ರೂ. 70 ಕೋಟಿ ಆಸ್ತಿ ತೆರಿಗೆ ಪಾವತಿಸದ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಜಡಿದರು ಬಿಬಿಎಮ್​ಪಿ ಅಧಿಕಾರಿಗಳು!

ಥಣಿಸಂದ್ರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಬಿ ಬಿ ಎಮ್ ಪಿಯ ಯಲಹಂಕ ವ್ಯಾಪ್ತಿಗೆ ಸೇರುತ್ತದೆ. ಪಾಲಿಕೆ ಕಚೇರಿಯಿಂದ ಪಾರ್ಕಿನ ಮಾಲೀಕರಿಗೆ ಹಲವಾರು ಬಾರಿ ನೋಟೀಸ್ಗಳನ್ನು ನೀಡಲಾದರೂ ಅವರಿಂದ ಸಮರ್ಪಕ ಉತ್ತರ ಅಥವಾ, ಬಾಕಿ ಪಾವತಿಸುವ ಪ್ರಯತ್ನ ಕಾಣದೇ ಹೋದಾಗ ಅಧಿಕಾರಿಗಳು ಡಿಸ್ಟ್ರೆಸ್ ವಾರಂಟ್ ಜಾರಿ ಮಾಡಿದ್ದಾರೆ.

ರೂ. 70 ಕೋಟಿ ಆಸ್ತಿ ತೆರಿಗೆ ಪಾವತಿಸದ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಜಡಿದರು ಬಿಬಿಎಮ್​ಪಿ ಅಧಿಕಾರಿಗಳು!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 02, 2022 | 4:10 PM

ಇದು ಬೆಂಗಳೂರು (Bengaluru) ನಗರ ಮಾತ್ರವಲ್ಲ, ಇಡೀ ದೇಶದಲ್ಲೇ ಅತಿದೊಡ್ಡ ಟೆಕ್ ಪಾರ್ಕ್​ಗಳಲ್ಲಿ ಒಂದು. ಈ ಹೆಗ್ಗಳಿಕೆ ಕುರಿತು ಬರೆಯುವುದಕ್ಕಿದ್ದರೆ, ನಾವು ಸಂತೋಷದಿಂದ ಮತ್ತು ಹೆಮ್ಮೆಯಿಂದ ಬರೆಯುತ್ತಿದ್ದೆವು. ಅದರೆ ಈಗ ಹಿತಕರವಲ್ಲದ ಕಾರಣಗಳಿಗೆ ಸುದ್ದಿಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಬಗ್ಗೆ ವಿಷಾದದಿಂದ ಬರೆಯುವ ಪ್ರಸಂಗ ಎದುರಾಗಿದೆ ಮಾರಾಯ್ರೇ. ವಿಷಯ ಏನೆಂದರೆ, ಟೆಕ್ ಪಾರ್ಕ್ ಮಾಲೀಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರೂ.70 ಕೋಟಿಗಿಂತ ಹೆಚ್ಚು ಅಸ್ತಿ ತೆರಿಗೆ (property tax) ಬಾಕಿ ಉಳಿಸಿಕೊಂಡಿದ್ದಾರೆ. ಎಂಥ ಅನ್ಯಾಯ ಅಲ್ವಾ? ಪಾಲಿಕೆ ನಡೆಯೋದೇ ಜನರ ತೆರಿಗೆ ಹಣದಿಂದ. ಯಾವುದಾದರೂ ಮೂಲಭೂತ ಸೌಕರ್ಯದ (infrastructure) ಕೊರತೆ ಎದುರಾದಾಗ ಟೆಕ್ ಪಾರ್ಕ್ಗಳು ಮಾಡುವ ಪ್ರತಿಭಟನೆಗಳನ್ನು ನಾವು ನೋಡಿದ್ದೇವೆ. ಅಂಥವರಿಗೆ ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿಸಬೇಕು ಎಂಬ ಸಣ್ಣ ವಿಷಯ ಗೊತ್ತಾಗುವುದಿಲ್ಲವೇ? ನಾಚಿಕೆಗೇಡಿನ ಸಂಗತಿ ಮಾರಾಯ್ರೇ.

ಥಣಿಸಂದ್ರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಬಿ ಬಿ ಎಮ್ ಪಿಯ ಯಲಹಂಕ ವ್ಯಾಪ್ತಿಗೆ ಸೇರುತ್ತದೆ. ಪಾಲಿಕೆ ಕಚೇರಿಯಿಂದ ಪಾರ್ಕಿನ ಮಾಲೀಕರಿಗೆ ಹಲವಾರು ಬಾರಿ ನೋಟೀಸ್ಗಳನ್ನು ನೀಡಲಾದರೂ ಅವರಿಂದ ಸಮರ್ಪಕ ಉತ್ತರ ಅಥವಾ, ಬಾಕಿ ಪಾವತಿಸುವ ಪ್ರಯತ್ನ ಕಾಣದೇ ಹೋದಾಗ ಅಧಿಕಾರಿಗಳು ಡಿಸ್ಟ್ರೆಸ್ ವಾರಂಟ್ ಜಾರಿ ಮಾಡಿದ್ದಾರೆ.

ಮಾನ್ಯತಾ ಟೆಕ್ ಪಾರ್ಕ್ ಎಂಬೇಸಿ ಗ್ರೂಪಿನ ಎಸ್ ವಿ ಪಿಗಳಲ್ಲಿ ಒಂದಾಗಿದ್ದು ಎಂಬೇಸಿ ಗ್ರೂಪ್ ಬಿ ಬಿ ಎಮ್ ಪಿ ವಿರುದ್ಧ ಹೈಕೋರ್ಟ್ ನಲ್ಲಿ ಅಸ್ತಿ ತೆರಿಗೆ ಸಂಬಂಧಿಸಿದಂತೆ ದಾವೆಗಳನ್ನು ಹೂಡಿದೆ. ಆ ಪ್ರಕರಣಗಳಿನ್ನೂ ಇತ್ಯರ್ಥಗೊಂಡಿಲ್ಲ, ವಿಷಯ ಕೋರ್ಟಿನ ಸುಪರ್ದಿಯಲ್ಲಿರುವಾಗ ತೆರಿಗೆ ಪಾವತಿಸು ಪ್ರಶ್ನೆ ಉದ್ಭವಿಸುವುದಿಲ್ಲ ಎಂಬೇಸಿ ಗ್ರೂಪಿನ ವಕ್ತಾರೊಬ್ಬರು ಹೇಳಿದ್ದಾರೆ.

ಆದರೆ, ಬಿ ಬಿ ಎಮ್ ಪಿ ಅಧಿಕಾರಿಗಳು, ಅಸ್ತಿ ತೆರಿಗೆ ವಂಚಿಸುವ ಇಲ್ಲವೇ ಪಾವತಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಸಂಸ್ಥೆಗಳೊಂದಿಗೆ ಹೇಗೆ ವರ್ತಿಸುತ್ತಾರೋ ಮಾನ್ಯತಾ ಟೆಕ್ ಪಾರ್ಕ್ಗೂ ಹಾಗೆಯೇ ಮಾಡಿದ್ದಾರೆ. ಪಾರ್ಕಿನ ಮೇನ್ ಗೇಟ್ ಗೆ ಬೀಗ ಜಡಿದು ಯಾಕೆ ಹೀಗೆ ಮಾಡಿದ್ದೇವೆ ಅಂತ ಸೂಚಿಸುವ ಬ್ಯಾನರನ್ನು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ರೂ. 16 ಕೋಟಿ ತೆರಿಗೆ ಬಾಕಿಯುಳಿಸಿಕೊಂಡ ರೇವಾ ಯೂನಿವರ್ಸಿಟಿ ಕ್ಯಾಂಪಸ್​ಗೆ ಬಿಬಿಎಮ್​ಪಿ ಅಧಿಕಾರಿಗಳು ಬೀಗ ಜಡಿದರು!

Follow us