AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂ. 16 ಕೋಟಿ ತೆರಿಗೆ ಬಾಕಿಯುಳಿಸಿಕೊಂಡ ರೇವಾ ಯೂನಿವರ್ಸಿಟಿ ಕ್ಯಾಂಪಸ್​ಗೆ ಬಿಬಿಎಮ್​ಪಿ ಅಧಿಕಾರಿಗಳು ಬೀಗ ಜಡಿದರು!

ಕೋವಿಡ್ ಪೀಡೆಗೆ ಬಲಿಯಾದ ಪೋಷಕರ ಮಕ್ಕಳು (ಹೊಸದಾಗಿ) ಯೂನಿವರ್ಸಿಟಿಯಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಕೋರ್ಸ್​ಗಳಿಗೆ ಅರ್ಜಿ ಗುಜರಾಯಿಸಿದ್ದರೆ ಅವರಿಂದಲೂ ಟ್ಯೂಶನ್ ಫೀ ತೆಗೆದುಕೊಳ್ಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿತ್ತು. ಇಂಥ ಶ್ಲಾಘನೀಯ ಕೀರ್ತಿ ಹೊಂದಿರುವ ಈ ಶೈಕ್ಷಣಿಕ ಸಂಸ್ಥೆಗೆ ಹಣದ ಕೊರತೆಯಾಗಿದೆಯೇ?

ರೂ. 16 ಕೋಟಿ ತೆರಿಗೆ ಬಾಕಿಯುಳಿಸಿಕೊಂಡ ರೇವಾ ಯೂನಿವರ್ಸಿಟಿ ಕ್ಯಾಂಪಸ್​ಗೆ ಬಿಬಿಎಮ್​ಪಿ ಅಧಿಕಾರಿಗಳು ಬೀಗ ಜಡಿದರು!
ರೇವಾ ವಿಶ್ವವಿದ್ಯಾಲಯ
TV9 Web
| Edited By: |

Updated on: Feb 01, 2022 | 10:48 PM

Share

ಬೆಂಗಳೂರು: ಬೆಂಗಳೂರಿನ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ರೇವಾ ವಿಶ್ವವಿದ್ಯಾಲಯ (Reva University) ಬೇಡದ ಕಾರಣಗಳಿಗೆ ಸುದ್ದಿಯಲ್ಲಿದೆ ಮಾರಾಯ್ರೇ. ವಿಷಯ ಏನು ಗೊತ್ತಾ? ವಿದ್ಯಾರ್ಥಿಗಳಿಂದ ಭಾರಿ ಮೊತ್ತದ ಫೀಸು ಕಟ್ಟಿಸಿಕೊಳ್ಳುವ ರೇವಾ ಯೂನಿವರ್ಸಿಟಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿ ಬಿ ಎಮ್ ಪಿ) (BBMP) ರೂ. 16 ಕೋಟಿ ತೆರಿಗೆ (tax dues) ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಬೇಗ ಚುಕ್ತಾ ಮಾಡುವಂತೆ ಬಿ ಬಿ ಎಮ್ ಪಿ ಪದೇಪದೆ ನೋಟೀಸ್ ಕಳಿಸದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಕೊನೆಗೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪಾಲಿಕೆ ಸಿಬ್ಬಂದಿ ರೇವಾ ವಿಶ್ವವಿದ್ಯಾಲದ ಮೇನ್ ಗೇಟ್ ಗೆ ಬೀಗ ಜಡಿದಿದ್ದಾರೆ. ಕಳೆದ ವರ್ಷ ತನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು, ಪೋಷಕರು ಅಥಾವಾ ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದರೆ ಆ ವಿದ್ಯಾರ್ಥಿಗಳ ಶೇಕಡ 100 ರಷ್ಟು ಟ್ಯೂಶನ್ ಫೀಯನ್ನು ಮನ್ನಾ ಮಾಡಿ ಮಾನವೀಯತೆಯನ್ನು ಪ್ರದರ್ಶಿಸಿದ್ದ ರೇವಾ ಯೂನಿವರ್ಸಿಟಿ ಅಷ್ಟು ದೊಡ್ಡ ಮೊತ್ತದ ತೆರಿಗೆ ಪಾವತಿಸದಿರುವುದು ಆಶ್ಚರ್ಯ ಹುಟ್ಟಿಸುತ್ತದೆ.

ಕೋವಿಡ್ ಪೀಡೆಗೆ ಬಲಿಯಾದ ಪೋಷಕರ ಮಕ್ಕಳು (ಹೊಸದಾಗಿ) ಯೂನಿವರ್ಸಿಟಿಯಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಕೋರ್ಸ್​ಗಳಿಗೆ ಅರ್ಜಿ ಗುಜರಾಯಿಸಿದ್ದರೆ ಅವರಿಂದಲೂ ಟ್ಯೂಶನ್ ಫೀ ತೆಗೆದುಕೊಳ್ಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿತ್ತು. ಇಂಥ ಶ್ಲಾಘನೀಯ ಕೀರ್ತಿ ಹೊಂದಿರುವ ಈ ಶೈಕ್ಷಣಿಕ ಸಂಸ್ಥೆಗೆ ಹಣದ ಕೊರತೆಯಾಗಿದೆಯೇ?

ಇದೇ ಹಿನ್ನೆಲೆಯಲ್ಲಿ ಟಿವಿ9 ಚ್ಯಾನೆಲ್ ನ ಬೆಂಗಳೂರು ವರದಿಗಾರೊಬ್ಬರು ರೇವಾ ವಿಶ್ವವಿದ್ಯಾಯಲದ ಉಪಕುಲಪತಿ ಡಾ ಎಮ್ ಧನಂಜಯ ಅವರನ್ನು ಸಂಪರ್ಕಿಸಿ ಮಾತಾಡಿದರು.

‘ನಾವು ತೆರಿಗೆ ಬಾಕಿ ಉಳಿಸಿಕೊಂಡಿರುವುದು ಸತ್ಯ ಮತ್ತು ಅದನ್ನು ಪಾವತಿ ಮಾಡದಿರಲು ನಾವೇನೂ ಹಟ ತೊಟ್ಟಿಲ್ಲ. ಆದರೆ, ಬಾಕಿಯಿರುವ ಮೊತ್ತದಲ್ಲಿ ಸ್ವಲ್ಪ ರಿಯಾಯಿತಿ ಕೇಳಿದ್ದೆವು. ಆ ಬಗ್ಗೆ ಬಿ ಬಿ ಎಮ್ ಪಿ ಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದ ನಮಗೆ ಆದರ ಅಧಿಕಾರಿಗಳು ಬಂದು ನಮ್ಮ ಯೂನಿವರ್ಸಿಟಿ ಕ್ಯಾಂಪಸ್ ಗೆ ಬೀಗ ಹಾಕಿ ಹೋಗಿರುವುದು ದಿಗ್ಭ್ರಮೆ ಮತ್ತು ಆಘಾತ ಮೂಡಿಸಿದೆ. ಬಾಕಿಯಿರುವ ತೆರಿಗೆ ಪಾವತಿಸುವುದಿಲ್ಲ ಅಂತ ನಾವು ಯಾವತ್ತೂ ಹೇಳಿಲ್ಲ. ಸ್ವಲ್ಪ ರಿಯಾಯಿತಿ ನೀಡಿ ಅಂತಷ್ಟೇ ನಾವು ಹೇಳಿದ್ದು,’ ಎಂದು ಡಾ ಎಮ್ ಧನಂಜಯ ಹೇಳಿದ್ದಾರೆ.

ಇದನ್ನೂ ಓದಿ:   BBMPಗೆ ಆಸ್ತಿ ತೆರಿಗೆ ವಂಚನೆ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್