ಕೋಲಾರ: ಹೋಟೆಲ್​ನಲ್ಲಿ ಸಿಲಿಂಡರ್ ಸ್ಫೋಟ; ಎದುರಿನ ಅಂಗಡಿಯ ಇಬ್ಬರಿಗೆ ಗಾಯ

ಕೋಲಾರ: ಹೋಟೆಲ್​ನಲ್ಲಿ ಸಿಲಿಂಡರ್ ಸ್ಫೋಟ; ಎದುರಿನ ಅಂಗಡಿಯ ಇಬ್ಬರಿಗೆ ಗಾಯ
ಕೋಲಾರ: ಹೋಟೆಲ್​ನಲ್ಲಿ ಸಿಲಿಂಡರ್ ಸ್ಫೋಟ

ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದ ಐದಾರು ಅಕ್ಕ ಪಕ್ಕದ ಅಂಗಡಿಗಳಿಗೆ ಹಾನಿ ಉಂಟಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

TV9kannada Web Team

| Edited By: ganapathi bhat

Jan 23, 2022 | 8:24 AM


ಕೋಲಾರ: ಹೋಟೆಲ್​​ನಲ್ಲಿ ಸಿಲಿಂಡರ್​​​​ ಸ್ಫೋಟಗೊಂಡು ಇಬ್ಬರಿಗೆ ಗಾಯವಾದ ದುರ್ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಬಜಾರ್ ರಸ್ತೆಯಲ್ಲಿ ನಡೆದಿದೆ. ಪ್ರಸಾದ್ ದೋಸೆ ಕ್ಯಾಂಪ್‌ ಹೋಟೆಲ್​ನಲ್ಲಿ ಸಿಲಿಂಡರ್​ ಬ್ಲಾಸ್ಟ್ ಆಗಿ ಅವಘಡ ಸಂಭವಿಸಿದೆ. ಸಿಲಿಂಡರ್ ಸೋರಿಕೆಯಿಂದ ಬೆಂಕಿ ತಗುಲಿ ಅಗ್ನಿ ಅಪಘಾತ ಉಂಟಾಗಿದೆ ಎಂದು ಮಾಹಿತಿ ಲಭಿಸಿದೆ. ಸ್ಫೋಟದ ರಭಸಕ್ಕೆ ಶೆಟರ್ಸ್​​​​ ಕಿತ್ತುಕೊಂಡು ಇಬ್ಬರಿಗೆ ಗಾಯ ಆಗಿದೆ.

ಹೊಟೇಲ್​ನ ಎದುರಿನ ಅಂಗಡಿಯ ಶಿವ ಹಾಗೂ ಪಾರ್ಥಸಾರಥಿಗೆ ಗಾಯ ಆಗಿದೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಿಂದ ಐದಾರು ಅಕ್ಕ ಪಕ್ಕದ ಅಂಗಡಿಗಳಿಗೆ ಹಾನಿ ಉಂಟಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಅಪರಾಧ, ಅಪಘಾತ ಸುದ್ದಿಗಳು

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರಿನಲ್ಲಿ ಬಸ್​​ನಲ್ಲಿ ಮದ್ಯದ ಅಮಲಿನಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮದ್ಯದ ಅಮಲಿನಲ್ಲಿ ಇದ್ದ ವ್ಯಕ್ತಿಗೆ ಮಹಿಳೆ ಥಳಿಸಿದ ಘಟನೆ ನಡೆದಿದೆ. ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಬಸ್​ನಲ್ಲಿ ವ್ಯಕ್ತಿ ಅನುಚಿತ ವರ್ತನೆ ತೋರಿದ್ದ. ಆತನಿಗೆ ಮಹಿಳೆ ಚಪ್ಪಲಿ ಏಟು ಕೊಟ್ಟು ಕಳಿಸಿದ್ದಾರೆ.

ಬೀದರ್: ಇಲ್ಲಿನ ಕಮಲನಗರ ತಾಲೂಕು ಕೇಂದ್ರದ ಬಳಿ ರೈಲಿಗೆ ತಲೆಕೊಟ್ಟು ಅಪರಿಚಿತ ವೃದ್ಧ ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಜೀವನದಲ್ಲಿ ಜುಗುಪ್ಸೆಗೊಂಡು ವೃದ್ಧ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಕೊಪ್ಪಳ: ತಾಲೂಕಿನ ಶಹಪೂರ ಗ್ರಾಮದ ಬಳಿ ಬೈಕ್​​ಗೆ ಲಾರಿ ಡಿಕ್ಕಿಯಾಗಿ ಶಹಪುರ ಗ್ರಾಮದ ಭೋಜಪ್ಪ (28) ಎಂಬವರು ಮೃತಪಟ್ಟಿದ್ದಾರೆ. ಭೋಜಪ್ಪ ಅಪಘಾತ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಸರ್ವಿಸ್ ರಸ್ತೆ ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಗ್ರಾಮಸ್ಥರ ಪ್ರತಿಭಟನೆ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತ; ಖ್ಯಾತ​ ನಟ ಬಚಾವ್​, ವೈರಲ್​ ಆಯ್ತು ಫೋಟೋ

ಇದನ್ನೂ ಓದಿ: ಮುಂಬೈ: ಟಾರ್ಡಿಯೋದ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ; ಏಳು ಜನರ ದುರ್ಮರಣ

Follow us on

Related Stories

Most Read Stories

Click on your DTH Provider to Add TV9 Kannada