ಅಪ್ಪು ಸಮಾಧಿಗೆ ನಮಿಸಲು ಬೆಂಗಳೂರಿಗೆ ಬಂದ ಅಲ್ಲು ಅರ್ಜುನ್; ಪುನೀತ್ ಮನೆ ಮುಂದೆ ಫ್ಯಾನ್ಸ್ ದಂಡು
ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡುವ ಸಲುವಾಗಿ ಅಲ್ಲು ಅರ್ಜುನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಪ್ಪು ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಲಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಸಮಾಧಿಗೆ ನಮನ ಸಲ್ಲಿಸಲು ನಟ ಅಲ್ಲು ಅರ್ಜನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು (ಫೆ.3) ಬೆಳಗ್ಗೆ 11 ಗಂಟೆ ಸುಮಾರಿಗೆ ಅವರು ಖಾಸಗಿ ವಿಮಾನದಲ್ಲಿ ಹೈದರಾಬಾದ್ನಿಂದ ಹೊರಟಿದ್ದರು. 12 ಗಂಟೆಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಶಿವರಾಜ್ಕುಮಾರ್ ನಿವಾಸಕ್ಕೆ ತೆರಳಿ ನಂತರ ಅಲ್ಲಿಂದ ಪುನೀತ್ ರಾಜ್ಕುಮಾರ್ ಮನೆಗೆ ಅಲ್ಲು ಅರ್ಜುನ್ (Allu Arjun) ಭೇಟಿ ನೀಡಲಿದ್ದಾರೆ. ಅಪ್ಪು ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಲಿದ್ದಾರೆ. ನಂತರ ಪುನೀತ್ ರಾಜ್ಕುಮಾರ್ ಅವರ ಸಮಾಧಿ ( Puneeth Rajkumar Samadhi) ಸ್ಥಳಕ್ಕೆ ಬಂದು ಅಲ್ಲು ಅರ್ಜುನ್ ನಮನ ಸಲ್ಲಿಸಲಿದ್ದಾರೆ. ಅಪ್ಪು ನಿಧನರಾದ ಸುದ್ದಿ ತಿಳಿದಾಗ ಅವರು ಕಂಬನಿ ಮಿಡಿದಿದ್ದರು. ಪುನೀತ್ ಮಾಡಿದ ಸಾಧನೆ ಮತ್ತು ಅವರ ವ್ಯಕ್ತಿತ್ವವನ್ನು ಅಲ್ಲು ಅರ್ಜುನ್ ಸ್ಮರಿಸಿದ್ದರು. ಅವರಿಗೆ ಕರ್ನಾಟಕದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾಗಾಗಿ ತಮ್ಮ ನೆಚ್ಚಿನ ನಟನನ್ನು ನೋಡಲು ಪುನೀತ್ ರಾಜ್ಕುಮಾರ್ ಮನೆ ಮುಂದೆ ಅಲ್ಲು ಅರ್ಜುನ್ ಅಭಿಮಾನಿಗಳು ಜಮಾಯಿಸಿದ್ದಾರೆ. ಈ ಹಿಂದೆ ಅವರು ‘ಪುಷ್ಪ’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಗಲೂ ಖಾಸಗಿ ಹೋಟೆಲ್ ಮುಂಭಾಗದಲ್ಲಿ ಫ್ಯಾನ್ಸ್ ಕಿಕ್ಕಿರಿದು ಸೇರಿದ್ದರು.
ಇದನ್ನೂ ಓದಿ:
ಪುನೀತ್ ನಿವಾಸಕ್ಕೆ ಭೇಟಿ ನೀಡಲಿರುವ ಅಲ್ಲು ಅರ್ಜುನ್; ಹೇಗಿರಲಿದೆ ಇಂದಿನ ಅವರ ವೇಳಾಪಟ್ಟಿ?
ಅಣ್ಣಾವ್ರ ಮನೆ 2 ಭಾಗ ಆದಾಗ ಪಾರ್ವತಮ್ಮ ಹೇಳಿದ್ದೇನು? ಮುಖ್ಯವಾದ ವಿಚಾರ ತಿಳಿಸಿದ ರಾಘಣ್ಣ