‘ಎರಡು ಸಿನಿಮಾ ಹಿಟ್ ಆದ್ಮೇಲೆ, ಡೈರೆಕ್ಟರ್ ಬಗ್ಗೆ ಮಾತನಾಡೋಕೆ ಆಗಲ್ಲ’; ಡಾರ್ಲಿಂಗ್ ಕೃಷ್ಣ ಬಗ್ಗೆ ಮಿಲನಾ ಮಾತು
ಹಲವು ಕಡೆಗಳಲ್ಲಿ ಸಿನಿಮಾ ಹೌಸ್ಫೌಲ್ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ‘ಲವ್ ಮಾಕ್ಟೇಲ್ 3’ ಮಾಡಬೇಕು ಎನ್ನುವ ಕೋರಿಕೆ ಎಲ್ಲ ಕಡೆಗಳಿಂದಲೂ ಬರುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಮಿಲನಾ ನಾಗರಾಜ್ ತಿಳಿಸಿದ್ದಾರೆ
‘ಲವ್ ಮಾಕ್ಟೇಲ್ 2’ ಸಿನಿಮಾ (Love Mocktail 2) ಹಿಟ್ ಆಗಿದೆ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಡಾರ್ಲಿಂಗ್ ಕೃಷ್ಣ (Darling Krishna) ಅವರಿಗೆ ಮತ್ತೊಂದು ಗೆಲುವು ಸಿಕ್ಕಿದೆ. ಈ ಚಿತ್ರವನ್ನು ಮಿಲನಾ ನಾಗರಾಜ್ (Milana Nagaraj) ಅವರು ನಿರ್ಮಾಣ ಮಾಡಿದ್ದಾರೆ. ಅವರಿಗೂ ಈ ಚಿತ್ರದ ಮೂಲಕ ದೊಡ್ಡ ಗೆಲುವು ಸಿಕ್ಕಂತಾಗಿದೆ. ಹಲವು ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ‘ಲವ್ ಮಾಕ್ಟೇಲ್ 3’ ಮಾಡಬೇಕು ಎನ್ನುವ ಕೋರಿಕೆ ಎಲ್ಲ ಕಡೆಗಳಿಂದಲೂ ಬರುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಮಿಲನಾ ನಾಗರಾಜ್ ತಿಳಿಸಿದ್ದಾರೆ. ‘ಕೃಷ್ಣ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ನೀಡುತ್ತಿದ್ದಾರೆ. ಆ ಬಗ್ಗೆ ಏನು ಹೇಳ್ತೀರಾ’ ಎನ್ನುವ ಪ್ರಶ್ನೆ ಮಿಲನಾಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘2 ಸಿನಿಮಾ ಹಿಟ್ ಆದ್ಮೇಲೆ, ಡೈರೆಕ್ಟರ್ ಬಗ್ಗೆ ಏನೂ ಮಾತನಾಡೋಕೆ ಆಗಲ್ಲ’ ಎಂದಿದ್ದಾರೆ. ಈ ಮೂಲಕ ಪತಿ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರನ್ನು ಹೊಗಳಿದ್ದಾರೆ.
ಇದನ್ನೂ ಓದಿ: Love Mocktail 2 Review: ಮತ್ತಷ್ಟು ಲವ್, ಮತ್ತಷ್ಟು ರಂಜನೆ, ಮತ್ತೆ ಮಿಲನಾ; ಅಂತ್ಯವಾಗಿದ್ದ ಕಥೆಗೆ ಸಿಕ್ಕಿದೆ ಹೊಸ ಆದಿ