬದುಕುಯಾಯಿತೆಂದು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಿನಂತೆ ಪಡಿತರ ಆಹಾರ ಪಡೆಯಲು ಹೋದ ವೇಳೆ ರೈತ ಶಿವರಾಜ್​ಗೆ ಆಘಾತ ಕಾರಿ ಅಂಶ ಹೊರಬಿದ್ದಿದೆ. ಶಿವರಾಜ್ ಮೃತರಾಗಿದ್ದು ಅವರನ್ನು ಪಡಿತರ ಚೀಟಿಯಿಂದ‌ ಹೆಸರನ್ನು ಕೈ‌ ಬಿಡಲಾಗಿದೆ ಅನ್ನೋ ವಿಷಯ ಗೊತ್ತಾಗಿದೆ. ಇದರಿಂದ‌ ಈಡೀ ಕುಟುಂಬ‌ ಅಘಾತಕ್ಕೊಳಗಾಗಿದ್ದಾರೆ.

ಮರಣ ಪ್ರಮಾಣ ಪತ್ರ ಕೊಟ್ಟಿರೋದು ಹೇಗೆ? ಯಾರಿದ್ದಾರೆ ಇದರ ಹಿಂದೆ?

ಮರಣ ಪ್ರಮಾಣಪತ್ರ ನೀಡಲು ಸರ್ಕಾರದಲ್ಲಿ ಹಲವಾರು ನಿಯಮಗಳಿವೆ. ಮರಣ ಪ್ರಮಾಣಪತ್ರ ಪಡೆಯಲು ಮೃತರ ಸಂಬಂಧಿಕರು ಅರ್ಜಿ ಹಾಕಬೇಕು, ಅದನ್ನು ಅಂಗನವಾಡಿ ಕಾರ್ಯಕರ್ತೆಯರು ಅಥವಾ ಗ್ರಾಮ ಲೆಕ್ಕಿಗಗರು, ಅಥವಾ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿ ನಂತರ ಅವರಿಗೆ ಮರಣ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಇದ್ಯಾವುದನ್ನೂ ಪಾಲಿಸದೆ ಹೀಗೆ ರೈತ ಶಿವರಾಜ್​ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ನೀಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಯಾರಾದರೂ ಕೇಳದೆ ಇದ್ದರೆ ಮರಣ ಪತ್ರ ಕೊಟ್ಟಿದ್ದಾದರೂ ಏಕೆ ಅನ್ನೋ ಪ್ರಶ್ನೆ ಶುರುವಾಗಿದೆ. ಯಾರಾದರೂ ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದರೆ ಯಾರು ಹಾಕಿರೋದು ಅದರ ಹಿಂದಿನ ಉದ್ದೇಶ ಏನು ಅನ್ನೋ ಸಾಕಷ್ಟು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಡಬೇಕಿದೆ.

ತಹಶೀಲ್ದಾರ್​ ಸೇರಿ ನಾಲ್ವರು ಅಧಿಕಾರಿಗಳ ವಿರುದ್ದ ದೂರು

ಇಷ್ಟೆಲ್ಲಾ ಎಡವಟ್ಟು ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಶಿವರಾಜ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು ಈ ಹಿಂದೆ ಇದ್ದ ತಹಶಿಲ್ದಾರ್ ಜಿ.ರಾಜಶೇಖರ್, ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್, ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ದ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜೊತೆಗೆ ಇದರ ಹಿಂದಿನ ವ್ಯಕ್ತಿಗಳು ಯಾರು ಅನ್ನೋದನ್ನು ಹುಡುಕಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Kolar Farmer Death Certificate

ಶಿವರಾಜ್​ ತಂದೆಯ ಜಮೀನು ಲಪಟಾಯಿಸುವ ಸಂಚಿನ ಅನುಮಾನ

ಯಾವುದೇ ಲಾಭವಿಲ್ಲದೆ ಹೀಗೊಂದು ದಾಖಲಾತಿಗಳನ್ನು ನಕಲು ಮಾಡಲು ಸಾಧ್ಯವಿಲ್ಲ ಇದರ ಹಿಂದೆ ಬಹುದೊಡ್ಡ ಉದ್ದೇಶ ಇರಬಹುದು ಎನ್ನಲಾಗಿದೆ. ಒಂದು ಮಾಹಿತಿ ಪ್ರಕಾರ ಇದರ ಹಿಂದೆ ಭೂ ಮಾಫಿಯಾದವರ ಕೈವಾಡ ಇದೆಯೆಂದು ಅನುಮಾನಿಸಲಾಗಿದೆ. ಶಿವರಾಜ್ ತಂದೆ ಮೃತಪಟ್ಟಿದ್ದು, ಅವರ ತಂದೆ ವೆಂಕಟೇಶಪ್ಪ ಹೆಸರಲ್ಲಿದ್ದ ಜನೀನನ್ನು ಸುಳ್ಳುದಾಖಲಾತಿ ನೀಡಿ ಅದನ್ನು ಬೇರೆಯವರಿಗೆ ವರ್ಗಾವಣೆ ಮಾಡಲು ತಂತ್ರ ಹೆಣೆದಿರಬಹುದು. ಅಷ್ಟರಲ್ಲಿ ಪ್ರಕರಣ ಬಯಲಾಗಿದೆ ಎನ್ನಲಾಗಿದೆ. ಅದು ನಿಜವಾ ಸುಳ್ಳಾ ಅನ್ನೋದು ಸದ್ಯ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಈಬಗ್ಗೆ ಮುಳಬಾಗಿಲು ತಹಶೀಲ್ದಾರ್​ ಶೋಭಿತಾ ಕೂಡಾ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಜೀವಂತವಾರುವ ರೈತನಿಗೆ ಮರಣ ಪತ್ರ ನೀಡಿ ಅಧಿಕಾರಿಗಳು ಮಹಾ‌ ಎಡವಟ್ಟು ಮಾಡಿದ್ದಾರೆ. ಆದರೆ ಎಡವಟ್ಟು ಮಾಡಿದವರು ಅಧಿಕಾರಿಗಳಾ ಅಥವಾ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಪತ್ತೆಹಚ್ಚಿ ರೈತನಿಗೆ ಮೋಸ ಮಾಡಲು ಹೊರಟ್ಟಿದ್ದವರು ಯಾರು ಅನ್ನೋದನ್ನು ತನಿಖೆ ಮಾಡಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷಯಾಗಬೇಕು ಅನ್ನೋದು ನೊಂದವರ ಆಗ್ರಹ.

ವರದಿ : ರಾಜೇಂದ್ರ ಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಕೋಲಾರ: ರೈತರೂ ಇಷ್ಟೊಂದು ಸಾಧನೆ, ಸಂಪಾದನೆ ಮಾಡಬಹುದು; ಮಾದರಿ ಕೃಷಿಕನ ಯಶಸ್ವಿ ಬದುಕು!

ಇದನ್ನೂ ಓದಿ: ಕೋಲಾರ: ಹೋಟೆಲ್​ನಲ್ಲಿ ಸಿಲಿಂಡರ್ ಸ್ಫೋಟ; ಎದುರಿನ ಅಂಗಡಿಯ ಇಬ್ಬರಿಗೆ ಗಾಯ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್