ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಸಮಾಧಿಗೆ ನಮಿಸಿದ ಅಲ್ಲು ಅರ್ಜುನ್​; ಇಲ್ಲಿದೆ ವಿಡಿಯೋ

ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದ ಅಲ್ಲು ಅರ್ಜುನ್ ಅವರು ನೇರವಾಗಿ ಶಿವರಾಜ್​ಕುಮಾರ್​ ಅವರ ಮನೆಗೆ ಆಗಮಿಸಿದರು. ಆ ಬಳಿಕ ಪುನೀತ್​ ರಾಜ್​​ಕುಮಾರ್​ ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದರು.

TV9kannada Web Team

| Edited By: Rajesh Duggumane

Feb 03, 2022 | 2:47 PM

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರನ್ನು ಕಳೆದುಕೊಂಡಿದ್ದು ಕೋಟ್ಯಂತರ ಜನರಿಗೆ ನೋವು ತಂದಿದೆ. ಅವರ ಸಮಾಧಿ ದರ್ಶನ ಪಡೆಯೋಕೆ ಈಗಲೂ ಅಭಿಮಾನಿಗಳು ಬರುತ್ತಲೇ ಇದ್ದಾರೆ. ಪುನೀತ್​ಗೆ ನಮನ ಸಲ್ಲಿಸುವ ಉದ್ದೇಶದಿಂದ ಅಲ್ಲು ಅರ್ಜುನ್ (Allu Arjun)​ ಅವರು ಇಂದು (ಫೆಬ್ರವರಿ 3) ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದ ಅವರು ನೇರವಾಗಿ ಶಿವರಾಜ್​ಕುಮಾರ್​ ಅವರ ಮನೆಗೆ ಆಗಮಿಸಿದರು. ಆ ಬಳಿಕ ಪುನೀತ್​ ರಾಜ್​​ಕುಮಾರ್​ ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದರು. ನಂತರ ನೇರವಾಗಿ ಅವರು ತೆರಳಿದ್ದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್​ ಸಮಾಧಿಗೆ (Puneeth Rajkumar Samadhi). ಅಲ್ಲಿ ಅಪ್ಪುಗೆ ಪುಷ್ಪ ನಮನ ಸಲ್ಲಿಸಿರು ಅವರು. ಆ ಬಳಿಕ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಸಮಾಧಿಗೂ ಅಲ್ಲು ಅರ್ಜುನ್​ ನಮಿಸಿದರು. 

ಇದನ್ನೂ ಓದಿ: Allu Arjun: ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿದ ಅಲ್ಲು ಅರ್ಜುನ್; ಇಲ್ಲಿವೆ ಫೋಟೋಗಳು

ಪುನೀತ್​ಗೆ ಅಲ್ಲು ಅರ್ಜುನ್​ ಪುಷ್ಪ ನಮನ; ಅಪ್ಪು ಜತೆ ಕೊನೇ ಬಾರಿ ಮಾತನಾಡಿದ್ದನ್ನು ನೆನಪಿಸಿಕೊಂಡ ಸ್ಟೈಲಿಷ್​ ಸ್ಟಾರ್​

Follow us on

Click on your DTH Provider to Add TV9 Kannada