BBMPಗೆ ಆಸ್ತಿ ತೆರಿಗೆ ವಂಚನೆ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

BBMPಗೆ ಆಸ್ತಿ ತೆರಿಗೆ ವಂಚನೆ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

ಸಾಧು ಶ್ರೀನಾಥ್​
|

Updated on:Feb 01, 2022 | 1:04 PM

ರೇವಾ ವಿಶ್ವವಿದ್ಯಾಲಯದ ಮುಖ್ಯ ಗೇಟ್ ಗೆ ಸಹ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ತೆರಿಗೆ ಪಾವತಿ ಮಾಡದ ಕಾರಣ ರೇವಾ ಯುನಿವರ್ಸಿಟಿಗೆ ಬೀಗ ಹಾಕಿದ ಪ್ರಸಂಗ ನಡೆದಿದೆ.

ಅಂದಾಜು 70 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್, ಮಾನ್ಯತಾ ಟೆಕ್ ಪಾರ್ಕ್​​​ನಿಂದ BBMP ಗೆ ಆಸ್ತಿ ತೆರಿಗೆ ವಂಚನೆ. ಅಧಿಕಾರಿಗಳಿಂದ ಮಾನ್ಯತಾ ಟೆಕ್ ಪಾರ್ಕ್ ಮುಟ್ಟುಗೋಲು. ಆಸ್ತಿ ತೆರಿಗೆ ಪಾವತಿಸದ ಕಾರಣ ಬಿಬಿಎಂಪಿ ಮುಟ್ಟುಗೋಲು. ಟೆಕ್​ ಪಾರ್ಕ್​​ನ (Manyata Tech Park) ಮುಖ್ಯ ಗೇಟ್​ಗೆ ಬೀಗ ಹಾಕಿದ ಅಧಿಕಾರಿಗಳು. ಯಲಹಂಕ ವಲಯದ ರೆವಿನ್ಯೂ ವಿಭಾಗದಿಂದ ಮುಟ್ಟುಗೋಲು. ನೋಟಿಸ್ ನೀಡಿದರು ತೆರಿಗೆ ಪಾವತಿ ಮಾಡದ ಕಾರಣ ಜಪ್ತಿ. ₹70 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಾನ್ಯತಾ ಟೆಕ್ ಪಾರ್ಕ್.

ರೇವಾ ವಿಶ್ವವಿದ್ಯಾಲಯದ ಮುಖ್ಯ ಗೇಟ್ ಗೆ ಸಹ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ತೆರಿಗೆ ಪಾವತಿ ಮಾಡದ ಕಾರಣ ರೇವಾ ಯುನಿವರ್ಸಿಟಿಗೆ ಬೀಗ ಹಾಕಿದ ಪ್ರಸಂಗ ನಡೆದಿದೆ. ರೇವಾ ವಿವಿ 16 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ.

ಇತ್ತೀಚೆಗೆ ಬೆಂಗಳೂರಿನ ಮಂತ್ರಿ ಮಾಲ್​ಗೆ ಸಹ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದರು:
ಬೆಂಗಳೂರು ನಗರದ ಪ್ರತಿಷ್ಠಿತ ಮಂತ್ರಿ ಮಾಲ್​ಗೆ (Mantri Mall) ಇತ್ತೀಚೆಗೆ ಮತ್ತೆ ಬೀಗ ಬಿದ್ದಿತ್ತು. ಬಿಬಿಎಂಪಿಗೆ ಸುಮಾರು 27 ಕೋಟಿ ತೆರಿಗೆ ಪಾವತಿಸದ ಹಿನ್ನೆಲೆ ಬೀಗ ಹಾಕಲಾಗಿತ್ತು. 3 ವರ್ಷದಿಂದ ಮಂತ್ರಿ ಮಾಲ್ ಬಿಬಿಎಂಪಿಗೆ ಒಟ್ಟು 27 ಕೋಟಿ ತೆರಿಗೆಯನ್ನು ಪಾವತಿಸಿಲ್ಲ. ಪದೇಪದೆ ನೋಟಿಸ್ ಜಾರಿ ಮಾಡಿದರೂ ತೆರಿಗೆ ಪಾವತಿಸಿಲ್ಲ. ಹೀಗಾಗಿ ಡಿಸೆಂಬರ್ 6 ಮತ್ತೆ ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳು ಮಾಲ್​ಗೆ ಬೀಗ ಜಡಿದಿದ್ದರು.

ಮಂತ್ರಿ ಮಾಲ್​ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದು ಅದು ಮೊದಲೇನಲ್ಲ. ಮೂರ್ನಾಲ್ಕು ಬಾರಿ ಬೀಗ ಹಾಕಿದ್ದಾರೆ. ಈ ವೇಳೆ ಮಾಲ್​ ಮಾಲೀಕರು ಸಮಯವನ್ನು ಕೇಳಿದ್ದರು. ತೆರಿಗೆ ಪಾವತಿಸದ ಹಿನ್ನೆಲೆ ಈ ಹಿಂದೆ ಅಂದರೆ ನವೆಂಬರ್ 15ಕ್ಕೆ ಅಧಿಕಾರಿಗಳು ಮಾಲ್​ಗೆ ಬೀಗ ಹಾಕಿದ್ದರು. ಹಿಂದೆ ಬೀಗ ಹಾಕಿದ್ದಾಗ 5 ಕೋಟಿ ತೆರಿಗೆ ಪಾವತಿಸಿದ್ದ ಮಾಲ್ ಮಾಲೀಕರು, ಬಳಿಕ ಬಾಕಿ ತೆರಿಗೆ ಪಾವತಿಗೆ ಸಮಯ ಕೇಳಿದ್ದರು. ಆಡಳಿತ ಮಂಡಳಿಗೆ ಕೊಟ್ಟ ಸಮಯಾವಕಾಶ ಮುಕ್ತಾಯಗೊಂಡಿದ್ದರಿಂದ ಬೀಗ ಹಾಕಲಾಗಿತ್ತು.

ಇದನ್ನೂ ಓದಿ:
ಸರ್ಕಾರಿ ಆಸ್ಪತ್ರೆಗೆ ಹೈಟೆಕ್‌ ‘ಚಿಕಿತ್ಸೆ’; ಪಾಳುಬಿದ್ದಂತಿದ್ದ ಸರ್ಕಾರಿ ಆಸ್ಪತ್ರೆ ಇಂದು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತಿದೆ!

ಇದನ್ನೂ ಓದಿ:
ಕಣ್ಣಳತೆಯಲ್ಲೇ ನಕಲಿ ಬೀಗದ ಕೈ ತಯಾರಿಸಿ ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ 13 ವರ್ಷದಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

Published on: Feb 01, 2022 12:51 PM